Advertisement

BJP: ವಿಜಯೇಂದ್ರ, ಅಶೋಕ್‌ ದಿಲ್ಲಿ ಭೇಟಿ ಮುಂದಕ್ಕೆ

09:41 PM Nov 30, 2023 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್‌.ಅಶೋಕ ಅವರ ದಿಲ್ಲಿ ಭೇಟಿ ಮುಂದೂಡಿಕೆಯಾಗಿದೆ.

Advertisement

ಡಿಸೆಂಬರ್‌ 1 ಅಥವಾ 2ರಂದು ಇಬ್ಬರು ದಿಲ್ಲಿಗೆ ತೆರಳಿ ವರಿಷ್ಠರ ಭೇಟಿ ಮಾಡುವ ಸಾಧ್ಯತೆ ಬಗ್ಗೆ ಈ ಹಿಂದೆ ಚರ್ಚೆಯಾಗಿತ್ತು. ಆದರೆ ಪಂಚರಾಜ್ಯಗಳ ಚುನಾವಣಾ ಫ‌ಲಿತಾಂಶ ಹಾಗೂ ಆ ಬಳಿಕ ಎದುರಾಗುವ ವಿದ್ಯಮಾನಗಳ ಬಗ್ಗೆ ವರಿಷ್ಠರು ತಲೆಕೆಡಿಸಿಕೊಂಡಿರುವುದರಿಂದ ಸಮಯಾವಕಾಶ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಭೇಟಿ ಮುಂದೂಡಿಕೆಯಾಗಿದೆ.

ದಿಲ್ಲಿ ಭೇಟಿ ಸಂದರ್ಭದಲ್ಲಿ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಹಾಗೂ ಹೊಸ ಕೋರ್‌ ಕಮಿಟಿ ರಚನೆ ಬಗ್ಗೆ ವರಿಷ್ಠರ ಒಪ್ಪಿಗೆ ಪಡೆಯಲು ಚಿಂತನೆ ನಡೆಸಲಾಗಿತ್ತು. ಜತೆಗೆ ವಿಧಾನಸಭೆ ಉಪನಾಯಕ ಹಾಗೂ ಮುಖ್ಯಸಚೇತಕ, ವಿಧಾನ ಪರಿಷತ್‌ ವಿಪಕ್ಷ ನಾಯಕ, ಉಪನಾಯಕ ಹಾಗೂ ಮುಖ್ಯ ಸಚೇತಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ವರಿಷ್ಠರ ಒಪ್ಪಿಗೆ ಪಡೆಯಲು ನಿರ್ಧರಿಸಲಾಗಿತ್ತು. ಹೀಗಾಗಿ ಬೆಳಗಾವಿ ಅಧಿವೇಶನದ ಬಳಿಕ ದಿಲ್ಲಿ ಪ್ರವಾಸ ಸಾಧ್ಯತೆ ಇದೆ.

ಇಬ್ಬರಲ್ಲಿ ಯಾರಿಗೆ ಅದೃಷ್ಟ?: ಇದೆಲ್ಲದರ ಮಧ್ಯೆ ವಿಧಾನ ಪರಿಷತ್‌ ವಿಪಕ್ಷ ನಾಯಕ ಸ್ಥಾನ ಯಾರಿಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ಕೋಟ ಶ್ರೀನಿವಾಸ ಪೂಜಾರಿ ಹಾಗೂ ರಘುನಾಥ್‌ ಮಲ್ಕಾಪುರೆ ಪೈಕಿ ಯಾರಾದರೊಬ್ಬರಿಗೆ ಅದೃಷ್ಟ ಒಲಿಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next