Advertisement

“ವಿಕ್ರಾಂತ್‌ ರೋಣ”:  ಕಿಚ್ಚನ ಪ್ಯಾನ್‌ ಇಂಡಿಯಾ ಸಿನಿಮಾ ಮೇಲೆ ಹೆಚ್ಚಿದ ನಿರೀಕ್ಷೆ

09:32 AM Dec 08, 2021 | Team Udayavani |

ಸುದೀಪ್‌ ನಟನೆಯ ಪ್ಯಾನ್‌ ಇಂಡಿಯಾ ಚಿತ್ರ “ವಿಕ್ರಾಂತ್‌ ರೋಣ’ ಯಾವಾಗ ತೆರೆಕಾಣುತ್ತದೆ ಎಂಬ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಉತ್ತರ ಸಿಕ್ಕಿದೆ. ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಈಗ ಅಧಿಕೃತವಾಗಿ ಘೋಷಿಸಿದೆ. ಅದು ಫೆ.24.

Advertisement

ಹೌದು, ಭರ್ಜರಿ ನಿರೀಕ್ಷೆ ಹುಟ್ಟಿಸಿರುವ “ವಿಕ್ರಾಂತ್‌ ರೋಣ’ ಚಿತ್ರ ಫೆ.24ರಂದು ವಿಶ್ವದಾದ್ಯಂತ ತೆರೆಕಾಣುತ್ತಿದೆ. ಸ್ವತಃ ಚಿತ್ರತಂಡ ಬಿಡುಗಡೆಯ ದಿನಾಂಕವನ್ನು ಮಂಗಳವಾರ ಅಧಿಕೃತವಾಗಿ ಘೋಷಿಸಿದೆ.

ಇನ್ನು,”ವಿಕ್ರಾಂತ್‌ ರೋಣ’ ಕನ್ನಡ ಚಿತ್ರರಂಗವನ್ನು ಮತ್ತೂಂದು ಲೆವೆಲ್‌ಗೆ ಕೊಂಡೊಯ್ಯುವ ಸಿನಿಮಾ ಎಂಬ ಮಾತು ಕೇಳಿ ಬರುತ್ತಿದೆ. ನಿರ್ದೇಶಕ ಅನೂಪ್‌ ಭಂಡಾರಿ ಪ್ರಕಾರ, “ವಿಕ್ರಾಂತ್‌ ರೋಣ’ದಲ್ಲಿ ನಟ ಸುದೀಪ್‌ ಅವರ ಸ್ಟಾರ್‌ಡಮ್‌ ಮತ್ತು ಅವರ ಪಫ‌ìರ್ಮೆನ್ಸ್‌ ಎರಡರ ಸಮಾಗಮವಾಗಿದೆಯಂತೆ.

“ಸುದೀಪ್‌ ಅವರಿಗೆ ದೇಶದಾದ್ಯಂತ ಅವರದ್ದೇ ಆದ ಫ್ಯಾನ್ಸ್‌ ಬಳಗವಿದೆ. ಇಲ್ಲಿಯವರೆಗೆ ಅವರು ಮಾಡಿರುವ ಸಿನಿಮಾಗಳಲ್ಲಿ ತಮ್ಮ ಪರ್ಫಾರ್ಮೆನ್ಸ್‌ ಏನು ಅನ್ನೋದನ್ನ ತೋರಿಸಿದ್ದಾರೆ. ಅವರಿಗೆ ಅವರದ್ದೇ ಆದ ಸ್ಟಾರ್‌ಡಮ್‌ ಇದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು “ವಿಕ್ರಾಂತ್‌ ರೋಣ’ ಸಿನಿಮಾ ಮಾಡಿದ್ದೇವೆ. ಇದರಲ್ಲಿ ಅವರ ಸ್ಟಾರ್‌ಡಮ್‌ ಮತ್ತು ಪರ್ಫಾರ್ಮೆನ್ಸ್‌ ಎರಡಕ್ಕೂ ಸಾಕಷ್ಟು ಸ್ಪೇಸ್‌ ಇದೆ’ ಎನ್ನುವುದು ಅನೂಪ್‌ ಮಾತು.

“ಈ ಸಿನಿಮಾದ ಸಬ್ಜೆಕ್ಟ್ ಮತ್ತು ಸ್ಕ್ರಿಪ್ಟ್ ಎರಡೂ ಕೂಡ ಸುದೀಪ್‌ ಅವರಿಗಾಗಿಯೇ ಹೇಳಿ ಮಾಡಿಸಿದಂತೆ, ಸಹಜವಾಗಿ ಮೂಡಿಬಂದಿದೆ. ಸುದೀಪ್‌ ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಮಾಡಲಾಗದು ಎನ್ನುವಷ್ಟರ ಮಟ್ಟಿಗೆ ಈ ಸಬ್ಜೆಕ್ಟ್ ಅವರಿಗೆ ಮ್ಯಾಚ್‌ ಆಗುತ್ತದೆ. ಸಿನಿಮಾದಲ್ಲಿ ಯಾವುದನ್ನೂ ಅತಿಯಾಗಿ ಸೇರಿಸಲು ಹೋಗಿಲ್ಲ. ಎಲ್ಲವೂ ಆರ್ಗಾನಿಕ್‌ ಆಗಿದೆ’ ಎನ್ನುತ್ತಾರೆ ಅನೂಪ್‌.

Advertisement

ಇದನ್ನೂ ಓದಿ:ಭಾರತದ ವಿಕೆಟ್‌ ಬೀಳುತ್ತಿದ್ದಾಗ ಕಪಿಲ್‌ ಸ್ನಾನ ಮಾಡುತ್ತಿದ್ದರು!

“ವಿಕ್ರಾಂತ್‌ ರೋಣ’ ಆ್ಯಕ್ಷನ್‌ ಅಡ್ವೆಂಚರ್‌ ಶೈಲಿಯ ಚಿತ್ರವಾಗಿದ್ದು, 55 ದೇಶಗಳಲ್ಲಿ, 14 ಭಾಷೆಗಳಲ್ಲಿ 3ಡಿ ಬಿಡುಗಡೆಯನ್ನು ಕಾಣಲಿದೆ. ಅನೂಪ್‌ ಭಂಡಾರಿಯವರ ನಿರ್ದೇಶನ, ಜಾಕ್‌ ಮಂಜುನಾಥ್‌ ಹಾಗೂ ಶಾಲಿನಿ ಮಂಜುನಾಥ್‌ರವರ ನಿರ್ಮಾಣ, ಅಲಂಕಾರ್‌ ಪಾಂಡಿಯನ್‌ ಅವರ ಸಹ-ನಿರ್ಮಾಣ ಈ ಚಿತ್ರಕ್ಕಿದೆ. ಚಿತ್ರಕ್ಕೆ ಬಿ.ಅಜನೀಶ್‌ ಲೋಕನಾಥ್‌ ಹಿನ್ನಲೆ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಕಿಚ್ಚ ಸುದೀಪ್‌ ಜೊತೆಗೆ ನಿರೂಪ್‌ ಭಂಡಾರಿ, ನೀತಾ ಅಶೋಕ್‌ ಹಾಗೂ ಜಾಕ್ವೆಲಿನ್‌ ಫ‌ರ್ನಾಂಡೀಸ್‌ ನಟಿಸಿದ್ದಾರೆ. ಜಾಕ್ವೆಲಿನ್‌ ಕೇವಲ ಹಾಡಿನಲ್ಲಷ್ಟೇ ಕಾಣಿಸಿಕೊಂಡಿಲ್ಲ. ಚಿತ್ರದ ಕೆಲವು ಪ್ರಮುಖ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಜಾಕ್ವೆಲಿನ್‌ “ವಿಕ್ರಾಂತ್‌ ರೋಣ’ದಲ್ಲಿ ಒಂದು ಪಾತ್ರವಾಗಿದ್ದಾರೆ ಎನ್ನಬಹುದು. ಜಾಕ್ವೆಲಿನ್‌ ಕಾಣಿಸಿಕೊಂಡಿರುವ ಹಾಡಿಗಾಗಿ ಸಖತ್‌ ಕಲರ್‌ಫ‌ುಲ್‌ ಸೆಟ್‌ ಹಾಕಿದ್ದು, ಬೆಂಗಳೂರು ಹೊರವಲಯದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಈ ಒಂದು ಹಾಡಿಗಾಗಿಯೇ 4 ಕೋಟಿಗೂ ಅಧಿಕ ವೆಚ್ಚ ಮಾಡಿದೆ ಚಿತ್ರತಂಡ.

ಇನ್ನು, ಬಿಗ್‌ ಬಜೆಟ್‌ನ ಚಿತ್ರಗಳ ಸಾಲಿನಲ್ಲಿ “ವಿಕ್ರಾಂತ್‌ ರೋಣ’ ಕೂಡಾ ನಿಲ್ಲುತ್ತದೆ. ಚಿತ್ರಕ್ಕಾಗಿ 10ಕ್ಕೂ ಹೆಚ್ಚು ಸೆಟ್‌ಗಳನ್ನು ಹಾಕಲಾಗಿದ್ದು,ಬಹುಕೋಟಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರ 3ಡಿಯಲ್ಲೂ ತಯಾರಾಗುತ್ತಿರುವುದರಿಂದ ಚಿತ್ರದ ಬಜೆಟ್‌ನಲ್ಲೂ ಏರಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next