Advertisement

ವಿಠ್ಠಲ ವಿಠ್ಠಲ.. ಪಾಂಡುರಂಗ..

10:52 AM Jul 08, 2019 | Naveen |

ವಿಜಯಪುರ: ಆಷಾಢ ಏಕಾದಶಿಗೆ ವಿಠ್ಠಲನ ದರ್ಶನಕ್ಕೆ ದಿಂಡಿ ಕನ್ನಡ ನಾಡಿನ ಭಕ್ತರ ದಂಡು ಪಂಢರಪುರ ಕ್ಷೇತ್ರದತ್ತ ಹೆಜ್ಜೆ ಹಾಕುತ್ತಿದೆ. ಮಧ್ಯ ಕರ್ನಾಟಕದಿಂದ ಉತ್ತರ ಕರ್ನಾಟಕದವರೆಗಿನ ಬಹುತೇಕ ಜಿಲ್ಲೆಗಳ ಭಕ್ತರು ವಿಠ್ಠಲನ ದರ್ಶನಕ್ಕಾಗಿ ಅಬಾಲವೃದ್ಧ್ದರಾದಿಯಾಗಿ ಬಸವನಾಡಿನ ಮಾರ್ಗವಾಗಿ ಪಾದಯಾತ್ರೆ ಹೊರಿಟಿದ್ದಾರೆ. ಪಾದಯಾತ್ರೆಯಲ್ಲಿ ಪಂಢರಪುರಕ್ಕೆ ಹೊರಟ ದಿಂಡಿಯಾತ್ರೆ ಭಕ್ತರ ದಂಡು ಕಳೆದ ಮೂರ್ನಾಲ್ಕು ದಿನಗಳಿಂದ ಗುಮ್ಮಟ ನಗರಿ ಮಾರ್ಗವಾಗಿ ಹೆಜ್ಜೆ ಹಾಕುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ.

Advertisement

ಮಹಾರಾಷ್ಟ್ರದ ಪಂಢರಪುರ ವಿಠೊಭನನ್ನು ಆರಾಧಿಸುವ ಲಕ್ಷಾಂತರ ಭಕ್ತರು ಕರ್ನಾಟಕ ರಾಜ್ಯದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆ ಹೀಗೆ ವಿವಿಧ ಜಿಲ್ಲೆಗಳಲ್ಲಿದ್ದಾರೆ. ವಿಠ್ಠಲ, ವಿಠೊಭ, ಪಾಂಡುರಂಗ ಎಂದು ಕರೆಸಿಕೊಳ್ಳುವ ಪಂಢರಪುರ ವಾಸಿ ವಿಠ್ಠಲ ವಿಜಯನಗರ ಸಾಮ್ರಾಜ್ಯದ ವಿಜಯ ವಿಠuಲನೇ ಎಂದು ಕರ್ನಾಟಕದ ಜನ ನಂಬಿಕೊಂಡಿದ್ದಾರೆ. ಹೀಗಾಗಿ ಜಾತಿ-ಮತ ಪಂಥಗಳ ಜಂಜಡ ಇಲ್ಲದೇ ಎಲ್ಲ ಸಮುದಾಯ ಜನರು ವಿಠ್ಠಲನನ್ನು ಆರಾಧಿಸುತ್ತ ಪಾದಯಾತ್ರೆಯಲ್ಲಿ ಪಂಢರಪುರಕ್ಕೆ ಹೊರಟಿದ್ದಾರೆ.

ಪ್ರತಿ ವರ್ಷ ಆಷಾಢದ ಏಕಾದಶಿ ದಿನ ನಡೆಯುವ ವಿಶೇಷ ಜಾತ್ರೆಯಲ್ಲಿ ಪಾಲ್ಗೊಳ್ಳಲು ಭಕ್ತರು ಪಾದಯಾತ್ರೆಯಲ್ಲಿ ತೆರಳುತ್ತಾರೆ. ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳ ಭಕ್ತರು ಸುಮಾರು 500 ಕಿ.ಮೀ. ದೂರದಿಂದ ಮಕ್ಕಳು, ಮಹಿಳೆಯರು, ವೃದ್ಧರು ಎನ್ನದೇ ಎಲ್ಲ ವಯೋಮಾನದ ಪಾದಯಾತ್ರೆಯಲ್ಲಿ ಪಂಢರಪುರಕ್ಕೆ ತೆರಳುತ್ತಿದ್ದಾರೆ.

ಪಾದಯಾತ್ರೆಯಲ್ಲಿ ಪಂಢರಪುರಕ್ಕೆ ತೆರಳುವ ಈ ಭಕ್ತರನ್ನು ವಾರಕರಿ ಪರಂಪರೆ ಎಂದು ಕರೆಯಲಾಗುತ್ತದೆ. ಪಾದಯಾತ್ರೆ ತೆರಳುವ ಭಕ್ತರು ತುಳಸಿಮಾಲೆ ಧರಿಸಿ ಪ್ರೀತಿ, ಮಮತೆ, ತ್ಯಾಗ, ಆಹಿಂಸೆ, ಮಾನವೀಯತೆ, ಕ್ಷಮಾ ಗುಣಗಳಂಥ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾತ್ವಿಕ ಜೀವನ ನಡೆಸಬೇಕು ಎಂದು ದೀಕ್ಷೆ ಪಡೆದಿರುತ್ತಾರೆ.

ತಂಡ ತಂಡವಾಗಿ ವಾರಕರಿ ಕೆಲವು ಭಕ್ತರು ಪಾದಯಾತ್ರೆಗೆ ತೆರಳುತ್ತಾರೆ. ಪಾದಯಾತ್ರೆ ತಂಡದಲ್ಲಿ 10ರಿಂದ 200ರವರೆಗೂ ಭಕ್ತರ ಸಂಖ್ಯೆ ಇರುತ್ತದೆ. ತಂಡದ ಓರ್ವರ ಕೈಯಲ್ಲಿ ತಂಬೂರಿ ಇದ್ದರೆ, ಮತ್ತೂಬ್ಬರ ಕೈಯಲ್ಲಿ ದಿಂಡಿ ಹಿಡಿದಿರುತ್ತಾರೆ. ಹಲವರು ಸಾಂಪ್ರದಾಯಿಕ ರೂಪದ ಸಮವಸ್ತಗಳನ್ನು ಧರಿಸಿರುತ್ತಾರೆ. ಪಾದಯಾತ್ರೆ ಸಂದರ್ಭದಲ್ಲಿ ವಿಠuಲನ ಮೂರ್ತಿ-ಭಾವಚಿತ್ರ ಇರಿಸಿರುವ ಪಲ್ಲಕ್ಕಿ, ರಥದ ಮಾದರಿ ವಾಹನಗಳಲ್ಲಿ ಕೊಂಡೊಯ್ಯುತ್ತಾರೆ. ವಾರಕರಿ ಕೆಲವು ಭಕ್ತರು ಭಗವಾಧ್ವಜ ಹಿಡಿದು ಸಾಗಿದರೆ, ತುಳಸಿ ಸಸಿ ಇರುವ ಬೃದಾವನವನ್ನು ಹೊತ್ತು ಸಾಗುತ್ತಾರೆ. ಕೆಲವರು ಭಜನೆಗಳ ಮೂಲಕ ವಿಠuಲನನ್ನು ಸ್ತುತಿಸುವ ಕೀರ್ತನೆಗಳನ್ನು, ಭಕ್ತಿ ಗೀತೆಗಳ ಮೂಲಕ ತಮ್ಮ ಆರಾಧ್ಯ ವಿಠuಲನನ್ನು ಆರಾಧಿಸುತ್ತ ಹೆಜ್ಜೆ ಹಾಕುತ್ತಿದ್ದಾರೆ.

Advertisement

ನಿತ್ಯವೂ ಈ ವಾರಕರಿ ತಂಡ 20-30 ಕಿ.ಮೀ. ಪಾದಯಾತ್ರೆ ನಡೆಸಿ ಮಾರ್ಗ ಮಧ್ಯದಲ್ಲಿ ಬರುವ ದೇವಸ್ಥಾನಗಳು, ಛತ್ರಗಳು, ಕಲ್ಯಾಣ ಮಂಟಪಗಳಲ್ಲಿ ಸಂಜೆ ವೇಳೆ ತಂಗಿ ವಿಶ್ರಾಂತಿ ಪಡೆಯುತ್ತಾರೆ. ಬೆಳಗ್ಗೆ ಸ್ನಾನಾದಿ ಕರ್ಮಗಳನ್ನು ಮುಗಿಸಿದ ಬಳಿಕ ಮತ್ತೆ ಪಾದಯಾತ್ರೆ ಆರಂಭಿಸುತ್ತಾರೆ. ಮಾರ್ಗ ಮಧ್ಯದ ಊರುಗಳಲ್ಲಿ ವಿಠuಲನ ಭಕ್ತರು ಹಾಗೂ ಆಸ್ತಿಕರಿದ್ದರೆ ಊಟ-ಉಪಾ‌ಹಾರದ ವ್ಯವಸ್ಥೆ ಮಾಡಿರುತ್ತಾರೆ. ಈ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಬಹುತೇಕ ಪ್ರತಿ ತಂಡದಲ್ಲಿ ಪಾದಯಾತ್ರಿಗಳು ಒಂದು ವಾಹನದಲ್ಲಿ ಊಟ-ಉಪಾಹಾರಕ್ಕೆ ಬೇಕಾಗುವ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡು ಮುಂದೆ ಸಾಗಿಸಿಕೊಂಡು ಹೊರಟಿದ್ದಾರೆ.

ಪಂಢರಪುರ ಬಳಿ ಭೀಮಾ ನದಿ ಅರ್ಧಚಂದ್ರ ಆಕೃತಿಯಲ್ಲಿ ಹರಿಯುವ ಕಾರಣ ಭೀಮಾ ನದಿಗೆ ಈ ಭಾಗದಲ್ಲಿ ಚಂದ್ರಭಾಗಾ ನದಿ ಎಂದು ಹೆಸರಿದೆ. ಆಷಾಢ ಶುದ್ಧ ಏಕಾದಶಿಗೆ ಮುನ್ನವೇ ಪಂಢರಪುರ ತಲುಪುವ ಭಕ್ತರ ದಂಡು, ಚಂದ್ರಭಾಗಾ (ಭೀಮಾ) ನದಿಯಲ್ಲಿ ಪುಣ್ಯ ಸ್ನಾನ ಮಾಡಿ, ಭಕ್ತಿ ಭಾವದಿಂದ ವಿಠ್ಠಲನ ದರ್ಶನ ಪಡೆಯುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next