ಮುಂಬಯಿ: ವಿಕ್ರೋಲಿಯ ಮೆಡಿಕೋಸ್ ಅಸೋಸಿಯೇಶನ್ ವತಿಯಿಂದ ವಾರ್ಷಿಕ ವೈಜ್ಞಾನಿಕ ಸಮಾವೇಶವು ಎ. 14ರಂದು ಹೀರಾನಂದಾನಿಯ ಮೆಕ್ಯುಹಾ ಫ್ಯಾನ್ಸ್ ಹೊಟೇಲ್‌ನ ಸಭಾಗೃಹದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಶಾಸಕ ಸುನೀಲ್ ರಾವುತ್ ಅವರು ಆಗಮಿಸಿ ಸಮಾವೇಶಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಹಿಂದುಜಾ ಆಸ್ಪತ್ರೆಯ ಪ್ರಸಿದ್ಧ ವೈದ್ಯ ಡಾ| ಅಶೋಕ್ ಮಾನ್ಸೂರ್ ಅವರು ಸಂಸ್ಥೆಯ ಕ್ಷಯ ರೋಗದ ಜಾಗೃತಿ ಪತ್ರ
ವನ್ನು ಬಿಡುಗಡೆಗೊಳಿಸಿ ಸಾಮಾನ್ಯ ಜನರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಅಸೋಸಿ ಯೇಶನ್‌ನ ಕಾರ್ಯಕರ್ತರು ತೊಡಬೇಕುಎಂದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸುನೀಲ್ ರಾವುತ್, ವಿಕ್ರೋಲಿಯ ಮೆಡಿಕೋ ಅಸೋಸಿಯೇಶನ್ ಮಾಡುತ್ತಿರುವ ಸಮಾಜ ಸೇವೆ ಅನುಕರಣೀಯವಾಗಿದೆ. ಇದರ ಪ್ರಯೋಜನ ಸಾಮಾನ್ಯ ಜನತೆಗೆ ಸಿಗುವಂತಾಗಲು ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ನುಡಿದರು.
ವಿಕ್ರೋಲಿ ಮೆಡಿಕೋಸ್ ಅಸೋಸಿಯೇಶನ್ ಇದರ ಅಧ್ಯಕ್ಷ ಡಾ| ಆರ್. ಮೋದಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ವೈ.ವಿ. ಗೋಪಾಲ್, ಮುಖ್ಯ ಅತಿಥಿ ಶಾಸಕ ಸುನೀಲ್ ರಾವುತ್, ಗೌರವ ಅತಿಥಿ ಡಾ| ಅಶೋಕ್ ಮಾನ್ಸೂರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಡಾ| ವೈ. ವಿ. ಗೋಪಾಲ್ ಅವರು ಸಂಸ್ಥೆಯ ಸಿದ್ಧಿ-ಸಾಧನೆಗಳನ್ನು ವಿವರಿಸಿ ಸಮಾವೇಶದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ವಂದಿಸಿದರು. ವಿಕ್ರೋಲಿ ಮೆಡಿಕೋಸ್ ಅಸೋಸಿಯೇಶನ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.