Advertisement
ಮಂಗಳವಾರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ಬೆಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರೇಡಿಯೋ ಜಾಕಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
Related Articles
Advertisement
ರಾಯಚೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಡಾ|ಬಿ.ಎಂ. ಶರಬೇಂದ್ರ ಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶ್ರವಣ ಪರಂಪರೆ ಕಡಿಮೆಯಾಗುತ್ತಿದೆ. ದೃಶ್ಯ ಮಾಧ್ಯಮಗಳಿಂತ ಶ್ರವಣ ಮಾಧ್ಯಮ ನಮ್ಮ ಮೆದುಳಿಗೆ ಹೆಚ್ಚಿನ ಕೆಲಸ ನೀಡುತ್ತದೆ. ಶ್ರವಣ ಮಾಧ್ಯಮ ಸೃಜನಶೀಲ ಕ್ರೀಯೆಯನ್ನು ವೃದ್ಧಿಸುತ್ತದೆ. ಶ್ರವಣ ಮಾಧ್ಯಮದಲ್ಲಿ ನಿರೂಪಕನ ಪಾತ್ರ ಅತ್ಯಂತ ಹಿರಿದಾಗಿದೆ. ಹೀಗಾಗಿ ನಿರೂಪಕ ಕೇಳುಗರಿಗೆ ಹಿತವಾಗುವ ರೀತಿಯಲ್ಲಿನಿರೂಪಣೆ ಮಾಡಬೇಕಾಗುತ್ತದೆ. ಕೇಳುಗರನ್ನ ಹಿಡಿದಿಡುವುದು ಸುಲಭದ ಮಾತಲ್ಲ ಬಹಳ ಕಷ್ಟದ ವಿಷಯ. ಅಂತಹ ಕೇಳುಗರನ್ನು ನಿರೂಪಕ ಹಿಡಿದಿಟ್ಟುಕೊಳ್ಳಬೇಕಾದರೆ ಅತ್ಯಂತ ವಿಶಿಷ್ಟವಾಗಿ ಕೇಳುಗರ ಮನ ಮುಟ್ಟುವ ಶಬ್ದಗಳ ಬಳಕೆ, ಭಾಷಾ ಜ್ಞಾನ ಹೊಂದಿರಬೇಕಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಓಂಕಾರ ಕಾಕಡೆ ಮಾತನಾಡಿ, ನಮ್ಮ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಹಲವಾರು ವಿಷಯದ ಮೇಲೆ ಈ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದ್ದು, ನೀವೆಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಿ. ರೇಡಿಯೋ ಜಾಕಿ ಕಾರ್ಯಾಗಾರದಲ್ಲಿ ನಿರೂಪಣೆ, ಶಬ್ದ ಬಳಕೆ, ಧ್ವನಿ ಏರಿಳಿತ, ಮುಂತಾದ ಹಲವಾರು ವಿಷಯಗಳ ಕುರಿತು ನಿಮಗೆ ತಿಳಿಸಿಕೊಡಲಾಗುತ್ತದೆ. ಅತ್ಯಂತ ಸಂಪತ್ಭರಿತ ಕಾರ್ಯಾಗಾರ ಇದಾಗಿರಲಿದ್ದು, ಈ ಕಾರ್ಯಾಗಾರದ ಉಪಯುಕ್ತತೆಯನ್ನು ಎಲ್ಲರೂ ಪಡೆದುಕೊಳ್ಳಿ. ದೂರದ ಊರುಗಳಿಂದ ಬಂದಂತಹ ವಿದ್ಯಾರ್ಥಿನಿಯರು ಈ ಮೂರು ದಿನಗಳ ಕಾಲ ಕಾರ್ಯಾಗಾರದಲ್ಲಿ ಅತ್ಯಂತ ಕ್ರಿಯಾಶೀಲತೆಯಿಂದ ಪಾಲ್ಗೊಂಡು ಇದರ ಸದುಪಯೋಗ ಪಡೆದು ಮರಳಿದರೆ ನಿಮಗಿಂತ ಹೆಚ್ಚಿನ ಸಂತಸ ನಮ್ಮೆಲ್ಲರಿಗೂ
ಆಗುತ್ತದೆ ಎಂದು ಹೇಳಿದರು. ಡಾ| ತಹಮೀನಾ ಕೋಲಾರ ಸ್ವಾಗತಿಸಿದರು. ಸಂದೀಪ ಪ್ರಾಸ್ತಾವಿಕ ಮಾತನಾಡಿದರು. ದೀಪಾ ತಟ್ಟಿಮನಿ, ಸೃಷ್ಟಿ ಜವಳೆಕರ ಪರಿಚಯಿಸಿದರು. ಜ್ಞಾನಜ್ಯೋತಿ ಚಾಂದಕವಠೆ ನಿರೂಪಿಸಿದರು.