Advertisement

Vijayapura: ಶ್ರೀಗಂಧದ ಮರ ಕಳ್ಳತನ ಪ್ರಕರಣ: ಆರೋಪಿಗೆ 5 ವರ್ಷ ಜೈಲು, 1 ಲಕ್ಷ ದಂಡ

07:46 PM Sep 04, 2024 | sudhir |

ವಿಜಯಪುರ: 2019ರಲ್ಲಿ ಶ್ರೀಗಂಧದ ಮರವನ್ನು ಕಡಿದು ಸಾಗಿಸಿದ ಆರೋಪಿಯೋರ್ವನಿಗೆ ಐದು ವರ್ಷ ಜೈಲು ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದ ರವಿ ರಾಠೋಡ ಶಿಕ್ಷೆಗೆ ಗುರಿಯಾದ ಅಪರಾಧಿ.

Advertisement

ಇಂಡಿ ತಾಲೂಕಿನ ಸಾತಲಗಾಂವ ಕ್ರಾಸ್ ಸಮೀಪ ಮಿರಗಿ ಗ್ರಾಮದ ಜಮದಗ್ನಿ ಭೀಮರಾಯ ಹಳ್ಳಿ ಎಂಬುವರು ತಮ್ಮ ಜಮೀನಿನ ದಂಡೆಗೆ ಶ್ರೀಗಂಧದ ಗಿಡಗಳನ್ನು ಬೆಳೆದಿದ್ದರು. ಆರೋಪಿ ರವಿ ಕಳ್ಳತನದಿಂದ ಈ ಗಿಡಗಳನ್ನು ಕಡಿದು ತುಂಡು ಮಾಡಿ ಒಂದು ಚೀಲದಲ್ಲಿ ಹಾಕಿಕೊಂಡು ಬೈಕ್‌ನಲ್ಲಿ ಸಾಗುತ್ತಿದ್ದಾಗ ಆಗಿನ ಇಂಡಿ ಗ್ರಾಮೀಣ ಠಾಣೆಯ ಪಿಎಸ್‌ಐ ಎಸ್.ಶಿರಗುಪ್ಪಿ ಮತ್ತು ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದ. ನಂತರದಲ್ಲಿ ಎಎಸ್‌ಐ ಡಿ.ಎನ್.ತಳವಾರ ಅವರು ಕರ್ನಾಟಕ ಅರಣ್ಯ ಕಾಯ್ದೆಯ ಕಲಂ 86, 87 ಮತ್ತು ಐಪಿಸಿ ಸೆಕ್ಷನ್ 379ರಡಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಧೀಶ ಶಿವಾಜಿ ಅನಂತ ನಾಲವಾಡೆ ಅವರು ಆರೋಪಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳವಾರ ಈ ತೀಪು ನೀಡಿದ್ದಾರೆ. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಹೆಚ್.ಹಕೀಮ ವಾದ ಮಂಡಿಸಿದ್ದರು.

ಇದನ್ನೂ ಓದಿ: Belagavi: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿಎ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

Advertisement

Udayavani is now on Telegram. Click here to join our channel and stay updated with the latest news.

Next