Advertisement
ಸೋಮವಾರ ಸಂಜೆ ಬಿಹಾರ ಮೂಲದ ಕಾರ್ಮಿಕರು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜಗುರು ಇಂಡಸ್ಟ್ರೀಸ್ ಸಂಸ್ಥೆಯ ಗೋದಾಮಿನಲ್ಲಿ ಧಾನ್ಯಗಳ ಚೀಲಗಳನ್ನು ಜೋಡಿಸುವ ಕೆಲಸದಲ್ಲಿ ನಿರತರಾಗಿದ್ದರು.ಈ ಹಂತದಲ್ಲಿ ಚೀಲಗಳ ನಿಟ್ಟು ಜೋಡಿಸುವ ಕೆಲಸದಲ್ಲಿ ತೊಡಗಿದ್ದಾಗಲೇ ಏಕಾಏಕಿ ತುಂಬಿದ ಚೀಲಗಳ ನಿಟ್ಟು ಕುಸಿದು ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರ ಬಿದ್ದಿದೆ. ಇದರಿಂದಾಗಿ ಸುಮಾರು 20-25 ಕಾರ್ಮಿಕರು ಕುಸಿದ ಚೀಲಗಳ ಅಡಿಯಲ್ಲಿ ಸಿಲುಕಿದ್ದು, ಜೀವನ್ಮರಣದೊಂದಿಗೆ ಹೋರಾಟ ನಡೆಸಿದ್ದಾಗಿ ಪ್ರತ್ಯಕ್ಷದರ್ಶಿ ಕಾರ್ಮಿಕರು ವಿವರಿಸಿದ್ದಾರೆ.
Related Articles
Advertisement
ರಕ್ಷಿಸಲ್ಪಡುವ ಕಾರ್ಮಿಕರನ್ನು ತುರ್ತಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸಲು ಸ್ಥಳದಲ್ಲಿ 5 ಅಂಬ್ಯುಲೆನ್ಸ್‍ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಗೋದಾಮುಗಳಲ್ಲಿ ರಾತ್ರಿ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಇಲ್ಲ. ಹೀಗಾಗಿ ರಾತ್ರಿ ವೇಳೆ ಕಾರ್ಯಾರಣೆಗೆ ಹೆಚ್ಚಿನ ಬೆಳಕಿಗಾಗಿ 2 ಜನರೇಟರ್ ತರಿಸಲಾಗಿದೆ.
ಕಾರ್ಯಚರಣೆಯಲ್ಲಿ ತೊಡಗಿರುವ ತಂಡಗಳ ಅಧಿಕಾರಿಗಳ ಮಾಹಿತಿ ಪ್ರಕಾರ ಮೂವರು ಕಾರ್ಮಿಕರು ಚೀಲಗಳ ಅಡಿಯಲ್ಲಿ ಸಿಲುಕಿದ್ದರೂ ಸುರಕ್ಷಿತವಾಗಿರುವುದು ಗೋಚರಿಸುತ್ತಿದೆ. ಇನ್ನೂ ಸುಮಾರು 10ಕ್ಕೂ ಹೆಚ್ಚು ಕಾರ್ಮಿಕರು ಚೀಲಗಳ ಅಡಿಯಲ್ಲಿ ಇರುವ ಸಾಧ್ಯತೆ. ಪೂರ್ಣ ಕಾರ್ಯಾಚರಣೆಯ ಬಳಿಕವೇ ಅಪಾಯಕ್ಕೆ ಸಿಲುಕಿರುವ ಕಾರ್ಮಿಕರ ನಿಖರ ಸಂಖ್ಯೆ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.
ಅವಘಡ ಸಂಭಸಿರುವ ಗೋದಾಮಿನಲ್ಲಿ ಭಾರಿ ಪ್ರಮಾಣ ಧಾನ್ಯ ತುಂಬಿರುವ ಚೀಲಗಳನ್ನು ನಿಟ್ಟಾಗಿ ಒಟ್ಟಿದ್ದು, ಕಾರ್ಯಾಚರಣೆ ವೇಳೆ ಮತ್ತೆ ಕುಸಿಯುವ ಭೀತಿ ಇದೆ. ಹೀಗಾಗಿ ಮನುಷ್ಯರು ನೇರವಾಗಿ ಕಾರ್ಯಚರಣೇ ನಡೆಸದೆ ಜೆಸಿಬಿ ಯಂತ್ರಗಳ ಸಹಾಯದಿಂದ ಸೂಕ್ಷ್ಮವಾಗಿ ರಕ್ಷಣ ಕಾರ್ಯಾಚರಣೆ ನಡೆಸಿದ್ದಾರೆ.
ವಿಷಯ ತಿಳಿಯುತ್ತಲೇ ಸ್ಥಳಕ್ಕೆ ತೆರಳಿ ಬೀಡುಬಿಟ್ಟಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್, ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಮೇಲೆ ನಿಗಾ ವಹಿಸಿದ್ದಾರೆ.