Advertisement

Viksit Bharat Sankalp Yatra; ಮುದ್ರಾ ಫಲಾನುಭವಿಗಳ ಜತೆ ಪ್ರಧಾನಿ ಮೋದಿ ಸಂವಾದ

05:19 PM Dec 09, 2023 | Team Udayavani |

ಚೇಳೂರು:ಗ್ರಾಮದ ಸಿ ಆರ್ ಟಿ ಸಮುದಾಯ ಭವನದಲ್ಲಿ ಜನಸಂಕಲ್ಪ ವಿಕಸಿತ ಭಾರತ ಯಾತ್ರೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಅಡಿಯಲ್ಲಿ ಪಡೆದ ಫಲಾನುಭವಿ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಯವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

Advertisement

ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖೇಶ್ ಎಂಬುವರು ಮುದ್ರಾ ಯೋಜನೆ ಅಡಿಯಲ್ಲಿ ಬ್ಯಾಂಕಿನಿಂದ 4,50,000 ರೂಗಳನ್ನು ಪಡೆದುಕೊಂಡಿದ್ದು ಅವರೊಂದಿಗೆ ನೇರವಾಗಿ ಮೋದಿಯವರು ಮಾತನಾಡಿದರು. ಈ ಯೋಜನೆಯಿಂದ ನಿಮ್ಮಗಳಿಗೆ ಯಾವ ರೀತಿಯ ಅನುಕೂಲಗಳು ಆಗಿದೆ ಎಂದು ಮೋದಿಯವರು ಕೇಳಿದರು.

ಫಲಾನುಭವಿ ಮುಕೇಶ್ ಮಾತನಾಡಿ ಈ ಯೋಜನೆ ಉತ್ತಮವಾದ ಯೋಜನೆಯಾಗಿದೆ.ಇದರಿಂದ ಸಹಾಯ ಪಡೆದು ನಾವು ಮತ್ತೊಬ್ಬರಿಗೂ ಸಹಾಯ ಮಾಡಲು ಅನುಕೂಲವಾಗುತ್ತದೆ. ಇಂತಹ ಮಹತ್ತರವಾದ ಯೋಜನೆಯಿಂದ ಬಹಳ ಅನುಕೂಲವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಬ್ಯಾಂಕಿನಿಂದ ಸಿಗುವ ಪ್ರಧಾನಮಂತ್ರಿ ಮುದ್ರಾ ಯೋಜನೆ, ಸುಕನ್ಯಾಅಭಿವೃದ್ಧಿ, ಜನ್ ದನ್, ಸುರಕ್ಷಾ ಭಿಮಾ ಯೋಜನೆ, ಜೀವನ್ ಜ್ಯೋತಿ ಭೀಮಾ ಯೋಜನೆ,ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಉಚಿತ ಉಜ್ವಲ ಗ್ಯಾಸ್ ಯೋಜನೆ, ಪ್ರಧಾನಮಂತ್ರಿಯ ಜನ ಔಷಧಿ, ಆಯುಷ್ಮಾನ್ ಭಾರತ್, ರೈತರ ಕಲ್ಯಾಣ, ಆಹಾರ ಭದ್ರತೆಗಳು, ಆತ್ಮ ನಿರ್ಭರ ಭಾರತದ ಬೆಳವಣಿಗೆಗಳ ಯೋಜನೆ ಬಗ್ಗೆ ಹಾಗೂ ಸಾರ್ವಜನಿಕರ ಹಿತ ರಕ್ಷಣೆಯ ಹಲವು ಯೋಜನೆಗಳಿಗೆ ಬಗ್ಗೆ ಇಲ್ಲಿಗೆ ಬಂದಿದ್ದ ಅಧಿಕಾರಿಗಳಿಂದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲಾಯಿತು.

ಇಂತಹ ಹಲವಾರು ಯೋಜನೆಯನ್ನು ಸರ್ಕಾರ ನೀಡುತ್ತಾದೆ ಇದರ ಸದುಪಯೋಗವನ್ನು ಸಾರ್ವಜನಿಕರು ಹಾಗೂ ಅರ್ಹ ಫಲಾನುಭವಿಗಳು ಪಡೆಯುವುದರಿಂದ ತಮ್ಮಗಳ ಆರ್ಥಿಕ ಜೀವನ ಮಟ್ಟ ಹಾಗೂ ಇನ್ನಿತರ ಸೌಲಭ್ಯಗಳು ಪಡೆದುಕೊಳ್ಳಬಹುದು ಎಂದು ಬಂದಿದ್ದ ಅಧಿಕಾರಿಗಳು ತಿಳಿಸಿದರು.

Advertisement

ನೋಡಲ್ ಐಎಎಸ್ ಅಧಿಕಾರಿ ಅಗರವಾಲ್ ದೆಹಲಿಯ ಪ್ರತಿನಿಧಿಯಾಗಿ ಆಗಮಿಸಿ ಮಾತನಾಡಿ ಸರ್ಕಾರವು ಹಲವು ಮಹತ್ತರವಾದ ಯೋಜನೆಗಳು ದೇಶದ ಜನರ ಹಿತಕ್ಕಾಗಿ ತಂದಿದೆ ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕಾಗಿದೆ ಇದಕ್ಕೆ ಸಂಬಂಧಪಟ್ಟವರಿಗೆ ಸೂಕ್ತವಾದ ದಾಖಲೆಗಳನ್ನು ನೀಡಿ ಪಡೆಯಬಹುದಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಉಜ್ವಲ ಉಚಿತ ಗ್ಯಾಸ್ ಯೋಜನೆ ಅಡಿಯಲ್ಲಿ ಸಿಲೆಂಡರ್ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಗಮ್ಮ, ಸಂಸದ ಜಿಎಸ್ ಬಸವರಾಜು, ಶಾಸಕ ಸುರೇಶ್ ಗೌಡ್, ವಿಧಾನ ಪರಿಷತ್ ಸದಸ್ಯ ನವೀನ್ ಕುಮಾರ್, ಎಲ್ಪಿಜಿಯ ಸೀನಿಯರ್ ಏರಿಯಾ ಮ್ಯಾನೇಜರ್ ಹರಿಕೃಷ್ಣನ್, ಮುಖಂಡರುಗಳಾದ ಹೆಬ್ಬಕ ರವಿಶಂಕರ್, ದಿಲೀಪ್ ಕುಮಾರ್, ಚಂದ್ರಶೇಖರ್, ಬಾಬು, ಭೈರಪ್ಪ,ನಬಾಡ್ ಬ್ಯಾಂಕಿನ ಅಧಿಕಾರಿಗಳು, ಬ್ಯಾಂಕುಗಳ ಅಧಿಕಾರಿಗಳು, ಸಿಬ್ಬಂದಿಗಳು ಹಲವು ಯೋಜನೆಗಳ ಅಧಿಕಾರಿಗಳು, ಸಿಬ್ಬಂದಿಗಳು ಗ್ರಾಮ ಪಂಚಾಯತಿ ಸದಸ್ಯರು, ಸ್ವಯಂಸೇವಾ ಪ್ರತಿನಿಧಿಗಳು, ಹಲವು ಸಂಘಗಳ ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು

Advertisement

Udayavani is now on Telegram. Click here to join our channel and stay updated with the latest news.

Next