Advertisement

Vijayapura; ಮೂವರು ಬೈಕ್ ಕಳ್ಳರ ಬಂಧನ: 26 ಬೈಕ್ ವಶಕ್ಕೆ

06:16 PM Mar 26, 2024 | Team Udayavani |

ವಿಜಯಪುರ: ನಗರದಲ್ಲಿ ಬೈಕ್ ಕಳ್ಳತನ ಪತ್ತೆ ಹಚ್ಚಿರುವ ಪೊಲೀಸರು ಮೂವರನ್ನು ಬಂಧಿಸಿ, 26 ಬೈಕ್ ಹಾಗೂ 29 ಮೊಬೈಲ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗದ್ದಾರೆ.

Advertisement

ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಪಿಐ ಮಹಾಂತೇಶ ದಾಮಣ್ಣವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ನಡೆಸಿ ದಾಳಿ ನಡೆಸಿ ಮೂವರು ಆರೋಪಿಗಳು ಸಮೇತ ಕಳ್ಳತವಾಗಿದ್ದ ಬೈಕ್-ಮೊಬೈಲ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳವಾರ ನಗರದಲ್ಲಿ ತುರ್ತು ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಎಸ್ಪಿ ಋಷಿಕೇಶ, ಬಂಧಿತರಿಂದ 26 ವಿವಿಧ ಕಂಪನಿಯ ಬೈಕ್ ಗಳು ಹಾಗೂ 29 ಮೊಬೈಲ್ ಗಳು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಿವರಿಸಿದರು.

ಬಂಧಿತರನ್ನು ವಿಜಯಪುರ ನಗರದ ಜೆಎಂ ರಸ್ತೆ ಕೆ.ಎಚ್.ಬಿ. ಕಾಲೋನಿ ನಿವಾಸಿಗಳಾದ ಮೊಶೀನ್ ಕಲಾದಗಿ, ಸದ್ದಾಂ ಮುತವಲ್ಲಿ ಹಾಗೂ ನಗರದ ಯೋಗಾಪುರ ನಿವಾಸಿಯಾಗಿರುವ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಚಿಂಚಗಂಡಿ ಗ್ರಾಮದ ಸುನೀಲ ಗಡ್ಡಿ ಬಂಧಿತರು.

Advertisement

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಿಪಿಐ ಮಹಾಂತೇಶ ದಾಮಣ್ಣವವರ ನೇತೃತ್ವದ ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿದ ಎಸ್ಪಿ, ಇಲಾಖೆಯಿಂದ ಅಭಿನಂದನಾ ಪ್ರತ್ರ ನೀಢುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next