Advertisement

Vijayapura; ಕುಡಿಯುವ ನೀರಿಗೆ ಕನ್ನ: ಎಂಟು ರೈತರ ವಿರುದ್ಧ ಪ್ರಕರಣ ದಾಖಲು

06:27 PM Oct 27, 2023 | keerthan |

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ವಿಜಯಪುರ ಜಿಲ್ಲೆಯ ಕುಡಿಯುವ ನೀರಿಗಾಗಿ ಕೆರೆ ತುಂಬಿಸಲು ಕಾಲುವೆಗೆ ಹರಿಸುತ್ತಿದ್ದ ನೀರನ್ನು ಅಕ್ರಮವಾಗಿ ಕೃಷಿ ಚಟವಟಿಕೆಗೆ ಬಳಸಿಕೊಂಡ ಆರೋಪದಲ್ಲಿ ಎಂಟು ರೈತರ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರೀ ಜಲಾಶಯದ ಹಿನ್ನೀರಿನ ಏತ ನೀರಾವರಿ ಯೋಜನೆಗಳ ಮೂಲಕ ಜಿಲ್ಲೆಯಲ್ಲಿ 106 ಕೆರೆಗಳಿಗೆ ನೀರು ತುಂಬಿಸಲು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ.

ಅಲ್ಲದೇ ಕುಡಿಯುವ ನೀರಿನ ಉದ್ಧೇಶದ ನೀರಿನ ದುರ್ಬಳಕೆ ತಡೆಯುವುದಕ್ಕಾಗಿ ನೀರು ಹರಿಸುವ ಕಾಲುವೆಗಳ ಮೇಲೆ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೆ ತರಲಾಗಿದೆ. ಇದರ ಹೊರತಾಗಿಯೂ ಮುಳವಾಡ ಏತ ನೀರಾವರಿ ಯೋಜನೆಯಿಂದ 100 ಕೆರೆಗಳಿಗೆ ನೀರು ತುಂಬಿಸಲು ಕಾಲುವೆಗಳಿಗೆ ಹರಿಸುತ್ತಿರುವ ನೀರನ್ನು ಅಕ್ರಮವಾಗಿ ಕೃಷಿ ಚಟುವಟಿಕೆಗೆ ಬಳಸಿಕೊಂಡ ಎಂಟು ರೈತರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೆಬಿಜೆಎನ್‍ಎಲ್ ಬಸವನಬಾಗೇವಾಡಿ ವೃತ್ತದ ಗೋವಿಂಧ ರಾಠೋಡ ಇಂಡಿ ಭಾಗದಲ್ಲಿ ಅಕ್ರಮವಾಗಿ ಕೃಷಿ ಚಟುವಟಿಕೆಗಳಿಗೆ ನೀರು ಬಳಸಿಕೊಂಡ ಆರೋಪದಲ್ಲಿ ರೈತರ ವಿರುದ್ಧ ದೂರು ದಾಖಲಾಸಿದ್ದಾಗಿ ವಿವರಿಸಿದ್ದಾರೆ.

ಮತ್ತೊಂದೆಡೆ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲೆ ರೈತರಿಗೆ ಮನವಿ ಮಾಡಿರುವ ಜಿಲ್ಲಾಧಿಕಾರಿ ಭೂಬಾಲನ್, ಕುಡಿಯುವ ನೀರಿಗಾಗಿ ಕೆರೆಗಳಿಗೆ ನೀರು ತುಂಬಿಸಲು ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಕೆರೆಗಳು ತುಂಬಿದಲ್ಲಿ ಸಹಜವಾಗಿ ಅಂತರ್ಜಲ ಹೆಚ್ಚಿ, ರೈತರಿಗೂ ಕೃಷಿ ಬಳಕೆಗೆ ಅನುಕೂಲವಾಗಲಿದೆ ಎಂದಿದ್ದಾರೆ.

Advertisement

ಇದರ ಹೊರತಾಗಿಯೂ ರೈತರು ಕೆರೆರಗಳಿಗೆ ನೀರು ತುಂಬಿಲಸು ಕಾಲುವೆಗಳಿಗೆ ಹರಿಸುತ್ತಿರುವ ನೀರನ್ನು ಅಕ್ರಮವಾಗಿ ಬಳಸಿಕೊಳ್ಳಬಾರದು. ಕಾಲುವೆಗಳಿಗೆ ನಿಯಮ ಬಾಹೀರವಾಗಿ ಪೈಪ್ ಅಳವಡಿಸುವುದು, ಪಂಪ್‍ಸೆಟ್ ಮೂಲಕ ನೀರು ಎತ್ತುವುದು, ಕಾಲುವೆಗಳನ್ನು ಪಡೆಯಬಾರದು. ಬದಲಾಗಿ ಭೀಕರ ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡುವ ಜಿಲ್ಲಾಡಳಿತದ ಆಶಯ ಈಡೇರಿಸಲು ರೈತರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದಲ್ಲದೇ ಜಿಲ್ಲೆಯ 6 ಕೆರೆಗಳಿಗೆ ನೀರು ತುಂಬಿಸಲು ಅ.28 ರಿಂದ ಚಿಮ್ಮಲಗಿ ಏತ ನೀರಾವರಿ ಕಾಲುವೆಗಳ ಮೂಲಕವೂ ನೀರು ಹರಿಸಲಾಗುತ್ತಿದ್ದು, ಕಾಲುವೆ ಮೇಲೆ ನಿಷೇಧಾಜ್ಞೆ ಜಾರಿಗೆ ತರಲಾಗುತ್ತಿದೆ. ಕಾರಣ ರೈತರು ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ಕಾಲುವೆಗಳಿಗೆ ಹರಿಸುವ ನೀರನ್ನು ಅಕ್ರಮವಾಗಿ ಕೃಷಿ ಚಟುವಟಿಕೆಗೆ ಬಳಸದಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next