Advertisement

Waqf ವಿರುದ್ಧ ವಿಜಯೇಂದ್ರ ನೇತೃತ್ವದ ಹೋರಾಟಕ್ಕೆ ಚಾಲನೆ

02:21 PM Dec 04, 2024 | Team Udayavani |

ಬೀದರ್ : ವಕ್ಫ್ ಕಾನೂನು ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದಲ್ಲಿ ಆರಂಭಿಸಿರುವ ‘ನಮ್ಮ ಭೂಮಿ- ನಮ್ಮ ಹಕ್ಕು’ ಹೋರಾಟಕ್ಕೆ ಬುಧವಾರ ಗಡಿ‌ ಜಿಲ್ಲೆ ಬೀದರ್ ನಲ್ಲಿ ಚಾಲನೆ ನೀಡಲಾಯಿತು.

Advertisement

ನಗರದ ಗಾಂಧಿ ಗಂಜ್ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಕ್ಪ್ ವಿರುದ್ಧ ಕಳಹೆ‌ ಮೊಳಗಿಸಿದ್ದಾರೆ. ಇತ್ತೀಚೆಗೆ ಬಿಜೆಪಿ ರೆಬೆಲ್ ಶಾಸಕ ಬಸವನಗೌಡ ಪಾಟೀಲ್‌‌ ಯತ್ನಾಳ್ ನೇತೃತ್ವದ ತಂಡ ಹೋರಾಟಕ್ಕೆ ಪರ್ಯಾಯವಾಗಿ ಹೋರಾಟ ಆಯೋಜಿಸಲಾಗಿದ್ದು, ವಿದ್ಯುಕ್ತವಾಗಿ ಆರಂಭಿಸಲಾಯಿತು. ಬಿಜೆಪಿಯ ಶಾಸಕರು, ಮಾಜಿ ಸಚಿವರು ಮತ್ತು ಹಿರಿಯ ನಾಯಕರು ವಿಜಯೇಂದ್ರ ಅವರಿಗೆ ಸಾಥ್ ನೀಡಿದ್ದಾರೆ.

ಗಾಂಧಿ ಗಂಜ್ ನಲ್ಲಿ ಸಾರ್ವಜನಿಕ ಸಭೆ ಬಳಿಕ‌ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ‌ ರಾಷ್ಟ್ರಪತಿಗಳಿಗೆ‌ ಬರೆದ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ. ಬಳಿಕ ವಕ್ಫ್ ಬೋರ್ಡ್ ನಿಂದ ಅನ್ಯಾಯಕ್ಕೆ ಒಳಗಾದ ಚಟ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಜನರ ಅಹವಾಲು ಆಲಿಸಲಿದ್ದಾರೆ.

ಮಾಜಿ‌ ಡಿಸಿಎಂ‌ಗಳಾದ ಶ್ರೀರಾಮಲು, ಅಶ್ವತ್ಥನಾರಾಯಣ, ಮಾಜಿ‌ ಕೇಂದ್ರ ಸಚಿವ ಭಗವಂತ ಖೂಬಾ, ಮಾಜಿ‌ ಸಚಿವರಾದ ಭೈರತಿ ಬಸವರಾಜ, ರೇಣುಕಾಚಾರ್ಯ, ಶಾಸಕರಾದ‌ ಪ್ರಭು ಚವ್ಹಾಣ, ಶರಣು ಸಲಗರ್, ಸಿದ್ದು ಪಾಟೀಲ, ಪಿ. ರಾಜಿಜವ್, ಶಶೀಲ್‌ ನಮೋಶಿ, ಎಂಜಿ ಮೂಳೆ, ಪ್ರಕಾಶ ಖಂಡ್ರೆ, ಬಸವರಾಜ ಮತ್ತಿಮುಡ ಮತ್ತು ಬಾಬು ವಾಲಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next