Advertisement

ಕೊನೆಗೂ ವಿಜಯೇಂದ್ರ ಸ್ಪರ್ಧೆ ಇಲ್ಲ; ಕ್ಷಮೆ ಕೇಳಿದ ಬಿಎಸ್‌ವೈ !!

10:52 AM Apr 24, 2018 | Team Udayavani |

ಮೈಸೂರು : ಕೊನೆಗೂ ವರುಣಾ ಕ್ಷೇತ್ರದಲ್ಲಿ ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರು ಸ್ಪರ್ಧಿಸುತ್ತಿಲ್ಲ ಎನ್ನುವುದು ಖಚಿತವಾಗಿದೆ. ಮಂಗಳವಾರ  ಖುದ್ದು ಯಡಿಯೂರಪ್ಪ ಅವರೇ  ವಿಜಯೇಂದ್ರ  ಸ್ಪರ್ಧಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿ  ಕ್ಷಮೆಯನ್ನೂ ಯಾಚಿಸಿದ್ದಾರೆ. 

Advertisement

ರಾಜ್ಯ ಬಿಜೆಪಿ ಉಸ್ತುವಾರಿಗಲಾದ ಪ್ರಕಾಶ್‌ ಜಾವ್‌ಡೇಕರ್‌ ಮತ್ತು ಮುರಳೀಧರ ರಾವ್‌ ಅವರೊಂದಿಗೆ 2 ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ” ಮೈಸೂರು ಮತ್ತು ಚಾಮರಾಜನಗರದ ಎಲ್ಲಾ ಬಿಜೆಪಿ ಅಭ್ಯರ್ಥಿಗಳೊಂದಿಗೆ ಸಮಲೋಚನೆ ನಡೆಸಿ ದ್ದೇವೆ. ವಿಜಯೇಂದ್ರ ಅವರು ಕೆಲವು ವಿಶೇಷ ಕಾರಣಗಳಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ವಿಜಯೇಂದ್ರ ಎಲ್ಲಾ ಕ್ಷೇತ್ರಗಳಲ್ಲಿ 20 ದಿನಗಳ ಕಾಲ ಪ್ರವಾಸ ಮಾಡಿ ಪ್ರಚಾರ ನಡೆಸಲಿದ್ದಾರೆ. ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಿ ”ಎಂದರು. 

‘ವಿಜಯೇಂದ್ರ ಅವರಲ್ಲಿ ಯಾವುದೇ ಗೊಂದಲ ಇಲ್ಲ. ಯಾವೋಬ್ಬ ಕಾರ್ಯಕರ್ತರು ತಪ್ಪು ಗ್ರಹಿಕೆ ಮಾಡಬಾರದು. ವರುಣಾದಲ್ಲಿ ಯಾರೇ  ಬಿಜೆಪಿ ಅಭ್ಯರ್ಥಿಯಾದರೂ ಅವರ ಪರ ಶಾಂತಿಯಿಂದ ಕೆಲಸ ಮಾಡಬೇಕು’ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. 

ವಿಜಯೇದ್ರ ಅವರಿಗೆ  ಕೊನೇ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಸೂಚಿಸಲಾಗಿದ್ದು ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಆಕ್ರೋಶಗೊಂಡಿದ್ದ ಕಾರ್ಯಕರ್ತರು ರೊಚ್ಚಿಗೆದ್ದಿದ್ದರು. 

ವರುಣಾದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಮೂಡಿದೆ. 

Advertisement

ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ!
ಟಿಕೆಟ್‌ ವಂಚಿತ ವಿಜಯೇಂದ್ರ ಅವರಿಗೆ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದಾಗಿ ಜಾವ್‌ಡೇಕರ್‌ ಹೇಳಿಕೆ ನೀಡಿದರು. 

ಚಪ್ಪಲಿ ತೋರಿಸಿ ಪ್ರತಿಭಟನೆ
ಯತೀಂದ್ರ ಅಭಿಮಾನಿಗಳಆಕ್ರೋಶ ಮುಂದುವರಿದಿದ್ದು ಬಿಜೆಪಿ ನಾಯಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ್ದಾರೆ. ಚಪ್ಪಲಿಗಳನ್ನು ತೋರಿಸಿ ಆಕ್ರೋಶ ಹೊರ ಹಾಕಿದ್ದಾರೆ.

ಈ ಬಾರಿ ಮೈಸೂರು ಭಾಗದಲ್ಲಿ ಯಾವ ಬಿಜೆಪಿ ಅಭ್ಯರ್ಥಿಯೂ ಗೆಲ್ಲುವುದಿಲ್ಲ. ಯಡಿಯೂರಪ್ಪ ಸಿಎಂ ಆಗುವುದೂ ಇಲ್ಲ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ. 

ತೋಟದ ಬಸಪ್ಪಗೆ ಟಿಕೆಟ್‌ ? 

ವರುಣಾ ಟಿಕೆಟನ್ನು ಬಿಜೆಪಿ  ಕಾರ್ಯಕರ್ತ ತೋಟದ ಬಸಪ್ಪ ಎನ್ನುವವರಿಗೆ ನೀಡಲಾಗಿದೆ ಎಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next