ಸುದೀಪ್ ಅಭಿನಯದ “ವಿಕ್ರಾಂತ್ ರೋಣ’ ಚಿತ್ರ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಇತ್ತೀಚೆಗಷ್ಟೇ ಬುರ್ಜ್ ಖಲೀಫಾದಲ್ಲಿ ಟೈಟಲ್ ಲೋಗೋ ಅನೌನ್ಸ್ ಮಾಡಿದ ತಂಡ ಈಗ ಚಿತ್ರದ ಕುರಿತಾದ ಮತ್ತೂಂದು ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಅದು ಚಿತ್ರ 3ಡಿಯಲ್ಲಿ ಬಿಡುಗಡೆಯಾಗುತ್ತಿರೋದು.
ಹೌದು, “ವಿಕ್ರಾಂತ್ ರೋಣ’ ಚಿತ್ರವನ್ನು 3ಡಿಯಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ಅದಕ್ಕೆ ಕಾರಣ ಸಿನಿಮಾದ ಗುಣಮಟ್ಟ ಹಾಗೂ ಕಥೆ. ಈ ವಿಚಾರವನ್ನು ಸ್ವತಃ ನಟ ಸುದೀಪ್ ಸ್ಪಷ್ಟಪಡಿಸಿದ್ದಾರೆ.
“ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ. ಇಡೀ ತಂಡದ ಶ್ರಮದಿಂದ ಪ್ರತಿಯೊಂದು ವಿಚಾರವೂ ಅದ್ಭುತವಾಗಿದೆ. ಹಾಗಾಗಿ, ಚಿತ್ರವನ್ನು 3ಡಿಯಲ್ಲೂ ಬಿಡುಗv ಮಾಡಲಿದ್ದೇವೆ. ಮುಖ್ಯವಾಗಿ ಈ ಚಿತ್ರ ಇಷ್ಟೊಂದು ದೊಡ್ಡದಾಗುತ್ತದೆ ಹಾಗೂ ತುಂಬಾ ಚೆನ್ನಾಗಿ ಮೂಡಿಬರಲು ಕಾರಣ ನಿರ್ಮಾಪಕ ಜಾಕ್ ಮಂಜು. ಈ ಸಿನಿಮಾ ಕುರಿತಾಗಿ ಅವರು ಎಲ್ಲವನ್ನೂ ದೊಡ್ಡದಾಗಿಯೇ ಯೋಚಿಸಿದರು. ಅದಕ್ಕೆ ಪೂರಕವಾಗಿ ಅನೂಪ್ ಭಂಡಾರಿ ಅದನ್ನು ಅದ್ಭುತವಾಗಿ ಕಟ್ಟಿಕೊಡಲು ಪ್ರಯತ್ನಿಸಿದರು.
ಈ ಸಿನಿಮಾ ಸಂಗೀತದಿಂದ ಹಿಡಿದು ಎಲ್ಲವೂ ಹೊಸತನ ಈ ಚಿತ್ರದಲ್ಲಿದೆ. ವಿಕ್ರಾಂತ್ ರೋಣವನ್ನು ಡಿವೈಡ್ ಮಾಡೋದಾದರೆ, ನಾನು ಶೇ 50 ನಿರ್ಮಾಪಕ ಮಂಜುಗೆ ಕೊಡ್ತೀನಿ, ಶೇ 30 ಅನೂಪ್ ಅವರಿಗೆ, ಶೇ 10 ಟೆಕ್ನಿಷಿಯನ್ಸ್‌ಗೆ, ಶೇ 8 ನನ್ನ ಕೋ ಆರ್ಟಿಸ್ಟ್‌ಗಳಿಗೆ ಹಾಗೂ ಶೇ 2 ನಾನು ಇಟ್ಕೊàತ್ತಿನಿ. ನಾನು ತುಂಬಾ ವರ್ಷಗಳಿಂದ ಇರೋದರಿಂದ ನಾನು ಅಲ್ಲಿ ಎತ್ತರವಾಗಿ ಕಾಣುತ್ತೇನೆ. ಆದರೆ ನನಗಿಂತ ತುಂಬಾ ಎತ್ತರವಾದ ವ್ಯಕ್ತಿಗಳು ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ’ ಎಂದು ಸಿನಿಮಾ ಬಗ್ಗೆ ಹೇಳಿದರು ಸುದೀಪ್.
ಇತ್ತೀಚೆಗಷ್ಟೇ ತಮ್ಮ ಸಿನಿಮಾರಂಗದ 25 ವರ್ಷ ಗಳ ಜರ್ನಿಯನ್ನು ಮಾಧ್ಯಮಗಳ ಜೊತೆ ಆಚರಿಸಿದ ಸುದೀಪ್, ತಾವು ಚಿತ್ರರಂಗಕ್ಕೆ ಬಂದ ದಿನದಿಂದ ಇವತ್ತಿನವರೆಗಿನ ಹಲವು ಘಟನೆಗಳನ್ನು ನೆನಪು ಮಾಡಿಕೊಂಡರು.