Advertisement

ಮುರುಘಾ ಶರಣರಿಗೆ ವಿಜಯಪುರ ಮಠಾಧೀಶರ ನೈತಿಕ ಬೆಂಬಲ

07:45 PM Aug 30, 2022 | Team Udayavani |

ವಿಜಯಪುರ: ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಚಿತ್ರದುರ್ಗದ ಡಾ.ಮುರುಘಾ ಶರಣರಿಗೆ ವಿಜಯಪುರ ಮಠಾಧೀಶರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಜಿಲ್ಲೆಯ ಮಠಾಧೀಶರ ಪರವಾಗಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಂಥನಾಳದ ಡಾ.ವೃಷಭೇಂದ್ರ ಶ್ರೀಗಳು ಹಾಗೂ ಆಲಮೇಲದ ಚಂದ್ರಶೇಖರ ಶ್ರೀಗಳು, ಚಿತ್ರದುರ್ಗ ಮಠದೊಳಗಿನ ಆರ್ಥಿಕ ಗೊಂದಲಗಳು, ಅಧಿಕಾರದ ಲಾಲಸೆಗಳು ಇಡೀ ಪ್ರಕರಣದಲ್ಲಿ ಕಾಣದ ಕೈಗಳಾಗಿ ಕೆಲಸ ಮಾಡಿರುವುದು ಮೇಲ್ನೋಟಕ್ಕೆ ಕಂದು ಬರುತ್ತಿದೆ ಎಂದು ದೂರಿದರು.

ಹೀಗಾಗಿ ಮುರಾಘಾ ಶರಣ ಮೇಲಿನ ಆರೋಪದಲ್ಲಿ ಪೂರ್ವ ಯೋಜಿತ ಷಡ್ಯಂತ್ರ ಇರುವುದು ಕಂಡು ಬರುತ್ತಿದೆ. ಕಾರಣ ಇಡೀ ಪ್ರಕರಣದ ಸತ್ಯಾಸತ್ಯತೆಯನ್ನು ನಿಷ್ಪಕ್ಷಪಾತ ತನಿಖೆಯ ಮೂಲಕ ಹೊರ ಹಾಕಬೇಕು. ಇದಕ್ಕಾಗಿ ಸರ್ಕಾರ ಪೊಲೀಸ್ ಅಥವಾ ನ್ಯಾಯಾಂಗ ತನಿಖೆ ಮೂಲಕ ನ್ಯಾಯ ಸಮ್ಮತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಯಾರಿರೂ ಅನ್ಯಾಯ ಆಗದಂತೆ ತನಿಖೆ ಆಗಬೇಕು. ಶ್ರೀಗಳ ಮೇಲೆ ಬಂದಿರುವ ಗಂಭೀರ ಸ್ವರೂಪದ ಆರೋಪದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಮಠಾಧೀಶರು ನೈತಿಕ ಬೆಂಬಲ ವ್ಯಕ್ತಪಡಿಸದ್ದೇವೆ. ಇಂಥ ಸಂಕಷ್ಟದ ಸಂದರ್ಭದಲ್ಲಿ ಶ್ರೀಗಳ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಮನವಿ ಮಾಡಿರುವ ಮಠಾಧೀಶರು, ಸದರಿ ಪ್ರಕರಣದಲ್ಲಿ ಸಂತ್ರಸ್ತರು ಎನ್ನಲಾದ ಮಕ್ಕಳ ವಿಷಯದಲ್ಲೂ ಮಠಾಧೀಶರ ಸಾಂತ್ವನವಿದೆ ಎಂದು ಹೇಳಿದರು.

ಇನ್ನು ತಮ್ಮ ವಿರುದ್ಧ ಬಂದಿರುವ ಗಂಭೀರ ಸ್ವರೂಪದ ಆರೋಪದ ಕುರಿತು ಕಾನೂನು ಹೋರಾಟ ನಡೆಸುವ ಕುರಿತು ಧಾರವಾಡದ ಅನುಭವಿ ವಕೀಲರನ್ನು ಭೇಟಿಯಾಗಲು ಮುರುಘಾ ಶರಣರು ಪ್ರಯಾಣಿಸುತ್ತಿದ್ದರು. ಆದರೆ ಅದನ್ನೇ ಶ್ರೀಗಳ ಪಲಾಯನ ಎಂಬಂತೆ ಬಿಂಬಿಸಲಾಗಿದೆ. ಈ ನೆಲದ ಕಾನೂನು ಗೌರವಿಸುತ್ತೇನ ಎಂದಿದ್ದಾರೆ. ಹೀಗಾಗಿ ಮುರುಘಾ ಶ್ರೀಗಳು ಎಲ್ಲಿಯೂ ಓಡಿ ಹೋಗಲು ಯತ್ನಿಸಿಲ್ಲ ಎಂದು ಮಠಾಧೀಶರು ಶ್ರೀಗಳ ಪರವಾಗಿ ಸಮಜಾಯಿಸಿ ನೀಡಿದರು.

Advertisement

ಮಸಬಿನಾಳದ ಡಾ.ಸಿದ್ಧರಾಮ ಶ್ರೀಗಳು, ಸಿಂದಗಿ ಡಾ.ಸಾರಂಗಪ್ರಭು ಶ್ರೀಗಳು, ಚಡಚಣದ ಷಡಕ್ಷರರ ಶ್ರೀಗಳು, ನಗಠಾಣಾದ ಚನ್ನಮಲ್ಲಿಕಾರ್ಜುನ ಶ್ರೀಗಳು, ಯಂಕಂಚಿ ಅಭಿನವ ರುದ್ರಮುನಿ ಶ್ರೀಗಳು, ಸಿಂದಗಿ ರೇವಣಸಿದ್ಧ ಶ್ರೀಗಳು, ಅರ್ಜುಣಗಿಯ ಸಂಗನಬಸವ ಶ್ರೀಗಳು, ತಡವಲಗಾ ರಾಚೋಟೇಶ್ವರ ಶ್ರೀಗಳು, ಅಥರ್ಗಾ ಮುರುಘೇಂದ್ರ ಶ್ರೀಗಳು, ಆಳಂದ ಶಿವಬಸವ ಶ್ರೀಗಳು, ಸಗರಖೇಡ ಪ್ರಭುಲಿಂಗ ಶ್ರೀಗಳು, ದೇವರಹಿಪ್ಪರಗಿಯ ಶಿವಯೋಗಿ ಶ್ರೀಗಳು, ಗೋಲಗೇರಿ ಮುನೀಂದ್ರ ಶ್ರೀಗಳು, ಕುಮಸಗಿ ಶಿವಾನಂದ ಶ್ರೀಗಳು, ಬಸವನಬಾಗೇವಾಡಿ ಸಿದ್ಧಲಿಂಗ ಶ್ರೀಗಳು, ಇಂಚಗೇರಿ ರುದ್ರಮುನಿ ಶ್ರೀಗಳು, ದೇವರಹಿಪ್ಪರಗಿ ಮಡಿವಾಳೇಶ್ವರ ಶ್ರೀಗಳು,  ಮಹಾಂತ ಶ್ರೀಗಳು, ಸಾಮಾಜಿಕ ಕಾರ್ಯಕರ್ತ ಹಾಸಿಂಪೀರ ವಾಲೀಕಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next