Advertisement

‘ವಿಕ್ರಾಂತ ರೋಣ’ ಡಬ್ಬಿಂಗ್ ಶುರು ಮಾಡಿದ ಸುದೀಪ್

08:04 PM Jun 28, 2021 | Team Udayavani |

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್​ ರೋಣ ತೆರೆಗೆ ಬರುವುದನ್ನು ಕಾಯುತ್ತಿರುವ ಅಭಿಮಾನಿಗಳಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದೆ.

Advertisement

ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ ವಿಕ್ರಾಂತ್​ ರೋಣ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಇದೀಗ ಮಾತಿನ ಜೋಡನೆ ಕಾರ್ಯ ಜೋರಾಗಿ ನಡೆದಿದೆ. ಇತ್ತೀಚಿಗಷ್ಟೆ ನಟ ರವಿಶಂಕರ್ ಗೌಡ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದರು. ಇದೀಗ ನಾಯಕ ನಟ ಕಿಚ್ಚು ಸುದೀಪ್ ಅವರು ಡಬ್ಬಿಂಗ್ ಕೆಲಸ ಶುರು ಮಾಡಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರಿನಲ್ಲಿ ಬರೆದುಕೊಂಡಿರುವ ಸುದೀಪ್, ಬಹಳ ಸಮಯದ ನಂತರ ಸಿನಿಮಾಗೆ ಕಂಠದಾನ ಮಾಡುತ್ತಿದ್ದೇನೆ. ವಿಕ್ರಾಂತ್​ ರೋಣ ಸಿನಿಮಾದ ಡಬ್ಬಿಂಗ್ ಮಾಡುತ್ತಿದ್ದೇನೆ. ಸಿನಿಮಾ ಕೆಲಸಗಳು ಆರಂಭವಾಗಿರುವುದನ್ನು ನೋಡಲು ತುಂಬಾ ಖುಷಿಯಾಗುತ್ತಿದೆ ಎಂದಿದ್ದಾರೆ.

ಇನ್ನು ಸುದೀಪ್​ ಸದ್ಯ ಬಿಗ್ ಬಾಸ್​ 8ರ ಸೆಕೆಂಡ್​ ಇನ್ನಿಂಗ್ಸ್​ನ ನಿರೂಪಣೆಯಲ್ಲೂ ಬ್ಯುಸಿಯಾಗಿದ್ದಾರೆ. ವಿಕ್ರಾಂತ್​ ರೋಣ ಸಿನಿಮಾಗಿಂತ ಮೊದಲು ಕೋಟಿಗೊಬ್ಬ 3 ಚಿತ್ರ ರಿಲೀಸ್ ಆಗಬೇಕಿದೆ. ಈಗಾಗಲೇ ಎರಡೂ ಸಿನಿಮಾಗಳ ಚಿತ್ರೀಕರಣ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಮೊದಲು ಕೋರಿಗೊಬ್ಬ 3 ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಕೋಟಿಗೊಬ್ಬ 3 ಸಿನಿಮಾ ರಿಲೀಸ್​ ಆದ ನಂತರವೇ ವಿಕ್ರಾಂತ್​ ರೋಣ ತೆರೆ ಕಾಣಲಿದೆಯಂತೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next