ವಿಜಯಪುರ: ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ವಿವಾಹಿತ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ತಾಲೂಕಿನ ಅಲಿಯಾಬಾದ್ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಹತ್ಯೆಯಾದವರನ್ನು ಸುನೀತಾ ತಳವಾರ (35) ಹಾಗೂ ಅಮರನಾಥ ಸೋಲಾಪುರ (25) ಎಂದು ಗುರುತಿಸಲಾಗಿದೆ.
ಅಲಿಯಾಬಾದ್ ಗ್ರಾಮದ ತೋಟದ ಮನೆಯೊಂದರಲ್ಲಿ ತನಗಿಂತ ಕಿರಿಯನಾಗಿದ್ದ ಯುವಕನೊಂದಿಗೆ ವಿವಾಹಿತ ಮಹಿಳೆ ಅಕ್ರಮ ಸಂಬಂಧ ಹೊಂದಿದ್ದು, ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ಮಹಿಳೆಯ ತಂದೆ ಹಾಗೂ ಆಕೆಯ ಅಪ್ರಾಪ್ತ ಮಗನಿಗೆ ಸೆರೆಸಿಕ್ಕಿದ್ದಾರೆ.
ಮಾತ್ರವಲ್ಲದೆ ಮಗಳು ಮತ್ತು ಪ್ರಿಯಕರನನ್ನು ಕಂಡ ಸುನೀತಾ ತಂದೆ ಹಾಗೂ ಮಗ ಸೇರಿಕೊಂಡು ಇಬ್ಬರನ್ನೂ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿದು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸುನೀತಾಳ ತಂದೆ ರಾಮಗೊಂಡ ಹಾಗೂ ಆಕೆಯ ಅಪ್ರಾಪ್ತ ಮಗನನ್ನು ವಶಕ್ಕೆ ಪಡೆದಿದ್ದಾರೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ಇನ್ಸಪೆಕ್ಟರ್ ಮಹಾಂತೇಶ ದಾಮಣ್ಣವರ ಹಾಗೂ ಇತರ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿ, ತನಿಖೆ ಮುಂದುವರೆಸಿದ್ದಾರೆ.