Advertisement
ಹಿಟ್ನಳ್ಳಿ ಕೃಷಿ ಫಾರ್ಮ್ನಲ್ಲಿ ವಿಜಯಪುರ ಕೃಷಿ ವಿಜ್ಞಾನ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ಜಿಪಂ ಸದಸ್ಯೆ ಕವಿತಾ ರಾಠೊಡ ಮಾತನಾಡಿ, ಮಹಿಳೆ ತನಗೆ ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ದೇಶದ ಪ್ರಧಾನಿ, ರಾಷ್ಟ್ರಪತಿ, ರಕ್ಷಣಾಮಂತ್ರಿ ಹಾಗೂ ಹಣಕಾಸಿನ ಮಂತ್ರಿಯಂಥ ಉನ್ನತ ಹುದ್ದೆಗಳ ಮೂಲಕ ದೇಶದ ಆಡಳಿತ ಚುಕ್ಕಾಣಿ ಹಿಡಿದು, ಯಶಸ್ವಿಯಾಗಿ ನಡೆಸಿದ್ದಾರೆ. ಮತ್ತೂಂದೆಡೆ ಮಹಿಳೆಯರು ಎಲ್ಲ ರಂಗದಲ್ಲೂ ಸಾಧನೆ ಮಾಡುತ್ತಿದ್ದು ಪುರುಷರ ಪ್ರೋತ್ಸಾಹ ಕೂಡ ಸ್ಮರಣಾರ್ಹ ಎಂದರು. ಅಧ್ಯಕ್ಷತೆ ವಹಿಸಿದ್ದ ಸಹ ವಿಸ್ತರಣಾ ನಿರ್ದೇಶಕ ಡಾ| ಆರ್.ಬಿ. ಬೆಳ್ಳಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ಎಲ್ಲ ರಂಗಳಗಳಂತೆ ಕೃಷಿ ರಂಗದಲ್ಲೂ ಅಪಾರ ಸಾಧನೆ ಮಾಡಿದ್ದಾಳೆ. ಕೃಷಿಯಲ್ಲಿ ಭೂಮಿ ಹದಗೊಳಿಸುವದರಿಂದ ಹಿಡಿದು, ಉಳುವುದು, ಬಿತ್ತುವ, ಕಳೆ ತೆಗೆಯುವ, ರಾಶಿ ಮಾಡುವ ಹಂತದವರೆಗೆ ಕೃಷಿಯಲ್ಲಿ ಪುರುಷರಿಗಿಂತ ಹೆಚ್ಚಿನ ಪರಿಶ್ರಮದ ಕೆಲಸ ಮಾಡುವುದೇ ಮಹಿಳೆ. ಇದನ್ನು ಗಮನಿಸಿ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ, ಯುವ ಕೃಷಿ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ವಿಜೇತ ತಾಜಪುರ ಗ್ರಾಮದ ಹಸೀನಾ ಬೇಗಂ ಗೌಸಫೀರ್ ಮೊಕಾಶಿ, ಯುವ ಕೃಷಿ ಮಹಿಳೆ ಭಾರತಿ ಶಿವಾನಂದ ವಿಜಯಪುರ, ಬಸವನಬಾಗೇವಾಡಿ ತಾಲೂಕಿನ ಯುವ ಕೃಷಿ ಮಹಿಳೆ ಲಕ್ಷ್ಮೀ ಅರವಿಂದ ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಕೃಷಿ ಅ ಧಿಕಾರಿ ಬಸವರಾಜ ಬಿರಾದಾರ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀದೇವಿ ಪೂಜಾರಿ, ಅನಿತಾ ಬಿರಾದಾರ, ಕೃಷಿ ವಿಜ್ಞಾನ ಕೇಂದ್ರದ ಡಾ| ಬಿ.ಸಿ.ಕೊಲ್ಹಾರ, ಮಲ್ಲಪ್ಪ, ಶ್ರೀಶೈಲ್ ರಾಠೊಡ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಎಸ್.ಎ. ಬಿರಾದಾರ ಸ್ವಾಗತಿಸಿದರು. ಡಾ| ಸಂಗೀತಾ ಜಾಧವ ನಿರೂಪಿಸಿದರು. ಡಾ| ಶಿವಲಿಂಗಪ್ಪ ಹೊಟಕರ ವಂದಿಸಿದರು.