Advertisement
ಲಾಕ್‌ಡೌನ್ ಬಳಿಕ ವಿಜಯಪುರ ಜಿಲ್ಲಾ ಹಾಪ್‌ಕಾಮ್ಸ್‌ನ ಮಾಸಿಕ ಆದಾಯದಲ್ಲಿ ಮೂರು ಪಟ್ಟು ಹೆಚ್ಚಳವಾಗಿದ್ದರೆ, ಇರುವ ಉದ್ಯೋಗಗಿಳಲ್ಲದೇ ಹೆಚ್ಚುವರಿಯಾಗಿ 10 ಮಂದಿಗೆ ಉದ್ಯೋಗ ಕಲ್ಪಿಸಿದೆ. ಲಾಕ್‌ಡೌನ್ ಬಳಿಕ ಜಿಲ್ಲೆಯಲ್ಲಿ ಎಲ್ಲ ವಹಿವಾಟು ಬಹುತೇಕ ಮುಗ್ಗರಿಸಿದ್ದು, ನಷ್ಟದ ಮಾತೇ ಕೇಳಿ ಬರುತ್ತಿವೆ. ಈ ಹಂತದಲ್ಲಿ ಕೊಯ್ಲು ಹಂತದಲ್ಲಿದ್ದ ವಿವಿಧ ಹಣ್ಣಿನ ಬೆಳೆಗೆ, ತರಕಾರಿ ಸೇರಿ ತೋಟಗಾರಿಕೆ ಉತ್ಪನ್ನಗಳಿಗೆ ಇದ್ದಕ್ಕಿಂದ್ದಂತೆ ಮಾರುಕಟ್ಟೆ ಬಾಗಿಲು ಹಾಕಿದ್ದರಿಂದ ರೈತರು ಕಂಗಾಲಾಗಿದ್ದರು. ಮತ್ತೂಂದೆಡೆ ಹಣ್ಣು-ತರಕಾರಿ ದೊರೆಯದೇ ಗ್ರಾಹಕರು ಚಡಪಡಿಕೆ ಆರಂಭಿಸಿದ್ದರು. ಈ ಉಭಯ ಸಂಕಟ ಅರಿತ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಕೂಡಲೇ ತೋಟಗಾರಿಕೆ ಅಧಿಕಾರಿಗಳನ್ನು ಕರೆಸಿ ಹಾಪ್‌ಕಾಮ್ಸ್ ಮೂಲಕ ತೋಟಗಾರಿಕೆ ಬೆಳೆ ಖರೀದಿ ಹಾಗೂ ಸಂಚಾರಿ ವಾಹನಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲು ಸೂಚಿಸಿದರು.
ನಿತ್ಯವೂ ಲಕ್ಷಾಂತರ ರೂ. ಆದಾಯ ಬರತೊಡಗಿದೆ.
Related Articles
ಜಿಲ್ಲಾಡಳಿತದ ಸೂಚನೆ ಮೇರೆಗೆ ಲಾಕ್ ಡೌನ್ ಹಂತದಲ್ಲಿ ಮೊಟ್ಟ ಮೊದಲು ಸಂಚಾರಿ ಸೇವೆ ಆರಂಭಿಸಿದ ಜಿಲ್ಲೆಯ ಹಾಪ್‌ಕಾಮ್ಸ್ ರಾಜ್ಯದ ಇತರೆ ಜಿಲ್ಲೆಗಳಿಗೆ ಪ್ರೇರಣೆಯಾಗಿದೆ. ಮುಕ್ತ ಮಾರುಕಟ್ಟೆಗಿಂತ ಹೆಚ್ಚಿನ ಬೆಲೆಯಲ್ಲಿ ರೈತರಿಂದ ಹಣ್ಣು-ತರಕಾರಿ ಖರೀದಿಸಿ, ಗ್ರಾಹಕರಿಗೂ ಹೊರೆ ಆಗದ ಬೆಲೆಯಲ್ಲಿ ತರಕಾರಿ-ಹಣ್ಣು ತಲುಪಿಸುವಲ್ಲಿ ಹಾಪ್ ಕಾಮ್ಸ್ ಯಶಸ್ವಿಯಾಗಿದೆ.
Advertisement
ರಾಜ್ಯದಲ್ಲೇ ಲಾಕ್‌ಡೌನ್ ಬಳಿಕ ತರಕಾರಿ-ಹಣ್ಣು ಬೆಳೆಗಾರರ ನೆರವಿಗೆ ಧಾವಿಸಿದ್ದೇ ವಿಜಯಪುರ ಜಿಲ್ಲೆ ಮೊದಲು. ಜಿಲ್ಲಾಧಿಕಾರಿ ವೈ. ಎಸ್.ಪಾಟೀಲ ಮಾರ್ಗದರ್ಶನದಲ್ಲಿ ಹಾಪ್‌ಕಾಮ್ಸ್ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ರೈತರಿಂದ ತೋಟಗಾರಿಕೆ ಉತ್ಪನ್ನ ಖರೀದಿಸಿ ನೇರವಾಗಿ ಗ್ರಾಹಕರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ.ಸಂತೋಷ ಇನಾಮದಾರ
ಉಪ ನಿರ್ದೇಶಕರು, ತೋಟಗಾರಿಕೆ
ಇಲಾಖೆ, ವಿಜಯಪುರ ಲಾಕ್‌ಡೌನ್‌ನಿಂದ ಹಾಸ್ಟೆಲ್ ಗಳು ಬಂದಾಗಿ ಮಾಸಿಕ ಬರುತ್ತಿದ್ದ 10 ಲಕ್ಷ ರೂ. ಆದಾಯಕ್ಕೆ ಖೋತಾ ಆಗಿತ್ತು. ಇದೀಗ ನಮ್ಮ ಸಂಸ್ಥೆಯ 10 ಅಂಗಡಿ ಜೊತೆ 7
ವಾಹನಗಳಲ್ಲೂ ತರಕಾರಿ-ಹಣ್ಣುಗಳನ್ನು ಓಣಿಗಳಲ್ಲಿ ಸಂಚರಿಸಿ ಮನೆ ಮನೆಗೆ ತಲುಪಿಸುತ್ತಿದ್ದೇವೆ. ಇದರಿಂದ ನಿತ್ಯವೂ 1 ಲಕ್ಷ ರೂ. ವಹಿವಾಟು ನಡೆಯುತ್ತಿದ್ದು ಆದಾಯದಲ್ಲಿ ಭಾರಿ ಹೆಚ್ಚಳವಾಗಿದೆ.
ರಾಜು ಹಪ್ಪರಗಿ, ಕಾರ್ಯದರ್ಶಿ
ಹಾಪ್‌ಕಾಮ್ಸ್, ವಿಜಯಪುರ ಹಾಪ್‌ಕಾಮ್ಸ್ ಸಹಾಯವಾಣಿ
ರಾಜು ಹಿಪ್ಪರಗಿ 9448037007, ದೋಂಡಿರಾಮ ಗಾಯಕವಾಡ 9972894628, ಬೀರಪ್ಪ ದರ್ಗಾ 9632367661, ರವಿ ಶೆಟ್ಟಿ 9731581229, ಲಕ್ಷ್ಮೀ ರೇಬಿನಾಳ 9611361474, ಕಲ್ಲಪ್ಪ ರೇಬಿನಾಳ 9620972210, ಭೀಮು ನಾಗಠಾಣ 9880048593, ಮೀನಾಕ್ಷಿ ತೊದಲಬಾಗಿ 8880327030, ಭಾರತಿ ತೊದಲಬಾಗಿ 8904199290, ಗಿರೀಶ ತೊದಲಬಾಗಿ 9972699290, ಮಂಜುನಾಥ ಹೊಸಕೋಟೆ 7676423370, ಅನಿಲ ಸೂರ್ಯವಂಶಿ 9972058644, ದರ್ಶನ ಸೂರ್ಯವಂಶಿ : 9986366275. ಜಿ.ಎಸ್. ಕಮತರ