ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಬುಧವಾರ ನಭೋಮಂಡಲದಲ್ಲಿ ವಿಚಿತ್ರ ವಿಸ್ಮಯ ಕಂಡು ಬಂದಿದೆ. ಮೋಡ ಕವಿದ ವಾತಾರಣದ ಮಧ್ಯೆಯೂ ಗೋಚರಿಸಿದ ಸೂರ್ಯನ ಸುತ್ತಲೂ ಕಾಮನಬಿಲ್ಲು ಮಾದರಿಯ ಉಂಗುರು ಆವರಿಸಿದ್ದು ಖಗೋಳ ಆಸಕ್ತರ ಅಚ್ಚರಿಗೊಳಿಸಿದೆ.
ಜಿಲ್ಲೆಯ ತಿಕೋಟಾ ತಾಲೂಕಿನ ಘೋಣಸಗಿ ಪರಿಸರದಲ್ಲಿ ಈ ಅಚ್ಚರಿಯ ಬೆಳವಣಿಗೆ ಕಂಡುಬಂದಿದ್ದು, ಘೋಣಸಗಿ ತಾಂಡಾದಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪರಮೇಶ್ವರ ಗದ್ಯಾಳ ಇದನ್ನು ಗಮನಿಸಿ ವಿಡಿಯೋ, ಚಿತ್ರ ತೆಗೆದಿದ್ದಾರೆ.
ಅಲ್ಲದೇ ಖಗೋಳದಲ್ಲಿ ಅಪರೂಪವಾಗಿ ಕಂಡು ಬಂದ ವಿಸ್ಮಯದ ಕುರಿತು ತಮ್ಮ ಶಾಲಾ ಮಕ್ಕಳಿಗೆ ಕಾಮನಬಿಲ್ಲಿನ ವೃತ್ತದಲ್ಲಿ ಸೆರೆಯಾಗಿರುವ ಆದಿತ್ಯನ ಅವತಾರವನ್ನು ತೋರಿಸಿ, ವಿವರಣೆ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಕಳೆದ ಒಂದೆರಡು ವಾರದಿಂಧ ಬಹುತೇಕ ಮೋಡ ಕವಿದ ವಾತಾವರಣವೇ ಇದ್ದು, ಸೂರ್ಯ ದರ್ಶನ ಅಪರೂಪವಾಗಿದೆ. ಇದರ ಮಧ್ಯೆಯೂ ನಭೋ ಮಂಡಲದಲ್ಲಿ ರವಿನ್ನು ಆವರಿಸಿರುವ ವರ್ತುಕಾಮನಬಿಲ್ಲು ಖಗೋಳ ತಜ್ಞರು, ಆಸಕ್ತರ ಆಸಕ್ತಿ ಕೆರಳಿಸುವಂತೆ ಮಾಡಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಎಷ್ಟೇ ಪ್ರಬಲ ವ್ಯಕ್ತಿಯಾಗಿದ್ದರೂ ಶಿಕ್ಷೆ ಕಟ್ಟಿಟ್ಟ ಬುತ್ತಿ