ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ತಗ್ಗಿದ್ದರೂ, ಡೋಣಿ ನದಿ ತೀರದಲ್ಲಿ ಪ್ರವಾಹ ಮುಂದುವರೆದಿದೆ. ಅನೇಕ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದರೆ, 140 ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. 1520.60 ಹೆಕ್ಟೇರ್ ಬೆಳೆ ಹಾನಿಯಾಗಿದೆ.
ಡೋಣಿ ಪ್ರವಾಹದಿಂದಾಗಿ ತಿಕೋಟಾ, ಬಬಲೇಶ್ವರ, ವಿಜಯಪುರ ತಾಲೂಕುಗಳ ವ್ಯಾಪ್ತಿಯಲ್ಲಿ 1520.60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾನಿಗೀಡಾಗಿವೆ.
ಮಳೆಯಿಂದದಾಗಿ ಸಿಂದಗಿ ತಾಲೂಕಿನಲ್ಲಿ 1, ದೇವರಹಿಪ್ಪರಗಿಯಲ್ಲಿ 6, ಬಬಲೇಶ್ವರ ತಾಲೂಕಿನಲ್ಲಿ 13, ಇಂಡಿ ತಾಲೂಕಿನಲ್ಲಿ 2, ಮುದ್ದೇಬಿಹಾಳ ತಾಲೂಕಿನಲ್ಲಿ 30, ವಿಜಯಪುರ ತಾಲೂಕಿನಲ್ಲಿ ಅತೀ ಹೆಚ್ಚು ಅಂದರೆ 86 ಒಟ್ಟು 140 ಕಚ್ಛಾ ಮನೆಗಳು ಹಾನಿಗೀಡಾಗಿವೆ.
ಡೋಣಿ ಪ್ರವಾಹಕ್ಕೆ ಸಂಬಂಧಿಸಿದಂತೆ ಈಗಾಗಲೇ ದಾಶ್ಯಾಳ, ದಾಶ್ಯಾಳ ಮೊದಲಾದ ಗ್ರಾಮಗಳಿಗೆ ಭೇಟಿ ನೀಡಿದ್ದು, ಅಹವಾಲು ಆಲಿಸಲಾಗಿದೆ, ಬೆಳೆಹಾನಿಗೆ ಸಂಬಂಧಿಸಿದಂತೆ ಪ್ರವಾಹ ಇಳಿಕೆಯಾದ ಕೂಡಲೇ ತೋಟಗಾರಿಕೆ-ಕೃಷಿ ಇಲಾಖೆ ಜಂಟಿ ಸಮೀಕ್ಷಾ ಕಾರ್ಯ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ವಿ.ಬಿ. ದಾನಮ್ಮನವವರ ತಿಳಿಸಿದ್ದಾರೆ.
ಎರಡು ದಿನಗಳಲ್ಲಿ 21.125 ಮೀ.ಮೀ. ಮಳೆಯಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಕಳೆದ 48 ಗಂಟೆಗಳಲ್ಲಿ 21.115 ಮೀ.ಮೀ. ಮಳೆ ಸುರಿದಿದೆ.
ವಿಜಯಪುರ ತಾಲೂಕಿನಲ್ಲಿ 41.44 ಮೀ.ಮೀ, ಬಬಲೇಶ್ವರ ತಾಲೂಕಿನಲ್ಲಿ 66.2 ಮೀ.ಮೀ, ತಿಕೋಟಾ ತಾಲೂಕಿನಲ್ಲಿ 42.55 ಮೀ.ಮೀ, ಬಸವನ ಬಾಗೇವಾಡಿ ತಾಲೂಕಿನಲ್ಲಿ11.7 ಮೀ.ಮೀ, ನಿಡಗುಂದಿ ತಾಲೂಕಿನಲ್ಲಿ 3.1ಮೀ.ಮೀ ಮಳೆಯಾಗಿದೆ.
ಮುದ್ದೇಬಿಹಾಳ ತಾಲೂಕಿನಲ್ಲಿ 15.35 ಮೀ.ಮೀ, ತಾಳಿಕೋಟೆ ತಾಲೂಕಿನಲ್ಲಿ 7.8 ಮೀ.ಮೀ, ಇಂಡಿ ತಾಲೂಕಿನಲ್ಲಿ 3.84 ಮೀ.ಮೀ, ಚಡಚಚಣ ತಾಲೂಕಿನಲ್ಲಿ 8.85 ಮೀ.ಮೀ, ಸಿಂದಗಿ ತಾಲೂಕಿನಲ್ಲಿ 11.37 ಮೀ.ಮೀ, ದೇವರಹಿಪ್ಪರಗಿ 41.3 ಮೀ.ಮೀ ಮಳೆ ಸುರಿದಿದ್ದು, ತಿಕೋಟಾ ಪಟ್ಟಣದಲ್ಲಿ ಅತೀ ಹೆಚ್ಚು 42.55 ಮೀ.ಮೀ, ಮಳೆ ಸುರಿದಿದೆ.