Advertisement

ನ್ಯಾಯಕ್ಕಾಗಿ ಗ್ರಾಮ ಮಟ್ಟದಲ್ಲಿ ಹೋರಾಟ: ಯು.ಟಿ. ಖಾದರ್‌

09:56 PM Oct 10, 2020 | mahesh |

ಸುಳ್ಯ: ಉತ್ತರ ಪ್ರದೇಶದ ಯುವತಿ ಮೇಲೆ ನಡೆದ ಘಟನೆ ಕ್ರೂರ ವಾದದು. ಅನ್ಯಾಯವಾದ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟ ದಲ್ಲಿ ಹೋರಾಟ ನಡೆಸಲಾಗುವುದು ಎಂದು ಶಾಸಕ ಯು.ಟಿ. ಖಾದರ್‌ ಹೇಳಿದರು.

Advertisement

ವಿವಿಧ ರಾಜಕೀಯ ಪಕ್ಷಗಳು, ದಲಿತ ಸಂಘಟನೆಗಳು ಹಾಗೂ ಸಮಾನ ಮನಸ್ಕರ ಸಹಯೋಗದಲ್ಲಿ ಹತ್ರಾಸ್‌ನಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ವಿರುದ್ಧ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಉತ್ತರ ಪ್ರದೇಶದ ಆ ಘಟನೆಯ ಬಗ್ಗೆ ಬಿಜೆಪಿ ಯಾಕೆ ಮಾತನಾಡುವುದಿಲ್ಲ ಎಂದ ಖಾದರ್‌ ಅನ್ಯಾಯದ ವಿರುದ್ಧ ಕಾಂಗ್ರೆಸ್‌ ನಿರಂತರ ಹೋರಾಟ ನಡೆಸಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಮಾತನಾಡಿ, ಕೇಂದ್ರದಲ್ಲಿ ಮೋದಿ, ಉತ್ತರ ಪ್ರದೇಶದಲ್ಲಿ ಯೋಗಿ ಸರಕಾರ ಜನಪರ ಕಾರ್ಯಕ್ರಮ ನೀಡಿಲ್ಲ. ಜನರಿಗೆ ರಕ್ಷಣೆಯನ್ನೂ ನೀಡಿಲ್ಲ ಎಂದರು.

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಹತ್ರಾಸ್‌ನಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಹತ್ಯೆಯನ್ನು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಗೊಳಪಡಿಸಬೇಕು ಎಂದು ಹೇಳಿದರು.

ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತ ನಾಡಿ, ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗ ಕಾಮುಕರನ್ನು ಸಾರ್ವಜನಿಕ ಸ್ಥಳ ದಲ್ಲಿ ಗಲ್ಲು ಶಿಕ್ಷೆಗೆ ಒಳಪಡಿಸುವ ಕಾನೂನು ಬರಲಿ ಎಂದು ಒತ್ತಾಯಿಸೋಣ ಎಂದರು.

Advertisement

ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಮಿಥುನ್‌ ರೈ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಶಾಲೆಟ್‌ ಪಿಂಟೋ, ಕೆಪಿಸಿಸಿ ಮಾಜಿ ಸದಸ್ಯ ರಾದ ಡಾ| ರಘು, ಭರತ್‌ ಮುಂಡೋಡಿ, ಎಂ.ವೆಂಕಪ್ಪ ಗೌಡ, ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಧನಂಜಯ ಅಡ³ಂಗಾಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌. ಜಯಪ್ರಕಾಶ್‌ ರೈ, ಜೆಡಿಎಸ್‌ ತಾಲೂಕು ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಕಾರ್ಮಿಕ ಮುಖಂಡ ಕೆ.ಪಿ.ಜಾನಿ, ಅಂಬೇಡ್ಕರ್‌ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ, ಆನಂದ ಬೆಳ್ಳಾರೆ, ಪಿ.ಸಿ.ಜಯರಾಮ್‌, ಜಿ.ಕೆ. ಹಮೀದ್‌, ಎಸ್‌. ಸಂಶುದ್ದೀನ್‌, ರಾಜಾರಾಮ್‌ ಭಟ್‌, ಮಹಮ್ಮದ್‌ ಕುಂಞಿ ಗೂನಡ್ಕ, ಶರೀಫ್‌ ಕಂಠಿ, ಅನಿಲ್‌ ರೈ ಬೆಳ್ಳಾರೆ, ವಿಜೇಶ್‌ ಹಿರಿಯಡ್ಕ, ಸುಧೀರ್‌ ರೈ ಮೇನಾಲ, ನಂದರಾಜ್‌ ಸಂಕೇಶ, ಶ್ರೀಹರಿ ಕುಕ್ಕುಡೇಲು, ವಿಶ್ವನಾಥ ರೈ ಕಳಂಜ, ತಾ.ಪಂ. ಸದಸ್ಯ ತೀರ್ಥರಾಮ ಜಾಲೂÕರು, ಅಬ್ದುಲ್‌ ಗಫ‌ೂರ್‌, ಅಶೋಕ್‌ ನೆಕ್ರಾಜೆ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನೆ, ರಸ್ತೆ ತಡೆ
ಸುಳ್ಯ ಹಳೆಗೇಟು ಪೆಟ್ರೋಲ್‌ ಪಂಪ್‌ ಬಳಿ ಮೆರವಣಿಗೆಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಚಾಲನೆ ನೀಡಿದರು. ಬಳಿಕ ಜ್ಯೋತಿ ವೃತ್ತದ ಮೂಲಕ ನಗರದ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಗಾಂಧಿನಗರದ ವರೆಗೆ ಸಾಗಿ ಹಳೆ ಬಸ್‌ ನಿಲ್ದಾಣದಲ್ಲಿ ಸಮಾವೇಶಗೊಂಡು ಪ್ರತಿಭಟನೆ ಸಭೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next