Advertisement

ಜಮೀನಿಗೆ ನುಗ್ಗಿದ ಕಾಲುವೆಯ ಕಲುಷಿತ ನೀರು: ಜಮೀನಿನಲ್ಲಿ ಬಿಜೆಪಿ ಬಾವುಟ ಹಾಕಿ ಪ್ರತಿಭಟನೆ

05:28 PM Aug 28, 2022 | Team Udayavani |

ಯಳಂದೂರು: ತಾಲೂಕಿ ವೈ,ಕೆ.ಮೋಳೆ ಗ್ರಾಮದಲ್ಲಿ ಕಲುಷಿತ ನೀರು ರೈತರ ಜಮೀನಿಗೆ ನುಗ್ಗಿದ್ದು ಈ ಬಗ್ಗೆ ಸಾಕಷ್ಟ ಬಾರಿ ಅಧಿಕಾರಿಗಳಿಗೆ ದೂರು ನೀಡಿದರು ಯಾವುದೇ ಪ್ರಯೋಜನ ವಾಗಿಲ್ಲ ಎಂದು ಆರೋಪಿಸಿ ಶನಿವಾರ ಗ್ರಾಮಸ್ಥರೊಬ್ಬರು ಈ ಜಮೀನಿನಲ್ಲಿ ಬಿಜೆಪಿ ಪಕ್ಷದ ಬಾವುಟವನ್ನು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.

Advertisement

ಬಿಜೆಪಿ ಜಿಲ್ಲಾ ದಲಿತ ಮೋರ್ಚಾ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಅವರೇ ಈ ವಿನೂತನ ಪ್ರತಿಭಟನೆ ಮೂಲಕ ಗಮನ ಸೆಳೆದವರು. ಗ್ರಾಮದ ಕಲುಷಿತ ನೀರು ಬಂದು ಜಮೀನಿಗೆ ನುಗ್ಗಿದ ಪರಿಣಾಮ ಅಲ್ಲೇ ನೀರು ನಿಲುಗಡೆ ಯಾಗುವುದರಿಂದ ಬೆಳೆಯನ್ನು ಬೆಳೆಯಲು ಭೂಮಿ ಯೋಗ್ಯತೆ ಕಳೆದುಕೊಳ್ಳುತ್ತಿದೆ. ಮಣ್ಣಿನ ಫ‌ಲವತ್ತತೆ ಕಡಿಮೆಯಾಗುತ್ತಿದೆ. ರೈತರು ಸಹ ಜಮೀನಿಗೆ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಈ ಹಿಂದೆ ಈ ನೀರು ಉಪ್ಪಿನಮೋಳೆ ಕೆರೆಗೆ ಸೇರುತ್ತಿತ್ತು, ಆದರೆ ಕಾಲುವೆ ಈಗ ಮುಚ್ಚಿದ್ದು, ಇದನ್ನು ದುರಸ್ತಿ ಮಾಡಿಸದೆ ಹಣ ಪಡೆದುಕೊಂಡು ಅಧಿಕಾರಿಗಳು ಸುಮ್ಮನಿದ್ದಾರೆ. ಇದು ಉಪ್ಪಿನಮೋಳೆ ಕೆರೆಗೆ ಹೋಗುವ ನೀರಿನ ಕಾಲುವೆಯಾಗಿದೆ.

ಈ ಬಗ್ಗೆ ಅಂಬಳೆ ಪಂಚಾಯಿತಿ ಅಭಿವೃದ್ಧಿ ತಾಪಂ ಇಒ, ಸಂತೇಮರಹಳ್ಳಿ ನೀರಾವರಿ ಇಲಾಖೆ ಅಭಿಯಂತರಿಗೆ ಎಷ್ಟೇ ಮನವಿ ಸಲ್ಲಿಸಿದರು ಗಮನ ನೀಡುತ್ತಿಲ್ಲ. ಅನ್ನ ನೀಡುತ್ತಿರುವ ರೈತರ ಬಾಳು ಹಾಳಾಗುತ್ತಿದೆ. ಸಾಲ ಮಾಡಿ ಬೆಳೆ ಬೆಳೆದರೂ ಸಹ ಅದು ಸರಿಯಾದ ರೀತಿಯಲ್ಲಿ ಕೈ ಸೇರದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂಬುದು ಇವರ ದೂರು.

ಧ್ವಜ ನೆಟ್ಟು ಪ್ರತಿಭಟನೆ: ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಶಾಸಕರು, ಬಿಜೆಪಿ ಉಸ್ತುವಾರಿ ಸಚಿವರು, ಸರ್ಕಾರವೇ ಬಿಜೆಪಿಯದ್ದಾಗಿದೆ. ಆದರೆ ಇಂಥ ಒಂದು ಸಣ್ಣ ಸಮಸ್ಯೆಯನ್ನು ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಆಡಳಿತ ಯಂತ್ರ ಸೋತಿವೆ. ನಾನು ಪಕ್ಷದವನೇ ಆಗಿದ್ದು ಮನನೊಂದು ಪಕ್ಷದ ಬಾವುಟವನ್ನು ಇಲ್ಲಿ ನೆಟ್ಟು ಪ್ರತಿಭಟನೆ ನಡೆಸುತ್ತಿದ್ದೇನೆ. ಈಗಲಾದರೂ ಈ ಸಮಸ್ಯೆಗೆ ಸಂಬಂಧಪಟ್ಟವರು ಕ್ರಮ ವಹಿಸಬೇಕು ಎಂದು ಮಲ್ಲಿಕಾರ್ಜುನಸ್ವಾಮಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next