Advertisement
ಹಲ್ಲೆ ನಡೆದಿದ್ದು ಯಾವಾಗ ?
Related Articles
Advertisement
ನಾಗರತ್ನ ಹಲ್ಲೆ ನಡೆಸಿದ ವೇಳೆ ಪುತ್ರಿ ಮೋನಿಕಾ ಮನೆಯೊಳಗಿದ್ದರು. ಮನೆಯಲ್ಲಿದ್ದ ಇತರರು ನಾಗರತ್ನ ಅವರನ್ನು ತಡೆದಿದ್ದರು.
ವಿಜಯ್ ಅವರ ಸ್ನೇಹಿತ ಮಂಜು ಮತ್ತು ವಕೀಲರು ಭಾನುವಾರ ಸುªದಿಗೋಷ್ಠಿ ನಡೆಸಿ ನಾಗರತ್ನ ಅವರು ಸುಳ್ಳು ದೂರು ನೀಡಿ ವಿಜಯ್ ಅವರ ಮೇಲೆ ಸಂಚು ನಡೆಸಿದ್ದಾರೆ. ಅವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಭಾನುವಾರ ಹೈಡ್ರಾಮಾ!ನಾಗರತ್ನ ಅವರನ್ನು ವಶಕ್ಕೆ ಪಡೆಯಲು ಗಂಟೆಗಳ ಕಾಲ ಮನೆಯ ಮುಂದೆ ಕಾಯಬೇಕಾದ ಪರಿಸ್ಥಿತಿ ಬಂದೊದಗಿತು. ಮನೆಯೊಳಗಿದ್ದ ನಾಗರತ್ನ ಮತ್ತು ಪುತ್ರಿಯರಾದ ಮೋನಿಶಾ, ಮೋನಿಕಾ ಪೊಲೀಸರಿಗೆ ಬಾಗಿಲು ತೆರೆದಿರಲ್ಲಿಲ್ಲ. ನಾಗರತ್ನ ಪರ ವಕೀಲೆ ಆಗಮಿಸಿದ ಬಳಿಕ ನಾಗರತ್ನ ಅವರು ಬಾಗಿಲು ತೆರೆದು ಹೊರ ಬಂದಿದ್ದು, ಪುತ್ರಿಯರೊಂದಿಗೆ ಠಾಣೆಗೆ ತೆರಳಿದ್ದಾರೆ. ಮಗಳನ್ನು ವಿಚಾರಿಸಬೇಡಿ
ದುನಿಯಾ ವಿಜಯ್ ಅವರು ಠಾಣೆಗೆ ಆಗಮಿಸಿ ಮಗಳನ್ನು ವಿಚಾರಣೆ ನಡೆಸಬೇಡಿ. ನಮ್ಮ ಜಗಳಕ್ಕೆ ಸಂಬಂಧಿಸಿ ಹೆಣ್ಣು ಮಕ್ಕಳನ್ನು ಠಾಣೆಯಲ್ಲಿರಿಸಬೇಡಿ ಎಂದು ಮನವಿ ಮಾಡಿದ್ದಾರೆ. ವಿಜಯ್ ಮನವಿಯನ್ನು ಪೊಲೀಸರು ಪುರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ. ಎಲ್ಲದಕ್ಕೂ ನಾಗರತ್ನ ಕಾರಣ
ನಮ್ಮ ಬದುಕಿನಲ್ಲಿ ನಡೆದ ಎಲ್ಲದಕ್ಕೂ ನಾಗರತ್ನ ಕಾರಣ ಎಂದು ಕೀರ್ತಿ ಗೌಡ ಮಾಧ್ಯಮ ಪ್ರತಿನಿಧಿಗಳ ಎದುರು ಕಣ್ಣೀರು ಸುರಿಸಿದ್ದಾರೆ.