Advertisement
ದುಬೆ ಬಂಧನ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್, ಉತ್ತರ ಪ್ರದೇಶ ಪೊಲೀಸರು ಎನ್ ಕೌಂಟರ್ ಮಾಡಿ ದುಬೆಯನ್ನು ಹತ್ಯೆಗೈಯುವುದನ್ನು ತಡೆಯುವ ನಿಟ್ಟಿನಲ್ಲಿ ರಕ್ಷಿಸಲಾಗಿದೆ. ಇದೆಲ್ಲವೂ ಮಧ್ಯಪ್ರದೇಶ ಬಿಜೆಪಿ ಹಿರಿಯ ಮುಖಂಡರು ಪೂರ್ವ ನಿರ್ಧರಿತವಾಗಿ ಮಾಡಿಕೊಂಡ ಯೋಜನೆಯಾಗಿದೆ ಎಂದು ಆರೋಪಿಸಿದ್ದಾರೆ.
Related Articles
Advertisement
ವಿಕಾಸ್ ದುಬೆಯನ್ನು ಮಧ್ಯಪ್ರದೇಶದಿಂದ ಸುರಕ್ಷಿತವಾಗಿ ಕರೆ ತರುತ್ತೀರಾ ಅಥವಾ ಆತ ಓಡಿ ಹೋಗಲು ಪ್ರಯತ್ನಿಸಲಿದ್ದಾನೆಯೇ ಎಂದು ಕಾಂಗ್ರೆಸ್ ವಕ್ತಾರ ಸುರೇಂದ್ರ ರಜ್ ಪೂತ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ಗ್ಯಾಂಗ್ ಸ್ಟರ್ ದುಬೆಯನ್ನು ವಾಪಸ್ ಕರೆತರುವುದು ಪೊಲೀಸರ ಕರ್ತವ್ಯವಾಗಿದೆ, ಅಷ್ಟೇ ಅಲ್ಲ ಆತನ ದೇಶದ ಕಾನೂನನ್ನು ಎದುರಿಸಬೇಕು ಎಂದು ತಿಳಿಸಿದ್ದಾರೆ. ವಿಶೇಷ ಪೊಲೀಸ್ ತಂಡ (ಎಸ್ ಟಿಎಫ್) ಹಮೀರ್ ಪುರ್ ನಲ್ಲಿ ಪೊಲೀಸ್ ಎನ್ ಕೌಂಟರ್ ನಲ್ಲಿ ಬಲಿಯಾಗಿದ್ದ ಅಮರ್ ದುಬೆ ಪತ್ನಿ ಖುಷಿಯನ್ನು ಬಂಧಿಸಿದ್ದಾರೆ. ಈ ನಿಟ್ಟಿನಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜಿತಿನ್ ಪ್ರಸಾದ್ ಅವರು ಉತ್ತರಪ್ರದೇಶ್ ಪೊಲೀಸರ ಪಾತ್ರವನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಎಂಟು ಪೊಲೀಸರನ್ನು ಹತ್ಯೆಗೈದಿದ್ದ ನಟೋರಿಯಸ್ ರೌಡಿ ವಿಕಾಸ್ ದುಬೆ ಮನೆ ನೆಲಸಮ ಖುಷಿ ಬಂಧನವನ್ನು ಎಸ್ ಟಿಎಫ್ ಈವರೆಗೂ ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಸ್ಥಳೀಯ ಜನರು ಅಮರ್ ಸಂಬಂಧಿಕರನ್ನು ಹಾಗೂ ಪತ್ನಿಯನ್ನು ಪೊಲೀಸರು ಕರೆದೊಯ್ದಿದ್ದು ಈವರೆಗೆ ವಾಪಸ್ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಮರ್ ದುಬೆ ಖುಷಿಯನ್ನು ಜೂನ್ 29ರಂದು ವಿವಾಹವಾಗಿದ್ದ, ಅದು ಬಿಕ್ರು ಗ್ರಾಮದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಹತ್ಯೆಗೀಡಾಗುವ ಮೂರು ದಿನದ ಮೊದಲು ವಿವಾಹ ನಡೆದಿತ್ತು. ಮದುವೆಯಾದ ಒಂದು ವಾರದಲ್ಲಿ ಆಕೆ ವಿಧವೆಯಾಗಿದ್ದಾಳೆ ಎಂದು ವರದಿ ತಿಳಿಸಿದೆ.