Advertisement
ಈಗಾಗಲೇ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನ್‌ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸೈ ಇತರೆ ನಾಯಕರೆಲ್ಲರೂ ಸೇರಿ ರಾಜ್ಯದಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳಲು ಪ್ರವಾಸ ಕಾರ್ಯಕ್ರಮ ರೂಪಿಸಿದ್ದಾರೆ. 30ರಿಂದ ಪ್ರವಾಸ ಕೈಗೊಂಡಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ, ಬೀದರ್, ಬೆಂ. ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
Related Articles
Advertisement
ವೀರಾಪುರ ಅಭಿವೃದ್ಧಿ: ನಾಡಿನ ಸಹಸ್ರಕೋಟಿ ಜನರ ಕನಸು, ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಗೆ ಜನ್ಮಕೊಟ್ಟಿರುವ ವೀರಾಪುರದಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸ ಆಗಬೇಕು ಮತ್ತು ಅಲ್ಲೊಂದು ಶಿವೈಕ್ಯ ಡಾ. ಶಿವಕುಮಾರಸ್ವಾಮೀಜಿ ಅವರ 108 ಅಡಿ ಎತ್ತರದ ಪ್ರತಿಮೆ ಸಹ ಆಗಬೇಕೆಂಬುದು ಮುಖ್ಯಮಂತ್ರಿಯಾಗಿದ್ದಾಗ ಬಿ. ಎಸ್.ಯಡಿಯೂರಪ್ಪ ಅವರ ಕನಸಾಗಿತ್ತು.
ಸರ್ಕಾರದಿಂದ ಹಣ ಸಹಾಯವನ್ನು ಸಹ ಮಾಡಿದ್ದಾರೆ. ಪರಿಷತ್ ಚುನಾವಣೆ ಮುಗಿದ ನಂತರ ನಾನೂ ಸಹ ವೀರಾಪುರಕ್ಕೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿ ಗಳನ್ನು ಸಂಪರ್ಕಿಸಿ ಕಾಮಗಾರಿಗೆ ಚುರುಕು ಮೂಡಿಸುವುದಾಗಿ ಹೇಳಿದರು.
ವೈಜ್ಞಾನಿಕ ಪರಿಹಾರಕ್ಕೆ ಚಿಂತನೆ: ಕರ್ನಾಟದಲ್ಲಿ ಆಗಿರುವ ಅತಿವೃಷ್ಟಿ ಸಂಬಂಧ ಸಿಎಂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಅತಿವೃಷ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಕ್ಷರಸಃ ರೈತರು ಸಂಕಷ್ಟದಲ್ಲಿ ದ್ದಾರೆ. ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕೊಳಗಾಗಿ ರುವವರಿಗೆ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿಗಳೊಂದಿಗೆ ಸಿಎಂ ಚರ್ಚಿಸಿದ್ದಾರೆ. ನಷ್ಟಕೊಳ್ಳಗಾಗಿರುವ ಎಲ್ಲರಿಗೂ ವೈಜ್ಞಾನಿಕವಾಗಿ ಪರಿಹಾರ ಕೊಡಬೇಕೆಂಬ ಚಿಂತನೆಯನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ
ಬಿಜೆಪಿ ಆಡಳಿತಕ್ಕೆ ಜನಮತ
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಸಾಧಿಸಿ ಜನಪ್ರಿಯ ಗೊಂಡಿದೆ. ಪಕ್ಷದ ಆಡಳಿತದ ಕಾರ್ಯವೈಖರಿ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ಸಹಿಸದ ವಿಪಕ್ಷದ ಕೆಲ ನಾಯಕರು ವ್ಯತಿರಿಕ್ತ ಆರೋಪ ಮಾಡಿ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ. ಇದಕ್ಕೆ ನಮ್ಮ ನಾಯಕರು ತಲೆಕೆಡಿಸಿ ಕೊಳ್ಳುವುದಿಲ್ಲ, ಜಾತ್ಯತೀತವಾಗಿ ಜನಪರ ಆಡಳಿತ ಕೊಡುವುದಷ್ಟೆ ನಮ್ಮ ಪಕ್ಷದ ತತ್ವ ಸಿದ್ಧಾಂತವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್, ಸಮಾಜ ಸೇವಕ ಮಹದೇವಶಾಸ್ತ್ರಿ, ಜಿಪಂ ಮಾಜಿ ಅಧ್ಯಕ್ಷ ಮರಿಸ್ವಾಮಿ, ಪುರಸಭಾ ಸದಸ್ಯರಾದ ಶಿವರುದ್ರಮ್ಮ ವಿಜಯಕುಮಾರ್, ಅನಿಲ್‌ಕುಮಾರ್, ರೇಖಾ ನವೀನ್‌ಕುಮಾರ್ ಇತರರು ಇದ್ದರು.