Advertisement

MUDA Case: ಸಿದ್ದರಾಮಯ್ಯ ಅಧಿಕಾರದಲ್ಲಿದ್ರೆ ತನಿಖೆ ಮೇಲೆ ಪ್ರಭಾವ ಖಚಿತ: ಶಾಸಕ ಯತ್ನಾಳ್‌

10:47 PM Sep 26, 2024 | Team Udayavani |

ಹುಬ್ಬಳ್ಳಿ: ಮುಡಾ ಪ್ರಕರಣದಲ್ಲಿ ಹೈ ಕೋರ್ಟ್ ಆದೇಶ ಬಂದ ನಂತರ ಸಿದ್ದರಾಮಯ್ಯ ರಾಜೀನಾಮೆ ಕೊಡುವುದು ಸೂಕ್ತ. ಕೂಡಲೇ ಅವರು ವಿಧಾನಸಭೆ ವಿಸರ್ಜನೆ ಮಾಡಲಿ ಎಂದು ಬಿಜೆಪಿ ಮುಖಂಡ, ಶಾಸಕ ಬಸನಗೌಡ ಪಾಟೀಲ ಯತ್ನಾಳ್‌  ಆಗ್ರಹಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನವರು ಅಧಿಕಾರದಲ್ಲಿದ್ದರೆ ತನಿಖೆ ಮೇಲೆ ಪ್ರಭಾವ ಖಚಿತ. ಈ ಹಿಂದೆ ವಿಪಕ್ಷದಲ್ಲಿದ್ದಾಗ ಅವರು ಏನು ಮಾತನಾಡಿದ್ದರೂ ನೆನಪಿಸಿಕೊಳ್ಳಲಿ.‌ ಮುಖ್ಯಮಂತ್ರಿ ಹುದ್ದೆಯಲ್ಲಿದ್ದು ಯಾವುದೇ ತನಿಖೆ ಎದುರಿಸುವುದು ಸರಿಯಲ್ಲ. ಅವರು ಹೈಕೋರ್ಟ್‌ನ ಆದೇಶ ಪಾಲಿಸಬೇಕು. ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಕೊನೆಯ ಮುಖ್ಯಮಂತ್ರಿ. ಅವರ ನಂತರ ಯಾರೂ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಆಗಲ್ಲ. ಗೋರಿಗೆ ಹೋಗುವವರೂ ಸೇರಿದಂತೆ ಬಹಳ ಮಂದಿ ಸಹ ಪಾಳೆ ಹಚ್ಚಿದ್ದಾರೆ ಎಂದರು.

ಜಮೀರ ಅಹ್ಮದ್ ರಾಜಕೀಯ ತೀರ್ಪು ಎಂದು ಹೇಳಿಕೆ ನೀಡಿದ್ದು, ಅವರ ತಲೆಯಲ್ಲಿ ಮೆದುಳಿದಿಯೋ ಅಥವಾ ಮಾಂಸ ತುಂಬಿದೆಯೋ ಗೊತ್ತಿಲ್ಲ. ಕೋರ್ಟ್ ತೀರ್ಪಿನ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ್ದಾರೆ. ಇಂಥವರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಬೇಕು. ಇಂತಹ ಉದ್ಧಟತನದಿಂದ ಮಾತನಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು.

ಭ್ರಷ್ಟಾಚಾರಿಗಳೆಲ್ಲ ಜೈಲು ಸೇರಿ ಹೊಸ ಯುಗ ಶುರುವಾಗಲಿ: 
ಸಿದ್ದರಾಮಯ್ಯನವರೇ ನಿಮ್ಮ ಹೊಂದಾಣಿಕೆ ರಾಜಕಾರಣದ ಬಗ್ಗೆ ಮೊದಲು ಹೇಳಿ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ.‌ ನಾವು ಭಿಕ್ಷೆ ಕೊಟ್ಟಿದ್ದೇವೆ, ಧರ್ಮಕ್ಕೆ ಕೊಟ್ಟಿದ್ದೇವೆ ಅಂತ ನೀವು ಹೇಳಿಕೊಳ್ಳುತ್ತಿದ್ದೀರಿ. ಯಾವ ಕ್ಷೇತ್ರವನ್ನು ಬಿಜೆಪಿ ಅವರಿಗೆ ಭಿಕ್ಷೆ ಕೊಟ್ಟಿದ್ದೀರಿ. ಯಾರು ಭಿಕ್ಷೆ ಕೊಟ್ಟರು. ಯಾರು ತೆಗೆದುಕೊಂಡರು ಅಂತ ಬಹಿರಂಗಪಡಿಸಲಿ.‌ ಭ್ರಷ್ಟಾಚಾರಿಗಳೆಲ್ಲ ಜೈಲು ಸೇರಲಿ. ಆಗ ಹೊಸ ರಾಜಕೀಯ ಯುಗ ಆರಂಭಗೊಳ್ಳುತ್ತದೆ ಎಂದರು.

ಗಂಗಾನದಿ ನೀರಿನಿಂದ ಬಿಜೆಪಿಯ ಶುದ್ದೀಕರಣ: 
ಕುಮಾರ್ ಬಂಗಾರಪ್ಪ ಸೇರಿದಂತೆ ಹಲವು ಸಮಾನ ಮನಸ್ಕರು ಸಭೆ ಮಾಡಿದ್ದೇವೆ. ಹೊಂದಾಣಿಕೆ ರಾಜಕಾರಣದಿಂದಲೇ ರಾಜ್ಯಕ್ಕೆ ಇಂತಹ ದುಸ್ಥಿತಿ ಬಂದಿದೆ. ಇಷ್ಟೆಲ್ಲ ಪ್ರಕರಣ ಹೊರಬರುತ್ತಿವೆ. ಬೆಂಗಳೂರು ಸೇರಿ ರಾಜ್ಯದ ಎಲ್ಲ ಕಡೆಯೂ ಬಿಜೆಪಿಯಲ್ಲಿ ಶುದ್ದೀಕರಣ ನಡೆಯಬೇಕಿದೆ. ಹೊಂದಾಣಿಕೆ ಮುಕ್ತ ಕರ್ನಾಟಕ ಆಗಬೇಕೆನ್ನುವುದು ನಮ್ಮ ಆಗ್ರಹ.‌ ಪಕ್ಷದ ವೇದಿಕೆಯಲ್ಲಿ ಏನು ಹೇಳಬೇಕು ಅದನ್ನು ಹೇಳಿದ್ದೇವೆ. ಅವರು ಏನು ಕ್ರಮ ಕೈಗೊಳ್ಳುತ್ತಾರೆ ಅನ್ನುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಬಿಜೆಪಿ ಕಚೇರಿಯಿಂದ ಹಿಡಿದು ದೇಶ, ರಾಜ್ಯ ಸೇರಿದಂತೆ ಎಲ್ಲಾ ಕಡೆ ಸ್ವಚ್ಛವಾಗಬೇಕು.‌ ಅದನ್ನು ಗಂಗಾನದಿ ನೀರಿನಿಂದ ಶುದ್ಧೀಕರಣ ಮಾಡುತ್ತೇವೆ.‌ ಬೀದರನಿಂದ ಹಿಡಿದು ಚಾಮರಾಜನಗರದವರೆಗೂ ಇಡೀ ಕರ್ನಾಟಕದಲ್ಲಿ ಬಹಳ ಕಡೆ ಸ್ವಚ್ಛವಾಗಬೇಕಿದೆ ಎಂದರು.

Advertisement

ಈಶ್ವರಪ್ಪರಿಂದ ರಾಯಣ್ಣ ಚೆನ್ನಮ್ಮ ಬ್ರಿಗೇಡ್ (ಆರ್‌ಸಿಬಿ) ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಎಲ್ಲಿಯೂ ಆರ್‌ಸಿಬಿ ತಂದಿಲ್ಲ.‌ ಈಶ್ವರಪ್ಪ ಅವರ ನಡೆ ಹಿಂದುತ್ವ, ಬಿಜೆಪಿ ಕಡೆ ಆಗಿದೆ. ಅವರನ್ನು ಬಿಜೆಪಿಗೆ ಮರಳಿ ತೆಗೆದುಕೊಳ್ಳುವುದು ಪಕ್ಷದ ಹೈಕಮಾಂಡ್‌ಗೆ ಬಿಟ್ಟ ವಿಚಾರ. ತೆಗೆದುಕೊಳ್ಳಲು ನಿರ್ಧರಿಸಿದರೆ ನಾವು ಸ್ವಾಗತಿಸುತ್ತೇವೆ ಎಂದರು.

ರಾಜ್ಯಪಾಲರ ಟೆಲಿಫೋನ್ ಕದ್ದಾಲಿಸುವ ಪ್ರಯತ್ನ ಕಾಂಗ್ರೆಸ್ ಮಾಡಿತ್ತು:
ಕರ್ನಾಟಕದಲ್ಲಿರುವುದು ಎರಡನೇ ಮಮತಾ ಬ್ಯಾನರ್ಜಿ ಸರ್ಕಾರ. ಸಂವಿಧಾನ ಬದಲಾವಣೆ ಮಾಡುತ್ತೇವೆ. ಹೊಸ ಕಾನೂನು ತರುತ್ತೀವಿ ಅಂದರೆ ಆಗಲ್ಲ.‌ ರಾಜ್ಯಾಂಗದಲ್ಲಿ ಹೊಸ ನಿಯಮ ತರುವುದಕ್ಕೆ ಬರಲ್ಲ. ಸಂವಿಧಾನ ಪ್ರಕಾರವೇ ಎಲ್ಲವೂ ನಡೆಯುತ್ತದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಪ್ರಕಾರ ಈ ದೇಶ, ರಾಜ್ಯ ನಡೆಯಲ್ಲ. ರಾಜ್ಯಪಾಲರ ಅಧಿಕಾರ ಮೊಟಕು ಯತ್ನಗಳನ್ನು ನಡೆಸಿದ್ದಾರೆ. ರಾಜ್ಯಪಾಲರ ಟೆಲಿಫೋನ್ ಕದ್ದಾಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದರಲ್ಲಿ ಸಫಲವಾಗಿಲ್ಲ ಎಂದು ಯತ್ನಾಳ ಗಂಭೀರ ಆರೋಪ ಮಾಡಿದರು.

ದಲಿತರ ಬಗ್ಗೆ ಎಷ್ಟು ಕಾಳಜಿ ಇದೆ? :
ರಾಜ್ಯಪಾಲರು ಬಿಜೆಪಿ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದಾರೆ ಅನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಪಕ್ಷದಲ್ಲಿ ಇದೊಂದು ಚಟಾ ಬಿದ್ದಿದೆ.‌ ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್‌ ಭಾರದ್ವಾಜ ಕಾಂಗ್ರೆಸ್ ಚಮಚ ಅಗಿದ್ದರು. ಬಿಜೆಪಿಯದ್ದೇನಾದ್ರೂ ಇದ್ದರೆ ತಗೊಂಡು ಬರ್ರಿ ಅಂತಿದ್ರೂ. ಲೇಕೆ ಆವೊ, ಲೇಕೆ ಆವೊ ಅಂತಿದ್ದಾ. ಈಗಿನ ಕಾಂಗ್ರೆಸ್‌ನವರು ಅವರಂತೆ ನಡೆಯಬೇಕು ಅಂತಾರೆ. ರಾಜ್ಯಪಾಲರು ಅವರಂತೆ ಹೇಗೆ ನಡೀತಾರೆ.‌ ನ್ಯಾಯಾಲಯದಲ್ಲಿ ರಾಜ್ಯಪಾಲರ ನಿರ್ಣಯ ತಪ್ಪಾಗಿದ್ದರೆ ಅವರು ಬಿಜೆಪಿ ಏಜೆಂಟ್ ಆಗುತ್ತಿದ್ದರು. ರಾಜ್ಯಪಾಲರು ಒಬ್ಬರು ದಲಿತರೇ ಇದ್ದಾರೆ. ಈಗ ನೀವು ಯಾರಿಗೆ ಅಪಮಾನ ಮಾಡುತ್ತೀದ್ದೀರಿ. ನಿಮಗೆ ದಲಿತರ ಬಗ್ಗೆ ಎಷ್ಟು ಕಾಳಜಿ ಇದೆ ಅನ್ನೋದು ತೋರಿಸಿಕೊಡುತ್ತೀದ್ದೀರಿ ಎಂದು ಹರಿಹಾಯ್ದರು.

ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂ ಸಮಾಜ ಸೇರಿದಂತೆ ದಲಿತರಿಗೂ ಬಹುದೊಡ್ಡ ಅನ್ಯಾಯವಾಗಿದೆ. ಪಿಎಸ್ಐ ಸಹ ಗಣೇಶನನ್ನು ಬಂಧಿಸುವ ಸ್ಥಿತಿ ನಿರ್ಮಾಣವಾಗಿದೆ. ಹಿಂದುಳಿದ, ದಲಿತರಿಗೂ ಉಪಯೋಗವಾಗಿಲ್ಲ. ಮೇಲ್ಜಾತಿಯವರೆಂದರೆ ಸಿದ್ದರಾಮಯ್ಯರಿಗೆ ಅಲರ್ಜಿ. ಉಳಿದಿದ್ದು ಒಂದೇ ಒಂದು ಸಮಾಜ, ಅದರ ಓಲೈಕೆ ನಡೆದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next