ದೇಶಪ್ರೇಮ ಬಿಂಬಿಸುವ ತುಳು ಚಲನಚಿತ್ರವೊಂದು ಸದ್ದಿಲ್ಲದೆ ಶೂಟಿಂಗ್ ಕಂಡಿದೆ. ಟೈಟಲ್ ‘ವಿಕ್ರಾಂತ್’ ಎಂದು ಗೊತ್ತುಪಡಿಸಲಾಗಿದೆ. ಒಂದು ಹಂತದ ಶೂಟಿಂಗ್ ಕೂಡ ಆಗಿದೆ. ಆದರೆ ಎಲ್ಲೂ ಕೂಡ ಢಾಂ ಡೀಂ ಮಾಡದೆ ಶೂಟಿಂಗ್ ನಡೆಸಲಾಗಿದೆ.
ನವೀನ್ ಮಾರ್ಲ ಕೊಡಂಗೆ ನಿರ್ದೇಶನದಲ್ಲಿ ಐದು ದಿನ ಶೂಟಿಂಗ್ ನೆರವೇರಿದ್ದು, ಎರಡನೇ ಹಂತದ ಚಿತ್ರೀಕರಣ ಜನವರಿಯಿಂದ ಆರಂಭವಾಗಲಿದೆ. ನಮ್ಮ ಸುತ್ತಮುತ್ತ ನಡೆಯುವ ನೈಜ ಕಥೆಯಾಧರಿಸಿ ಚಿತ್ರ ಸೆಟ್ಟೇರುತ್ತಿದೆ.
ರಾಜೇಂದ್ರ ಯಶು ನಿರ್ಮಾಣದಲ್ಲಿ ಸಿದ್ಧಗೊಳ್ಳುತ್ತಿರುವ ಚಿತ್ರದಲ್ಲಿ ವಿನೋದ್ ಶೆಟ್ಟಿ ಕೆಂಜಾರ್‌ಗೆ ಶೀತಲ್ ನಾಯಕ್ ನಾಯಕಿ. ಅರವಿಂದ ಬೋಳಾರ್, ರಮೇಶ್ ರೈ ಕುಕ್ಕುವಳ್ಳಿ, ರಾಧಾಕೃಷ್ಣ ನಾವಡ, ಬಂಟ್ವಾಳ ಜಯರಾಮ ಆಚಾರಿ, ದಿನೇಶ್ ಶೆಟ್ಟಿಗಾರ್ ಕೋಡಪದವು, ಶ್ರುತಿ ಕಾಸರಗೋಡು, ಭಾಗ್ಯರಾಜ್ ಕೊಯಿಲ, ಶರಣ್ ಶೆಟ್ಟಿ, ಅರುವ ಕೊರಗಪ್ಪ ಶೆಟ್ಟಿ ಮೊದಲಾದವರು ಇದ್ದಾರೆ.
ಈ ಮೂಲಕ ಯಕ್ಷಗಾನದ ಶ್ರೇಷ್ಠ ಕಲಾವಿದರನ್ನು ಸಿನೆಮಾದ ಕೆಮರಾ ಮೂಲಕ ತೋರಿಸುವ ವಿನೂತನ ಪ್ರಯತ್ನ ನಡೆಯಲಿದೆ. ಕಥೆ, ಸಂಭಾಷಣೆ ನವೀನ್ ಮಾರ್ಲ ಅವರದ್ದು. ರವಿ ಸುವರ್ಣ ಕೆಮರಾ, ದಿನೇಶ್ ಸುವರ್ಣ ಕಲೆ, ಜಗದೀಶ್ ಶೆಟ್ಟಿ ಕೆಂಚನಕೆರೆ ಸಹನಿರ್ದೇಶನ, ಪುಷ್ಪರಾಜ್ ಮಲಾರಬೀಡು, ಜಯರಾಜ್ ಹೆಜಮಾಡಿ ಸಹಾಯಕ ನಿರ್ದೇಶಕರು. ಒಟ್ಟು ಐದು ಹಾಡುಗಳಿರಲಿದ್ದು, ಎಚ್.ಕೆ. ನಯನಾಡು ಸಾಹಿತ್ಯ, ಭಾಸ್ಕರ್ ರಾವ್ ಬಿ.ಸಿ.ರೋಡ್ ಸಂಗೀತ ಸಂಯೋಜನೆಯಿದೆ.