ನವ ದೆಹಲಿ : ಒಂದು ಕಾಲದಲ್ಲಿ ಟೆಲಿಕಾಂ ನೆಟ್ ವರ್ಕ್ ನಲ್ಲಿ ಅಗ್ರ ಪಂಕ್ತಿಯಲ್ಲಿ ಇದ್ದ ವೊಡಾಫೋನ್ ಹಾಗೂ ಐಡಿಯಾ ಈಗ ನಷ್ಟವನ್ನು ಅನುಭವಿಸುತ್ತಿದೆ. ಆರ್ಥಿಕ ಬಿಕ್ಕಟ್ಟಿನಲ್ಲಿರುವ ಟೆಲಿಕಾಂ ಸಂಸ್ಥೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೆರವು ಸಿಗುವ ಸಾಧ್ಯತೆಯ ಬಗ್ಗೆ ತಿಳಿಸಿದೆ.
ವೊಡಾಫೋನ್ ಹಾಗೂ ಐಡಿಯಾ ಕಂಪಪೆನಿಗಳು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವಲ್ಲಿ ಕೇಂದ್ರ ಸರ್ಕಾರ ಆಸರೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದೆ.
ಇದನ್ನೂ ಓದಿ : ಕೋವಿಡ್ : ಮನೆಮನೆಗೆ ತೆರಳಿ ಲಸಿಕೆ ನೀಡಿಯೆಂದು ಆದೇಶಿಸಲು ಸಾಧ್ಯವಿಲ್ಲ : ಸುಪ್ರೀಂ ಅಭಿಪ್ರಾಯ
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸ್ಥೆಯ ಅಧ್ಯಕ್ಷ ಹಿಮಾಂಶು ಕಪಾನಿಯಾ, 2020-21 ನೇ ಆರ್ಥಿಕ ವರ್ಷದಲ್ಲಿ ಅಸಮರ್ಥನೀಯ ಶುಲ್ಕ ನಿಗದಿ ಹಾಗೂ ಅತಿಯಾದ ಸ್ಪರ್ಧೆಯ ನಡುವೆ ಕಾರ್ಯಾಚರಣೆಯಲ್ಲಿ ನಿರಂತರವಾಗಿ ಸವಾಲು ಎದುರಿಸಲಾಗಿದೆ. ಬೃಹತ್ ಹೂಡಿಕೆಯಲ್ಲಿ ನ್ಯಾಯೋಚಿತ ಲಾಭ ಗಳಿಸುವ ಯತ್ನಗಳನ್ನು ಸರ್ಕಾರ ಬೆಂಬಲಿಸುವ ವಿಶ್ವಾಸವಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಸಂಸ್ಥೆಯ ಅಧ್ಯಕ್ಷರಾಗಿದ್ದ, ಕುಮಾರ ಮಂಗಲಂ ಬಿರ್ಲಾ ಕಾರ್ಯ ನಿರ್ವಾಹಕೇತರ ಅಧ್ಯಕ್ಷ ಹುದ್ದೆಯಿಂದ ಹೊರಗೆ ಬಂದ ಬಳಿಕ ವಿಐಎಲ್ ಆಡಳಿತ ಮಂಡಳಿಯು ಕಪಾನಿಯಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿಕೊಂಡಿತ್ತು.
ಇದನ್ನೂ ಓದಿ : ಸಾವಯವ ಕೃಷಿಯಲ್ಲಿ ಯಶಸ್ಸು ಕಂಡ ಸಂಪೆಕಟ್ಟೆಯ ಮಾದರಿ ಕೃಷಿಕ ಗಣಪತಿ ಕೆ.ಎನ್