ವಿಜಯಪುರ : ಜಿಲ್ಲೆಯ ತಿಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಂಪತಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಬಿಜ್ಜರಗಿ ಗ್ರಾಮದ 22 ವರ್ಷದ ಭಾಗ್ಯಶ್ರೀ ತಂದೆ ಅಶೋಕ ಚೂರಿ ಈಕೆಯ ಶವ ಮನೆಯಲ್ಲಿ ಪತ್ತೆಯಾಗಿದ್ದು, ಇದೇ ಮನೆಯ ಛಾವಣಿಗೆ ನೇಣುಬಿಗಿದ ಸ್ಥಿತಿಯಲ್ಲಿ ಭಾಗ್ಯಶ್ರೀ ಪತಿ 26 ವರ್ಷದ ಇಂದ್ರಜಿತ್ ಚೂರಿ ಶವ ಪತ್ತೆಯಾಗಿದೆ.
ಮೃತ ಭಾಗ್ಯಶ್ರೀ ಅಕ್ಕ ನೀಡಿದ ಮಾಹಿತಿ ಮೇರೆಗೆ ಆಕೆಯ ತಾಯಿ ಮರೆವ್ವ ಶಿವಪ್ಪ ಚಲವಾದಿ ಬಸವನಬಾಗೇವಾಡಿ ತಾಲೂಕು ದಿಂಡವಾರ ಗ್ರಾಮದಿಂದ ಬಂದು ನೋಡುವಾಗ ಇಬ್ಬರೂ ಅನುಮಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು ಬೆಳಕಿಗೆ ಬಂದಿದೆ.
ಅಳಿಯ ಇಂದ್ರಜಿತ್ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರೆ, ಮಗಳು ಭಾಗ್ಯಶ್ರೀ ಅನುಮಾನಾಸ್ಪದ ರೀತಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಈ ಸಾವಿನಲ್ಲಿ ಸಂಶಯವಿದ್ದು, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮರೆವ್ವ ಚಲವಾದಿ ತಿಕೋಟ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಂಪತಿ ಶವವನ್ನು ಮರಣೋತ್ತರ ಪರೀಕ್ಷಗೆ ಕಳಿಸಿ, ತನಿಖೆ ಆರಂಭಿಸಿದ್ದಾರೆ.