ಸದ್ಯ ತಮ್ಮ ಸಿನಿಮಾ ಚಟುವಟಿಕೆಗಳಿಂದ ಕೊಂಚ ಬಿಡುವು ಮಾಡಿಕೊಂಡಿರುವ ನಟ ಕಿಚ್ಚ ಸುದೀಪ್ ದುಬೈಗೆ ಹಾರಿದ್ದಾರೆ. ಕೋವಿಡ್ ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದ ಐಪಿಎಲ್ ಕ್ರಿಕೆಟ್ ಟೂರ್ನಿಯ ಸೆಕೆಂಡ್ ಇನ್ನಿಂಗ್ಸ್ ದುಬೈನಲ್ಲಿ ಮತ್ತೆ ಶುರುವಾಗಿದ್ದು, ಇದೇ ಸಂದರ್ಭದಲ್ಲಿ ಸುದೀಪ್ ಕೂಡ ದುಬೈ ಪ್ರವಾಸ ಕೈಗೊಂಡಿದ್ದಾರೆ.
ಭಾನುವಾರ ರಾತ್ರಿ ಐಪಿಎಲ್ ಸೆಕೆಂಡ್ ಇನ್ನಿಂಗ್ಸ್‌ನ ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ನಡೆದಿದ್ದು, ಸುದೀಪ್ ಪತ್ನಿ ಪ್ರಿಯಾ ಜೊತೆಗೆ ಸ್ಟೇಡಿಯಂನಲ್ಲಿ ಖುದ್ದಾಗಿ ಹಾಜರಿದ್ದು ಪಂದ್ಯವನ್ನು ನೇರವಾಗಿ ವೀಕ್ಷಿಸಿದ್ದಾರೆ. ಇದಾದ ಬಳಿಕ ಸುದೀಪ್ ದುಬೈನಿಂದಲೇ ತಮ್ಮ “ವಿಕ್ರಾಂತ್ ರೋಣ’ ಚಿತ್ರದ ಕುರಿತು ಒಂದಷ್ಟು ಅಪ್‌ಡೇಟ್ ನೀಡಿದ್ದಾರೆ.
ಈಗಾಗಲೇ “ವಿಕ್ರಾಂತ್ ರೋಣ’ ಶೂಟಿಂಗ್ ಮುಗಿದಿದ್ದು, ಕನ್ನಡ ಅವತರಿಣಿಕೆಯ ಡಬ್ಬಿಂಗ್ ಕೆಲಸವನ್ನೂ ಸುದೀಪ್ ಮುಗಿಸಿ¨ªಾರೆ. ಇದೀಗ “ವಿಕ್ರಾಂತ್ ರೋಣ’ ದ ಇತರೆ ಭಾಷೆಗಳ ಡಬ್ಬಿಂಗ್‌ಗೆ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಲಿ¨ªಾರೆ ಎನ್ನುವ ಮಾತುಗಳು ಕೆಲ ದಿನಗಳಿಂದ ಕೇಳಿಬಂದಿದ್ದು, ಈ ಬಗ್ಗೆ ಸ್ವತಃ ಸುದೀಪ್ ಅವರೆ ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, “”ವಿಕ್ರಾಂತ್ ರೋಣ’ ಸಿನಿಮಾದ ಬೇರೆ ಭಾಷೆಯ ಡಬ್ಬಿಂಗ್ ಕೆಲಸವನ್ನು ದುಬೈನಿಂದ ವಾಪಸ್ ಆದ ಬಳಿಕ ಪ್ರಾರಂಭ ಮಾಡುತ್ತೇವೆ. ಚಿತ್ರಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ’ ಎಂದಿದ್ದಾರೆ.
ಒಟ್ಟಾರೆ “ವಿಕ್ರಾಂತ್ ರೋಣ’ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದ್ದು, ಸುದೀಪ್ ಯಾವ ಯಾವ ಭಾಷೆಯಲ್ಲಿ ಡಬ್ಬಿಂಗ್ ಮಾಡಲಿದ್ದಾರೆ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.