Advertisement

ಗುಡಿಹಾಳದಲ್ಲೊಂದು ಮಾದರಿ ಗ್ರಂಥಾಲಯ

03:01 PM Oct 20, 2021 | Adarsha |

ಮುದ್ದೇಬಿಹಾಳ: ತಾಲೂಕಿನ ಗುಡಿಹಾಳ ಗ್ರಾಮದಲ್ಲಿಸಮಾನ ಮನಸ್ಕ ಉದ್ಯೋಗಸ್ಥ ಸ್ನೇಹಿತರುಸೇರಿಕೊಂಡು ಸ್ವಂತ ಖರ್ಚಿನಲ್ಲಿ ಖಾಸಗಿಯಾಗಿ ಗ್ರಂಥಾಲಯವೊಂದನ್ನು ಆರಂಭಿಸುವ ಮೂಲಕ ತಮ್ಮೂರಿನ, ಸುತ್ತಮುತ್ತಲಿನ ಜನರಿಗೆ,ವಿದ್ಯಾರ್ಥಿಗಳಿಗೆ ಓದಿನ ಅಭಿರುಚಿ ಹಚ್ಚುವ,ಮಾರ್ಗದರ್ಶನದ ಮಾದರಿ ಕಾರ್ಯ ಮಾಡಿ ಭೇಷ್‌ ಎನ್ನಿಸಿಕೊಂಡಿದ್ದಾರೆ.

Advertisement

ಸಾಮಾನ್ಯವಾಗಿ ಉದ್ಯೋಗ ಹಿಡಿದು ಜೀವನವನ್ನುಭದ್ರಪಡಿಸಿಕೊಂಡ ಬಹಳಷ್ಟು ಜನರು ತಮ್ಮೂರಿಗೆಯಾವುದೇ ಕೊಡುಗೆ ನೀಡಲು ಮುಂದಾಗುವುದಿಲ್ಲ.ಇಂಥದ್ದರಲ್ಲಿ ವಿದ್ಯಾವಂತ ಸ್ನೇಹಿತರು ಸೇರಿಕೊಂಡು ಈಕಾರ್ಯ ಮಾಡಿರುವುದು, ಇದಕ್ಕಾಗಿ ತಮ್ಮ ಕೈಯಿಂದಲೇ ಹಣ ಹಾಕಿರುವುದು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟುಮಹತ್ವ ಪಡೆದುಕೊಳ್ಳತೊಡಗಿದೆ.

ಮಡಿಕೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ಬರುವಗುಡಿಹಾಳ ಒಂದು ಪುಟ್ಟ ಗ್ರಾಮ. ಇಲ್ಲಿ ವಿದ್ಯಾವಂತರುಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಲವರು ಸರ್ಕಾರಿ ನೌಕರಿಹಿಡಿದರೆ ಇನ್ನೂ ಕೆಲವರು ಅರೆ ಸರ್ಕಾರಿ, ಖಾಸಗಿನೌಕರಿಯಲ್ಲಿದ್ದಾರೆ. ಇವರೆಲ್ಲ ಸೇರಿ ಒಂದು ಹೊಸಚಿಂತನೆ ನಡೆಸಿದ್ದರ ಪರಿಣಾಮವೇ ಈ ಖಾಸಗಿಗ್ರಂಥಾಲಯ. ಸ್ನೇಹಿತರೆಲ್ಲ ಸೇರಿ ಸ್ವಂತದ ಹಣ ಹಾಕಿ300-400 ವಿವಿಧ ರೀತಿಯ ಪುಸ್ತಕಗಳನ್ನು ಇಲ್ಲಿ ಇರಿಸಿದ್ದಾರೆ.

ನಿತ್ಯದ ಸಮಗ್ರ ಸುದ್ದಿ ಅರಿತುಕೊಳ್ಳಲುನಿಯತಕಾಲಿಕೆಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.ಗ್ರಂಥಾಲಯದಲ್ಲಿ ಕುಳಿತು ಓದಲು ಅವಕಾಶ ಇದೆ.ಒಂದು ವೇಳೆ ಇಲ್ಲಿ ಪುಸ್ತಕಗಳನ್ನು ಓದಲು ಆಗದವರಿಗೆಮನೆಗೆ ಕೊಡುವ ಅನುಕೂಲವನ್ನೂ ಮಾಡಲಾಗಿದೆ.ಈ ಗ್ರಂಥಾಲಯ ನಿರ್ವಹಿಸಲು ಸ್ಥಳೀಯ ಮೂವರುಉತ್ಸಾಹಿಗಳನ್ನು ನೇಮಿಸಲಾಗಿದೆ.

ಈ ಗ್ರಂಥಾಲಯದಎಲ್ಲ ಆಗು ಹೋಗುಗಳನ್ನು ಸ್ನೇಹಿತರ ಬಳಗವೇನೋಡಿಕೊಳ್ಳುತ್ತದೆ.ಸಿದ್ದಮ್ಮ ಬಿರಾದಾರ ಹೆಸರಿಗಿದೆ ವಿಶೇಷತೆ: ಗ್ರಾಮದದೇವಸ್ಥಾನಕ್ಕೆ ಹೊಂದಿಕೊಂಡಂತೆ ಒಂದು ಪುಟ್ಟ ಕೋಣೆಇದೆ. ಈ ಕೋಣೆಯಲ್ಲಿ ಗ್ರಾಮದ ಸಿದ್ದಮ್ಮ ಬಿರಾದಾರಎನ್ನುವ ವಯೋವೃದ್ದೆಯೊಬ್ಬರು ವಾಸವಾಗಿದ್ದರು.ಇವರಿಗೆ ಹಿಂದೆ, ಮುಂದೆ ಯಾರೂ ಇರಲಿಲ್ಲ.

Advertisement

ತಮ್ಮನಿಧನದ ನಂತರ ಈ ಕೋಣೆಯನ್ನು ದೇವಸ್ಥಾನದವರು ಬಳಸಿಕೊಳ್ಳಬಹುದು ಎಂದು ಆಕೆ ಮೊದಲೇ ತಿಳಿಸಿದ್ದರು. ಕೆಲ ವರ್ಷಗಳ ಹಿಂದೆ ಆ ವೃದ್ಧೆ ನಿಧನರಾದಾಗ ಕೋಣೆದೇವಸ್ಥಾನ ಮಂಡಳಿಯವರ ಸುಪರ್ದಿಗೆ ಬಂತು.ಸ್ನೇಹಿತರ ಬಳಗವು ಗ್ರಂಥಾಲಯಕ್ಕೊಂದು ಕಟ್ಟಡಹುಡುಕಾಡುವಾಗ ಈ ಕೋಣೆ ಅವರ ಕಣ್ಣಿಗೆ ಬಿದ್ದುದೇವಸ್ಥಾನ ಮಂಡಳಿಯವರ ಮನವೊಲಿಸಿ ಇದನ್ನೇ ಗ್ರಂಥಾಲಯವನ್ನಾಗಿ ಮಾರ್ಪಡಿಸಿ ಇದಕ್ಕೆ ದಿ| ಶ್ರೀಮತಿಸಿದ್ದಮ್ಮ ಬಿರಾದಾರ ಗ್ರಂಥಾಲಯ ಎಂದೇ ಹೆಸರಿಸಿಆಕೆಗೂ ಒಂದು ಗೌರವ ತಂದು ಕೊಟ್ಟಿದ್ದಾರೆ.

ಉದ್ಘಾಟನೆಯಲ್ಲೂ ವಿಶೇಷತೆ: ಇದೇ ಅ. 15ರಂದುಗ್ರಂಥಾಲಯವನ್ನು ಉದ್ಘಾಟಿಸಲಾಗಿದೆ. ಜೀರಲಭಾವಿಆನಂದ ಮಠದ ಆನಂದಯ್ಯ ಸ್ವಾಮೀಜಿ, ಬಳವಾಟದಸೋಮಶೇಖರ ದೇವರು, ಗುಡಿಹಾಳ ಹಿರೇಮಠದಶ್ರೀಶೈಲ ಹಿರೇಮಠ ಇವರ ದಿವ್ಯ ಸಾನ್ನಿಧ್ಯದಲ್ಲಿ, ಶಿಕ್ಷಕಪ್ರಕಾಶ ಕಟ್ಟಿಮನಿ ಉಪಸ್ಥಿತಿಯಲ್ಲಿ ಶಿಕ್ಷಣ ಕ್ಷೇತ್ರದಸೋಮನಾಥ ಮುದಗಲ್‌, ಶಿವಾನಂದ ಮೂರ್ತಿ,ಅಂಗನವಾಡಿ ಕಾರ್ಯಕರ್ತೆ ಯಮನವ್ವ ದೊಡಮನಿ,ಅಂಗನವಾಡಿ ಸಹಾಯಕಿ ಚಂದಮ್ಮ ಹಿರೇಕುರುಬರ,ಆಶಾ ಕಾರ್ಯಕರ್ತೆ ಬೋರಮ್ಮ ದೋರನಳ್ಳಿ,ಆರೋಗ್ಯ ಇಲಾಖೆಯ ಮರೆಪ್ಪ ತಾಳಿಕೋಟಿ, ನಿವೃತ್ತಸೈನಿಕ ಸಿದ್ದನಗೌಡ ಹೂಲಗೇರಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಾದ ಕಾಶೀನಾಥಮಾಡಗಿ, ವಿಜಯಲಕ್ಷ್ಮೀ ಬಿರಾದಾರ, ಹಣಮವ್ವಮಾದರ ಇವರನ್ನು ಸನ್ಮಾನಿಸಿ ಗ್ರಂಥಾಲಯಉದ್ಘಾಟನೆಯಲ್ಲೂ ವಿಶೇಷತೆ ತೋರಲಾಗಿದೆ.

ಪುಸ್ತಕ ಮನೆಗೊಯ್ಯಲು ಅವಕಾಶ: ಜ್ಞಾನಾರ್ಜನೆಯಹಸಿವು ಇರುವವರ ಸರಳ ಓದಿಗೆ ಅನುಕೂಲಕಲ್ಪಿಸಿಕೊಡಲು ಅವರು ಕೇಳುವ ಪುಸ್ತಕಗಳನ್ನುಒಂದು ವಾರದವರೆಗೆ ಮನೆಗೆ ಒಯ್ಯಲು ಅವಕಾಶಕಲ್ಪಿಸಲಾಗಿದೆ. ಇದಕ್ಕಾಗಿ ರಜಿಸ್ಟರ್‌ ಒಂದರಲ್ಲಿ ಅವರಹೆಸರು, ಮೊಬೈಲ್‌ ಸಂಖ್ಯೆ ಬರೆದುಕೊಳ್ಳಲಾಗುತ್ತದೆ.

ಉಚಿತವಾಗಿ ಪುಸ್ತಕವನ್ನು ಒಯ್ಯಲು ಮತ್ತು ಓದಿನನಂತರ ಮರಳಿಸಲು ಅವಕಾಶ ಮಾಡಿಕೊಟ್ಟಿರುವುದು ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತಯಾರಿನಡೆಸುತ್ತಿರುವ ಬಡ ಪ್ರತಿಭಾವಂತರಿಗೆ ಹೆಚ್ಚುಅನುಕೂಲ ಮಾಡಿಕೊಟ್ಟಂತಾಗಿದೆ.

ಬೇಡಿಕೆಯನ್ವಯ ಪುಸ್ತಕ ಖರೀದಿ: ಯಾರಾದರೂತಮಗೆ ಅತಿ ಅವಶ್ಯವಿರುವ ಜ್ಞಾನಾರ್ಜನೆಯ ಪುಸ್ತಕಅಥವಾ ಪಠ್ಯ ಪುಸ್ತಕದ ಅವಶ್ಯಕತೆ ಕುರಿತು ಬಳಗದಸದಸ್ಯರ ಗಮನಕ್ಕೆ ತಂದಲ್ಲಿ ಅಂಥ ಪುಸ್ತಕಗಳನ್ನುತರಿಸಿ ಗ್ರಂಥಾಲಯಕ್ಕೆ ಬರುವವರ ಬಳಕೆಗೂಯೋಜನೆ ರೂಪಿಸಲಾಗಿದೆ.

ಬೇಡಿಕೆಯನ್ವಯ ಪುಸ್ತಕ ಖರೀದಿಸಿ ಅದನ್ನು ಜೋಪಾನ ಮಾಡುವ,ಜತನವಾಗಿಡುವ ಕಾರ್ಯವನ್ನು ಗ್ರಂಥಾಲಯನಿರ್ವಾಹಕರಿಗೆ ವಹಿಸಿಕೊಡಲಾಗಿದೆ. ಗ್ರಂಥಾಲಯಕ್ಕೆಬರುವವರು ತಮಗೆ ಬೇಕಾದ ಪುಸ್ತಕ ಇಲ್ಲವಲ್ಲ ಎಂದು ಕೊರಗದಂತೆ ನೋಡಿಕೊಳ್ಳುವ ಮಹತ್ವದಕಾರ್ಯವನ್ನು ಬಳಗದ ಸ್ನೇಹಿತರು ನಿರ್ವಹಿಸಲು ಮುಂದಾಗಿರುವುದು ಅವರಲ್ಲಿನ ಹುಮ್ಮಸ್ಸು, ಉತ್ಸಾಹತೋರಿಸಿಕೊಡುತ್ತದೆ.

ಬಳಗದ ಸದಸ್ಯರಿವರು: ಗುರುಲಿಂಗಪ್ಪ ಮಾಡಗಿ,ರವಿಕುಮಾರ ಮಾಡಗಿ, ಪ್ರಕಾಶ ಕಟ್ಟಿಮನಿ,ಪರಶುರಾಮ ಚಲವಾದಿ, ಶಂಕರ ದೊಡಮನಿ,ಸವಿತಾ ಪಾಟೀಲ, ಶಿವಾನಂದ ಕೊಣ್ಣೂರ, ಶಿವಾನಂದಮಾಡಗಿ, ಸೋಮನಗೌಡ ಹೂಲಗೇರಿ, ಬೈಲಪ್ಪವಜ್ಜಲ, ಹನುಮಂತ್ರಾಯ ಮಾಡಗಿ, ಕವಿತಾ,ಜಗದೀಶ ದೊಡಮನಿ, ಮೌನೇಶ ಬಡಿಗೇರ,ಭೀಮನಗೌಡ ದೋರನಳ್ಳಿ ಸೇರಿ 30-35 ಸ್ನೇಹಿತರಬಳಗದ ಶ್ರಮ ಈ ಗ್ರಂಥಾಲಯ ಸ್ಥಾಪನೆಯಹಿಂದಿರುವುದು ವಿಶೇಷವಾಗಿದೆ.

ಡಿ.ಬಿ.ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next