Advertisement

ಬರಪೀಡಿತ ಪ್ರದೇಶದಲ್ಲಿ ಭರಪೂರ ನೀರು

02:30 PM Aug 15, 2021 | Adarsha |

ವಿಜಯಪುರ: “ಬರ ಪೀಡಿತ ಪ್ರದೇಶ’ ಎಂಬಕರೆಯಿಸಿಕೊಳ್ಳುತ್ತಿರುವ ಜಿಲ್ಲೆಯಲ್ಲೀಗ “ನೀರಿನಸುಗ್ಗಿ’ ಶುರುವಾಗಿದೆ.ಅದರಲ್ಲೂ ನೀರಾವರಿ ಅಸಾಧ್ಯ ಎಂಬತಿಕೋಟಾ ಪರಿಸರದಲ್ಲಿ ಇದೀಗ ಎಲ್ಲೆಲ್ಲೂ ನೀರಿನಹರಿವು ಕಂಡು ಬರುತ್ತಿದೆ. ಹಳ್ಳಗಳು ತುಂಬಿಹರಿಯುತ್ತಿದ್ದರೆ, ಬತ್ತಿದ ಬಾವಿಗಳಲ್ಲಿ ಜೀವಸೆಲೆಮೂಡಿದೆ.

Advertisement

ತುಬಚಿ-ಬಬಲೇಶ್ವರ ಏತ ನೀರಾವರಿಯೋಜನೆ ಮೂಲಕ ಈ ಭಾಗದ ಹಳ್ಳಗಳುಇದೀಗ ಜೀವ ಪಡೆದಿವೆ. ಇಂಥ ಹಳ್ಳಗಳಿಗೆನಿರ್ಮಿಸಿರುವ ಬಾಂದಾರಗಳು ಧುಮ್ಮಿಕ್ಕಿಹರಿಯುತ್ತಿವೆ. ತಿಕೋಟಾ ಭಾಗಕ್ಕೆ ನೀರುಹರಿಸಿದ್ದರೂ ಮಹಾರಾಷ್ಟ್ರ ರಾಜ್ಯದ ಗಡಿ ಭಾಗದಕನ್ನಡ ಹಳ್ಳಿಗಳಲ್ಲೂ ಇದೀಗ ಅಂರ್ತಜಲಹೆಚ್ಚಳವಾಗಿ ಗಡಿನಾಡ ಕನ್ನಡಿಗರ ಮೊಗದಲ್ಲೂಸಂತಸ ಮೂಡಿದೆ.ತಿಕೋಟಾ ಪರಿಸರದ ಕಳ್ಳಕವಟಗಿ,ಬಾಬಾನಗರ ಭಾಗದ ಹಳ್ಳಕ್ಕೆ ನಿರ್ಮಿಸಿರುವಹಲವು ಬಾಂದಾರುಗಳು ತುಬಚಿ- ಬಬಲೇಶ್ವರ ಏತ ನೀರಾವರಿ ಮುಖ್ಯ ನಾಲೆ ಮೂಲಕ ವಿವಿಧಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.

ಈ ಹಂತದಲ್ಲಿ ಹೆಚ್ಚುವರಿ ನೀರು ಹಳ್ಳಗಳಿಗೆಹರಿಯುತ್ತಿದ್ದು, ಬಾಬಾನಗರ-ಕಳ್ಳಕವಟಗಿಗ್ರಾಮಕ್ಕೆ ಇರುವ ಹಳ್ಳಗಳಿಗೆ ಹಲವಾರುಬಾಂದಾರಗಳನ್ನು ಅಡ್ಡಲಾಗಿ ಕಟ್ಟಲಾಗಿದೆ.ಎಲ್ಲ ಬಾಂದಾರಗಳು ಜಲಪಾತದಂತೆ ತುಂಬಿಹರಿಯುತ್ತಿವೆ.ಕುಡಿಯುವ ನೀರಿನ ಬ್ಯಾರೆಲ್‌ಗ‌ಳಿಗೆ ಬೀಗಹಾಕಿ ಸಂರಕ್ಷಿಸಿಕೊಳ್ಳುವಂಥ ದುಃಸ್ಥಿತಿಯಲ್ಲಿದ್ದತಿಕೋಟಾ ಪರಿಸರದ ಹಳ್ಳಗಳಲ್ಲಿ ಇದೀಗ”ನೀರಿನ ಸುಗ್ಗಿ’ ಶುರುವಾಗಿದೆ.

ಹೀಗಾಗಿ ರಫ್ತುಗುಣಮಟ್ಟದ ದ್ರಾಕ್ಷಿ, ದಾಳಿಂಬೆ ಬೆಳೆಯುತ್ತಿರುವತಿಕೋಟಾ ಭಾಗದ ರೈತರ ಮೊಗದಲ್ಲೀಗಮಂದಹಾಸ ಮೂಡಿದೆ.ಕೇವಲ ಕೆರೆ ತುಂಬಿಸುವ ಹಾಗೂ ಹಳ್ಳಗಳಿಗೆನೀರು ಹರಿಸುವ ಕಾರ್ಯದಿಂದ ತಿಕೋಟಾಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ. ಬತ್ತಿದ್ದತೆರೆದ ಹಾಗೂ ಕೊಳವೆ ಬಾವಿಗಳು ಮರುಜೀವಪಡೆದಿವೆ. ಅಲ್ಪ ಸ್ವಲ್ಪ ನೀರು ಚಿಮ್ಮುತ್ತಿದ್ದ ಕೊಳವೆಬಾವಿಗಳ ಪಂಪ್‌ಗ್ಳು ಇದೀಗ ಸ್ವಯಂ ತುಂಬಿಹರಿಯುವಷ್ಟು ಸಜೀವವಾಗಿವೆ.

ಪರಿಣಾಮವಿದ್ಯುತ್‌ ಅಗತ್ಯವೇ ಇಲ್ಲದಂತೆ ಕೊಳವೆಬಾವಿಗಳು ತುಂಬಿ ಹರಿಯುತ್ತಿವೆ.ಈ ನೀರು ಕರ್ನಾಟಕ ಅಲ್ಲದೇ ಅಲ್ಲದೇಮಹಾರಾಷ್ಟ್ರದ ಕೆಲ ಗ್ರಾಮಗಳಿಗೆ ಹಳ್ಳದ ಮೂಲಕಹೋಗುತ್ತವೆ. ಇದರಿಂದ ಅಲ್ಲಿಯ ರೈತರಿಗೂಅನುಕೂಲವಾಗಿದೆ. ಬಬಲೇಶ್ವರ ಕ್ಷೇತ್ರದಶಾಸಕ ಎಂ.ಬಿ.ಪಾಟೀಲ ಅವರ ರಾಜಕೀಯಇಚ್ಛಾಶಕ್ತಿಯಿಂದ ನಾವು ನೀರು ಕಾಣುವಂತಾಗಿದೆ.ಸಿದ್ದೇಶ್ವರ ಶ್ರೀಗಳು ಈ ಭಾಗಕ್ಕೆ ಬೊಗಸೆನೀರು ನೀಡಿದರೆ ಕ್ಯಾಲಿಫೋನಿರ್ಯಾಗಿಂತಹೆಚ್ಚು ಶಕ್ತಿಶಾಲಿಯಾಗಿ ಹೊರ ಹೊಮ್ಮಲಿದೆಎಂದಿದ್ದ ಮಾತನ್ನು ಎಂ.ಬಿ.ಪಾಟೀಲ ಅವರುನಿಜವಾಗಿಯೂ ಅನುಷ್ಠಾನಕ್ಕೆ ತಂದಿದ್ದಾರೆ.ಪರಿಣಾಮ ಬಂಜರಾಗಿದ್ದ ಕಲ್ಲು ನೆಲವೂ ಇದೀಗಸಸ್ಯ ಶ್ಯಾಮಲೆಯಾಗಿ ರೂಪುಗೊಂಡಿದೆ ಎಂದುರೈತರು ಸಂತಸ ವ್ಯಕ್ತಪಡಿಸುತ್ತಾರೆ.

Advertisement

ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next