Advertisement

ಕೋವಿಡ್‌ ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆ ದುರಸ್ತಿ

05:11 AM Jul 09, 2020 | Lakshmi GovindaRaj |

ಮೈಸೂರು: ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ನಗರದಲ್ಲಿ ಕೆಲ ವರ್ಷದಿಂದ ಸೇವೆ ಸ್ಥಗಿತಗೊಳಿಸಿದ್ದ ವಿಕ್ರಂ ಜೇಷ್ಠ ಖಾಸಗಿ ಆಸ್ಪತ್ರೆಯನ್ನು ಕೋವಿಡ್‌ ಚಿಕಿತ್ಸೆಗೆ ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ನಗರದ ಜಿಲ್ಲಾ  ಕೋವಿಡ್‌ ಆಸ್ಪತ್ರೆಯ 200 ಹಾಸಿಗೆಗಳೂ ಭರ್ತಿಯಾಗಿದ್ದು, ಈಗಾಗಲೇ ಇಎಸ್‌ಐ ಆಸ್ಪತ್ರೆ, ಮಂಡಕಳ್ಳಿ ಬಳಿಯ ರಾಜ್ಯ ಮುಕ್ತ ವಿವಿ (ಕೆಎಸ್‌ ಓಯು)ದ ವಿಸ್ತರಣಾಕಟ್ಟಡವನ್ನು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಜ್ಜುಗೊಳಿಸಿದೆ.

Advertisement

ಪ್ರತಿನಿತ್ಯ ಸರಾಸರಿ 50 ಕೋವಿಡ್‌ ಪಾಸಿಟಿವ್‌ ಪ್ರಕರಣ ದಾಖಲಾಗುತ್ತಿದ್ದು, ಜೊತೆಗೆ ಹಲವು ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯಲ್ಲೂ ಸೋಂಕು ದೃಢಪಡುತ್ತಿರುವ ಕಾರಣ ಅವರ ಪ್ರಾಥಮಿಕ ಹಾಗೂ ಸೆಕೆಂಡರಿ  ಸಂಪರ್ಕದಲ್ಲಿರುವ ಸಿಬ್ಬಂದಿಗೂ ಪಾಸಿಟಿವ್‌ ಬರುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ, ಕೆಲ ಖಾಸಗಿ ಆಸ್ಪತ್ರೆಗಳನ್ನು ಚಿಕಿತ್ಸೆಗಾಗಿ ಬಳಸಿಕೊಳ್ಳಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಕೆಲ ವರ್ಷದಿಂದ ಸ್ಥಗಿತಗೊಂಡಿರುವ “ವಿಕ್ರಂ ಜೇಷ್ಠ  ಆಸ್ಪತ್ರೆ’ಯನ್ನು ಜಿಲ್ಲಾಡಳಿತ ವಶಕ್ಕೆ ಪಡೆದು, ಆಸ್ಪತ್ರೆಯ ನೆಲಮಹಡಿ ಸೇರಿ 5 ಮಹಡಿಯನ್ನು ಸ್ವತ್ಛಗೊಳಿಸುತ್ತಿದೆ. 100 ಹಾಸಿಗೆ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯನ್ನು ಮುಡಾ ಅಸಿಸ್ಟೆಂಟ್‌ ಎಕ್ಸಿಕ್ಯೂಟಿವ್‌ ಎಂಜಿನಿರ್  (ಎಲೆಕ್ಟ್ರಿಕಲ…) ಹಾಗೂ ಇಬ್ಬರು ಜೂನಿಯರ್‌ ಎಂಜಿನಿಯರ್‌ಗಳು ಸೇರಿ 50 ಕೆಲಸಗಾರರಿಂದ ಸ್ವತ್ಛತೆ ಹಾಗೂ ರಿಪೇರಿ ಕೆಲಸ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next