Advertisement

ಅತ್ಯಾಚಾರಿಗೆ ‘ಕಪಾಳಮೋಕ್ಷ’ ಶಿಕ್ಷೆ ವಿಧಿಸಿದ ಪಂಚಾಯತ್

08:21 PM Feb 19, 2021 | Team Udayavani |

ಉತ್ತರ ಪ್ರದೇಶ  :  ಅತ್ಯಾಚಾರಿಗೆ ಸ್ಥಳೀಯ ಪಂಚಾಯತಿಯೊಂದು ಕಪಾಳಮೋಕ್ಷದಂತಹ ಶಿಕ್ಷೆ ವಿಧಿಸಿರುವ ಘಟನೆ ಬಿಜ್ನೋರ್ ಜಿಲ್ಲೆಯ ನೆಹತೌರ್ ಗ್ರಾಮದಲ್ಲಿ ನಡೆದಿದೆ.

Advertisement

16 ವರ್ಷದ ಕಾಮಿಯೋರ್ವ 8 ವರ್ಷದ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಪ್ರಕರಣದ ಇತ್ಯರ್ಥಕ್ಕೆ ಮುಂದಾದ ಸ್ಥಳೀಯ ಪಂಚಾಯತಿ ಆರೋಪಿಗೆ ನಾಲ್ಕು ಕಪಾಳಮೋಕ್ಷ ಹಾಗೂ 1 ಲಕ್ಷ ರೂ. ದಂಡ ವಿಧಿಸಿದೆ.

ಅತ್ಯಾಚಾರ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗ್ರಾಮಕ್ಕೆ ತೆರಳಿದ ಪೊಲೀಸರಿಗೆ ಗ್ರಾಮಸ್ಥರಿಂದ ಹಾಗೂ ದೌರ್ಜನ್ಯಕ್ಕೊಳಗಾದ ಬಾಲಕನ ಕುಟುಂಬದಿಂದ ಸಹಕಾರ ದೊರೆತಿಲ್ಲ. ಬಾಲಕನ ಕುಟುಂಬದವರು ಪ್ರಕರಣ ದಾಖಲಿಸಲು ಮುಂದೆ ಬರುತ್ತಿಲ್ಲ. ನಮಗೆ ಸಿಕ್ಕ ಮಾಹಿತಿ ಆಧಾರದ ಮೇಲೆ ತನಿಖೆ ನಡಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ಹಿನ್ನೆಲೆ : ಇದೆ 14 ರಂದು ಆರೋಪಿ ತನ್ನ ಸಂಬಂಧಿಕರ ಬಾಲಕನನ್ನು ಆಮಿಷವೊಡ್ಡಿ ಊರಿನ ಹೊರಭಾಗಕ್ಕೆ ಕರೆದುಕೊಂಡು ಹೋಗಿದ್ದ. ನಿರ್ಜನ ಪ್ರದೇಶದಲ್ಲಿ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಅದೇ ದಾರಿಯಲ್ಲಿ ತೆರಳುತ್ತಿದ್ದ ಗ್ರಾಮದ ಕೆಲ ಜನರಿಗೆ ಬಾಲಕನ ಕೂಗಾಟ ಕೇಳಿಸಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ನಂತರ ಗ್ರಾಮಸ್ಥರು ಸಂತ್ರಸ್ತ ಬಾಲಕನನ್ನು ನೂರ್ಪುರನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next