Advertisement

ಗ್ರಾಪಂ ನೌಕರರ ಬೇಡಿಕೆ ಈಡೇರಿಸಿ

11:43 AM Sep 18, 2019 | Team Udayavani |

ಹಾವೇರಿ: ಗ್ರಾಪಂ ನೌಕರರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಸಿಐಟಿಯು ಸಂಯೋಜಿತ ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗ್ರಾಪಂ ನೌಕರರು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

Advertisement

ಈಗಾಗಲೇ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಯವರು ಎಲ್ಲ ನೌಕರರ ಸೇವಾ ನಿಯಮಾವಳಿಗಳನ್ನು ಸಿ ಮತ್ತು ಡಿ ದರ್ಜೆ ಮಾಡಲು ಒಪ್ಪಿಕೊಂಡಿದ್ದು ಕೂಡಲೇ ಮಂಜೂರಾತಿ ನೀಡಬೇಕು.ಎಲ್ಲ ನೌಕರರಿಗೆ ಸೆಪ್ಟೆಂಬರ್‌ ತಿಂಗಳಿನಿಂದ ಇಎಫ್‌ಎಂಎಸ್‌ ಮೂಲಕ ಪ್ರತಿ ತಿಂಗಳ ವೇತನ ನೀಡಬೇಕು. 6ರಿಂದ 20 ತಿಂಗಳಿನಿಂದ ಬಾಕಿಯಿರುವ ವೇತನವನ್ನು ಸ್ಥಳೀಯ ಸಂಪನ್ಮೂಲದ ಶೇ. 40, 14ನೇ ಹಣಕಾಸು ನಿಧಿಯಿಂದ ಶೇ. 10ರಷ್ಟನ್ನು ಪಾವತಿಸಲು ರಾಜ್ಯ ಸರ್ಕಾರದ ಆದೇಶವಿದ್ದರೂ ನೌಕರರಿಗೆ ಪಾವತಿಸಿಲ್ಲ. ಕೂಡಲೇ ವೇತನ ಪಾವತಿಸಬೇಕು. ಎಂ.ಎಸ್‌. ಸ್ವಾಮಿ ವರದಿ ಜಾರಿಗೊಳಿಸಬೇಕು ಎಂದು ಗ್ರಾಪಂ ನೌಕರರು ಒತ್ತಾಯಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ವಿ.ಕೆ. ಬಾಳಿಕಾಯಿ, ಪ್ರಧಾನ ಕಾರ್ಯದರ್ಶಿ ಜಗದೀಶ ಕೋಟಿ, ರಾಜ್ಯ ಉಪಾಧ್ಯಕ್ಷ ಬಿ.ಐ. ಈಳಗೇರ, ಸಿಐಟಿಯು ಸಂಚಾಲಕ ವಿನಾಯಕ ಕುರುಬರ, ಪರಮೇಶ ಪುರದ, ಮಹಾಂತೇಶ ಎಲಿ, ಬಸವರಾಜ ಬೋವಿ, ಅಂದಾನೆಪ್ಪ ಹೆಬಸೂರ ಇತರರು ಪ್ರತಿಭಟನೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next