Advertisement

ನನ್ನ ಅಣ್ಣ 17ನೇ ವಯಸ್ಸಿನಲ್ಲಿ ಇಸ್ಲಾಂಗೆ ಮತಾಂತರಗೊಂಡ: ಧರ್ಮ ಮಾನವ ನಿರ್ಮಿತ; ನಟ ವಿಕ್ರಾಂತ್

01:45 PM Feb 21, 2024 | Team Udayavani |

ಮುಂಬಯಿ: ಬಾಲಿವುಡ್‌ ನಲ್ಲಿ ಇತ್ತೀಚೆಗೆ ಬಂದ ʼ12th ಫೇಲ್‌ʼ ಸಿನಿಮಾದ ಮೂಲಕ  ನಟ ವಿಕ್ರಾಂತ್ ಮಾಸ್ಸೆ ಸದ್ದು ಮಾಡಿದ್ದಾರೆ. ಅವರ ಸ್ಪೂರ್ತಿದಾಯಕ ಅಭಿನಯವನ್ನು ಜನ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಯಶಸ್ಸಾಗುವುದರ ಜೊತೆಗೆ ವಿಕ್ರಾಂತ್‌ ಅವರ ಕೆರಿಯರ್‌ಗೆ ಪ್ಲಸ್‌ ಪಾಯಿಂಟ್‌ ಆಗಿದೆ.

Advertisement

12th ಫೇಲ್‌ ಸಿನಿಮಾದ ಬಳಿಕ ನಟ ವಿಕ್ರಾಂತ್‌ ಅವರು ಕೆಲ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಅವರು ತನ್ನ ಕುಟುಂಬ ಹಾಗೂ ಧರ್ಮದ ಬಗ್ಗೆ ಮಾತನಾಡಿದ್ದಾರೆ.  ʼಅನ್‌ ಫಿಲ್ಟರ್ಲ್ಡ್‌ ಬೈ ಸಮ್ದೇಶ್‌ʼ ಅವರೊಂದಿಗಿನ ಸಂದರ್ಶನದಲ್ಲಿ ವಿಕ್ರಾಂತ್‌ ಮಾತನಾಡಿದ್ದಾರೆ.

“ನನ್ನ ಬಾಲ್ಯ ಧರ್ಮ ಮತ್ತು ಆಧ್ಯಾತ್ಮಿಕತೆಯ ಪಾಲನೆಯ ಚರ್ಚೆಗಳಿಂದ ಕೂಡಿತ್ತು. ನನ್ನ ಸಹೋದರನ ಹೆಸರು ಮೊಯಿನ್ ನನ್ನ ಹೆಸರು ವಿಕ್ರಾಂತ್.‌ ಅವನು ತನ್ನ 17ನೇ ವಯಸ್ಸಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ. ಮಗನೇ ನಿನಗೆ ಆ ಧರ್ಮದಲ್ಲಿ ತೃಪ್ತಿಯಿದ್ದರೆ ನೀನು ಅದನ್ನು ಅನುಸರಿಸು ಎಂದು ಮನೆಯವರು ಅವನಿಗೆ ಹೇಳಿದ್ದರು. ಹಾಗಾಗಿ ಅವನು ಮತಾಂತರಗೊಂಡ. ನನ್ನ ತಾಯಿ ಸಿಖ್‌ ಸಮುದಾಯಕ್ಕೆ ಸೇರಿದವರು. ನನ್ನ ತಂದೆ ಕ್ರಿಶ್ಚನ್‌. ಅವರು ವಾರಕ್ಕೆ ಎರಡು ಬಾರಿ ಚರ್ಚ್‌ ಗೆ ಹೋಗುತ್ತಾರೆ. ನಾನು ಚಿಕ್ಕ ವಯಸ್ಸಿನಿಂದಲೂ ಧರ್ಮ ಮತ್ತು ಆಧ್ಯಾತ್ಮಿಕತೆಯ ಬಹಳಷ್ಟು ಸಮಸ್ಯೆಗಳನ್ನು ನೋಡಿದ್ದೇನೆ” ಎಂದು ಹೇಳಿದ್ದಾರೆ.

“ಈ ಬಗ್ಗೆ ಸಂಬಂಧಿಕರು ತಂದೆಯ ಬಳಿ ʼನೀವು ಇದಕ್ಕೆಲ್ಲಾ ಹೇಗೆ ಅನುಮತಿ ನೀಡಿದ್ದೀರಿ ಎನ್ನುವ ಪ್ರಶ್ನೆಯನ್ನು ಕೇಳಲಾಯಿತು. ಆದರೆ ನನ್ನ‌ ತಂದೆ ಅವರಿಗೆಲ್ಲ ಇದು ನಿಮ್ಮ ಕೆಲಸವಲ್ಲ, ನನ್ನ ಮಗ ನನಗೆ ಮಾತ್ರ ಉತ್ತರ ನೀಡಬೇಕು. ಅವನು ಬಯಸಿದ್ದನ್ನು ಆಯ್ಕೆ ಮಾಡುವ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾನೆ ಎಂದು ಹೇಳುತ್ತಿದ್ದರು. ಇದನ್ನೆಲ್ಲಾ ನೋಡಿದ ನಂತರ, ನಾನು ನನ್ನದೇ ಆದ ಅನ್ವೇಷಣೆಗೆ ಹೋಗಿ, ಧರ್ಮವು ಮಾನವ ನಿರ್ಮಿತ ಎಂದು ನಾನು ಅರಿತುಕೊಂಡೆ” ಎಂದು ವಿಕ್ರಾಂತ್‌ ಹಳೆಯ ವಿಚಾರವನ್ನು ಹಂಚಿಕೊಂಡಿದ್ದಾರೆ.

ಶೀತಲ್ ಠಾಕೂರ್ ಅವರನ್ನು ಮದುವೆಯಾಗಿ ಇತ್ತೀಚೆಗಷ್ಟೇ ತಂದೆಯಾದ ಮಾಸ್ಸೆ, ತಮ್ಮ ಮಗನಿಗೆ ವೈಚಾರಿಕತೆಯನ್ನು ಕಲಿಸುವ ಗುರಿಯನ್ನು ಹೊಂದಿದ್ದಾರೆ. ಸಾಂಸ್ಕೃತಿಕ ಸಂಬಂಧದಿಂದಾಗಿ ಅವರು ಹಿಂದೂ ಸಂಪ್ರದಾಯಗಳನ್ನು ಗೌರವಿಸುತ್ತಾರೆ ಎಂದು ನಟ ಹೇಳುತ್ತಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next