Advertisement

Vijayapura: ಮಿಸ್ಟರ್ ಯತ್ನಾಳ್‌, ವಕ್ಫ್ ಬೋರ್ಡ್ ಆಸ್ತಿ ಯಾರಪ್ಪಂದೂ ಅಲ್ಲ: ಸಚಿವ ಜಮೀರ್

09:01 PM Oct 07, 2024 | Esha Prasanna |

ವಿಜಯಪುರ: ವಕ್ಫ್ ಬೋರ್ಡ್ ಆಸ್ತಿ ಎನ್ನುವುದು ದಾನ ಕೊಟ್ಟಿರುವ ಆಸ್ತಿ, ಮಿಸ್ಟರ್ ಯತ್ನಾಳ್‌ ಇದು ನಿಮ್ಮಪ್ಪನ ಆಸ್ತಿಯೂ ಅಲ್ಲ, ನನ್ನಪ್ಪನ ಆಸ್ತಿಯೂ ಇಲ್ಲ. ಇದು ಯಾರಪ್ಪನ ಆಸ್ತಿಯೂ ಅಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಟಾಂಗ್ ನೀಡಿದರು.

Advertisement

ನಗರದಲ್ಲಿ ಸೋಮವಾರ ನಡೆದ ವಕ್ಫ್ ಅದಾಲತ್‌ನಲ್ಲಿ ಮಾತನಾಡಿ, ವಕ್ಫ್ ಆಸ್ತಿ ಬಗ್ಗೆ ಯತ್ನಾಳ್‌ ಹೆಚ್ಚಾಗಿ ಮಾತನಾಡುತ್ತಾರೆ. ಆದರೆ, ಒಂದೇ ಒಂದು ಇಂಚು ಸರ್ಕಾರದ ಜಮೀನನ್ನು ವಕ್ಫ್ ಮಂಡಳಿ ಪಡೆದುಕೊಂಡಿಲ್ಲ. ಇದನ್ನು ತಿಳಿದು ಯತ್ನಾಳ್‌ ಮಾತನಾಡಬೇಕು. ದೊಡ್ಡದಾದ ಜಮೀನು ಖಾಲಿ ಉಳಿಸಿಕೊಂಡ ಪರಿಣಾಮ ಕೆಲವರ ಕಣ್ಣು ಕುಕ್ಕುತ್ತಿದೆ. ವಕ್ಫ್ ಜಮೀನು ಎಲ್ಲಿ ಅತಿಕ್ರಮಣವಾಗಿದೆಯೋ ಅದನ್ನು ತೆರವುಗೊಳಿಸಿ ಗೋಡೆ, ತಂತಿ ಬೇಲಿ ಹಾಕಿ ಸುರಕ್ಷಿತವಾಗಿರಿಸುವ ಕಾರ್ಯ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಕ್ಫ್ ಬೋರ್ಡ್ ವತಿಯಿಂದಲೇ 15 ಜಿಲ್ಲೆಗಳಲ್ಲಿ ಅತ್ಯಾಧುನಿಕ ಕಾಲೇಜು ಆರಂಭಿಸಲಾಗುವುದು. ಒಂದು ವರ್ಷದಲ್ಲಿ ಇದು ಪೂರ್ಣಗೊಳ್ಳಲಿದೆ. ನಮ್ಮ ಸರ್ಕಾರದ ಆಡಳಿತ ಇನ್ನೂ ಮೂರೂವರೆ ವರ್ಷ ಇದೆ. ಅಷ್ಟರೊಳಗೆ ಎಲ್ಲ ಜಿಲ್ಲೆಗಳಲ್ಲಿ ಕಾಲೇಜು ನಿರ್ಮಿಸುವ  ಉದ್ದೇಶ ಇದೆ. ಅಲ್ಲದೇ, ಮನೆಗಳನ್ನು ನಿರ್ಮಿಸಿ, ಮನೆರಹಿತರಿಗೆ ಕೇವಲ ಐದಾರು ನೂರು ರೂಪಾಯಿಗೆ ಮನೆ ಬಾಡಿಗೆ ನೀಡುವ ಯೋಜನೆ ಇದೆ. ಇದರಿಂದ ವಕ್ಫ್ ಬೋರ್ಡ್ ಗೆ  ಆದಾಯವೂ ಬರಲಿದೆ. ಅಷ್ಟೇ ಅಲ್ಲ, ಹಣ ಮಾಡುವ ಉದ್ದೇಶ ಹೊಂದಿರುವ ಅಧಿಕಾರಿಗಳಿಗೆ ವಕ್ಫ ಇಲಾಖೆಯಲ್ಲಿ ಜಾಗ ಇಲ್ಲ. ಇಂತಹ ಅಧಿಕಾರಿಗಳಿಗೆ ಬೇಕಾದರೆ ನಾನೇ ಬೇರೆ ಇಲಾಖೆಗೆ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿರುವೆ ಎಂದು ಜಮೀರ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next