Advertisement

ರೈತರ ಸರ್ವಾಂಗೀಣ ಅಭಿವೃದ್ಧಿಗೆ ಪಿಕೆಪಿಎಸ್‌ ಬದ್ಧ: ಪಾಟೀಲ

02:57 PM Aug 30, 2019 | Naveen |

ವಿಜಯಪುರ: ಶತಮಾನದ ಸಂಭ್ರಮ ಕಂಡಿರುವ ಉಕ್ಕಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅನ್ನದಾತರ ಸರ್ವಾಂಗೀಣ ಅಭಿವೃದ್ಧಿ ಬಯಸುತ್ತಿದೆ. ಸೆ.5ರಂದು ಸಂಘದ ಶತಮಾನೋತ್ಸವ ಸಂಭ್ರಮ ನಡೆಯುವ ಕಾರಣ ಇದರ ಸ್ಮರಣೆಗಾಗಿ ಸದಸ್ಯರ ರೈತರ ಸಹಕಾರದಿಂದ ಸಂಘದ 34 ಗುಂಟೆ ಸ್ಥಳದಲ್ಲಿ ವಿವಿಧ ಸೌಲಭ್ಯ ಕಲ್ಪಿಸಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ಪಿಕೆಇಎಸ್‌ ಅಧ್ಯಕ್ಷ ಅಣ್ಣಾಸಾಹೇಬಗೌಡ ಪಾಟೀಲ ಹೇಳಿದರು.

Advertisement

ಉಕ್ಕಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ 100ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶತಮಾನದ ಸಂಭ್ರಮದ ಸವಿನೆನಪಿಗಾಗಿ ಸಂಘದ ನಿವೇಶನದಲ್ಲಿ ಮಣ್ಣು ಪರಿಷ್ಕರಣಾ ಕೇಂದ್ರ, ಲೈಬ್ರರಿ ಹಾಗೂ ಸಮುದಾಯ ಭವನವನ್ನು ನಿರ್ಮಿಸುವ ಗುರಿ ಹಾಕಿಕೊಂಡಿದ್ದೇವೆ ಎಂದರು.

ರೈತರು ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವರತಿ ಮಾಡಿದ ಫ‌ಲವೇ ಇಂದು ನಮ್ಮ ಸಂಸ್ಥೆ ಆರ್ಥಿಕವಾಗಿ ಬಲಿಷ್ಟವಾಗಿ ಬೆಳೆಯಲು ಸಾಧ್ಯ. ಬ್ಯಾಂಕಿನ ಎಲ್ಲ ಸದಸ್ಯರುಗಳು ಆಡಳಿತ ಮಂಡಳಿಯ ಸದಸ್ಯರುಗಳು ಹಾಗೂ ಸಂಘದ ಸಿಬ್ಬಂದಿ ಸಹಕಾರ ಇಲ್ಲಿ ಸ್ಮರಣಾರ್ಹ ಎಂದರು.

ಸಹಕಾರಿ ಸಂಘದ ಮೂಲ ಆಶಯದಂತೆ ಸಹಕಾರ ತತ್ವದ ಅನುಸಾರವಾಗಿ ಸದಸ್ಯರ ಮತ್ತು ಗ್ರಾಹಕರ ಹಿತಕ್ಕಾಗಿ ಆದ್ಯ ಗಮನ ಕೊಡುತ್ತಿದೆ. ರೈತರಿಗೆ ನಬಾರ್ಡ್‌ ಯೋಜನೆಯ ಸಂಪೂರ್ಣ ಸದ್ಬಳಕೆ ರೈತರಿಗೆ ಸಿಗುವ ರೀತಿಯಲ್ಲಿ ಕಾರ್ಯ ಯೋಜನೆ ರೂಪಿಸುವುದಾಗಿ ಭರವಸೆ ನೀಡಿದರು.

ಸಂಘದ ನಿರ್ದೇಶಕ ಎಂ.ಡಿ. ದೊಡಮನಿ ಮಾತನಾಡಿ, 4987 ಸದಸ್ಯರನ್ನು ಹೊಂದಿರುವ ಸಂಘವು 1.97 ಕೋಟಿ ರೂ. ಶೇರು ಬಂಡವಾಳ ಹಾಗೂ 21.75 ಕೋಟಿ ರೂ. ಠೇವಣಿ ಹೊಂದಿದೆ. 2.39 ಕೋಟಿ ರೂ. ಕಾಯ್ದಿಟ್ಟ ಹಾಗೂ ಇತರ ನಿಧಿ ಹೊಂದಿದೆ. ಹೊಂದಿದ್ದು, 13.70 ಕೋಟಿ ರೂ. ಸಾಲ ವಿತರಿಸಿದೆ. 34.73 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 15.11 ಕೋಟಿ ರೂ. ಹೂಡಿಕೆ ಮಾಡಿದೆ. 14.95 ಕೋಟಿ ರೂ. ಸಾಲ ಬರಬೇಕಿದ್ದು, ಸಾಲ ಪಡೆದವರು ನಿಗದಿತ ಸಮಯದಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ ನಮ್ಮ ಸಂಘ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯ ಎಂದರು.

Advertisement

ಸಿಇಒ ಎಲ್.ಎನ್‌. ಬಿರಾದಾರ ಮಾತನಾಡಿದರು. ನಿರ್ದೇಶಕರಾದ ಅಪ್ಪಾಸಾಹೇಬಗೌಡ ಇಂಡಿ, ಶರಣಪ್ಪ ಪುರಾಣಿ, ಅಣ್ಣಾರಾಯ ಆಕಳವಾಡಿ, ರಾಯಪ್ಪ ಜಿಡ್ಡಿ, ಶಕೀಲ ಕರೋಶಿ, ಶೋಭಾ ಮಸಳಿ, ಮಹಾದೇವಿ ಸಿಂದಗಿ, ಮಲ್ಲಪ್ಪ ದೊಡಮನಿ ಇತರರು ಉಪಸ್ಥಿತರಿದ್ದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ರಾಮನಗೌಡ ಬಿರಾದಾರ ಸ್ವಾಗತಿಸಿದರು. ಬಿ.ಬಿ.ಬಿರಾದಾರ ನಿರೂಪಿಸಿದರು. ರಮೇಶ ಮಸಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next