ವಿಜಯಪುರ : ಉಪಾಹಾರ ಸೇವಿಸಿದ ಸರ್ಕಾರಿ ವಸತಿ ಶಾಲೆಯ ಇಪ್ಪತ್ತೈದು ವಿದ್ಯಾರ್ಥಿನಿಯರು ವಾಂತಿ- ಬೇಧಿಯಿಂದ ಅಸ್ವಸ್ಥರಾದ ಘಟನೆ ವರದಿಯಾಗಿದೆ.
ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಡವಲಗಾ ಗ್ರಾಮದಲ್ಲಿ ಘಟನೆ ತಡವಲಗಾ ಗ್ರಾಮದ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯಲ್ಲಿ ಜರುಗಿದೆ. ಮಂಗಳವಾರ ಬೆಳಿಗ್ಗೆ ಉಪಾಹಾರದಲ್ಲಿ ಅವಲಕ್ಕಿ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದಾರೆ. ವಿದ್ಯಾರ್ಥಿನಿಯರು ಸೇವಿಸಿದ ಆಹಾರದಲ್ಲಿ ವಿಷಯುಕ್ತ ಪದಾರ್ಥ ಸೇರಿರುವ ಸಾಧ್ಯತೆಯಿದ್ದು ಇದರಿಂದಲೇ ಸಮಸ್ಯೆಯಾಗಿದೆ ಎಂದು ಶಂಕಿಸಲಾಗಿದೆ.
ತಡವಲಗಾ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ 25 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥ ಮಕ್ಕಳನ್ನು ಕೂಡಲೇ ತಡವಲಗಾ ಸಮುದಾಯದ ಆರೋಗ್ಯ ಕೇಂದ್ರಕ್ಕೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಿಕಿತ್ಸೆ ಪಡೆದಿರುವ ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಅಪಾಯದಿಂದ ಪಾರಾಗಿದ್ದಾರೆ ವಿಷಯ ತಿಳಿದ ಇಂಡಿ ಬಿಇಒ ವಸಂತ ರಾಠೋಡ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ.
ಮತ್ತೊಂದೆಡೆ ಮಕ್ಕಳ ಪಾಲಕರು ವಿಷಯ ತಿಳಿದು ಆತಂಕದಿಂದ ಆಸ್ಪತ್ರೆಯತ್ತ ಧಾವಿಸಿ, ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ.
ಇದನ್ನೂ ಓದಿ : ರವನೀತ್ ಸಿಂಗ್ ಕಾಂಗ್ರೆಸ್ ಸಂಸದನಿಗೆ ಕೊಲೆ ಬೆದರಿಕೆ