Advertisement

ಹ್ಯಾಟ್ರಿಕ್‌ ವೀರ ರಮೇಶ ಜಿಗಜಿಣಗಿ ಕೈ ಹಿಡಿದ ತವರು ಕ್ಷೇತ್ರದ ಮತದಾರ

12:49 PM May 26, 2019 | Team Udayavani |

ಉಮೇಶ ಬಳಬಟ್ಟಿ
ಇಂಡಿ:
ವಿಜಯಪುರ ಮೀಸಲು ಕ್ಷೇತ್ರದ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಈ ಬಾರಿಯೂ ತವರಿನ ಜನ ಕೈ ಹಿಡಿದಿದ್ದಾರೆ. ರಮೇಶ ಜಿಗಜಿಣಗಿ ಕೆಲಸ ಮಾಡಿಲ್ಲ, ಈ ಬಾರಿ ಜಿಗಜಿಣಗಿ ಸೋಲು ಶತಸಿದ್ಧ ಎಂದು ಕ್ಷೇತ್ರದಲ್ಲಿ ಭಾರಿ ಪ್ರಮಾಣದಲ್ಲಿ ವಿರೋಧಿ ಅಲೆ ಇದ್ದ ಸಂದರ್ಭದಲ್ಲೂ ತವರು ಕ್ಷೇತ್ರದ ಜನ ಜಿಗಜಿಣಗಿ ಕೈ ಬಿಟ್ಟಿಲ್ಲ.

Advertisement

ರಮೇಶ ಜಿಗಜಿಣಗಿ ಇಂಡಿ ತಾಲೂಕಿನ ಅಥರ್ಗಾ ಗ್ರಾಮದವರಾಗಿದ್ದು ತಾಲೂಕಿನ ಹೆಮ್ಮೆಯ ವಿಚಾರ. ಜಿಗಜಿಣಗಿ ಶಾಸಕರಾಗಿ, ರಾಜ್ಯ ಸಚಿವರಾಗಿ, ಕೇಂದ್ರ ಸಚಿವರಾಗಿ ಕಾರ್ಯ ಮಾಡಿದ್ದು ನಮ್ಮ ತಾಲ್ಲೂಕಿನ ಜನರಿಗೆ ಹೆಮ್ಮೆಯ ವಿಚಾರವಾಗಿದೆ.

ಕಳೆದ ಎರಡು ಬಾರಿ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಗೆ ಜಿಲ್ಲೆಯ ಎಲ್ಲ ತಾಲೂಕುಗಳಿಗಿಂತ ಇಂಡಿ ತಾಲೂಕು ಹೆಚ್ಚು ಮತಗಳ್ನು ನೀಡಿ ಕೈ ಹಿಡಿದಿದೆ. ಇಂಡಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಿಗಜಿಣಗಿ 89,394 ಮತ, ಜೆಡಿಎಸ್‌ ಅಭ್ಯರ್ಥಿ ಸುನೀತಾ ಚವ್ಹಾಣ 43,310 ಮತ, ಬಿಎಸ್‌ಪಿ 3,892 ಮತ ಪಡೆದಿದ್ದಾರೆ. ಹೀಗಾಗಿ ಇಂಡಿ ಕ್ಷೇತ್ರದಿಂದ ಜಿಗಜಿಣಗಿ ಪ್ರತಿಸ್ಪರ್ಧಿಗಿಂತ 46,084 ಹೆಚ್ಚು ಮತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಇಂಡಿ ತಾಲೂಕು ಮತ್ತೂಮ್ಮೆ ಬಿಜೆಪಿ ಕೈ ಹಿಡಿದಿದೆ. ರಮೇಶ ಜಿಗಜಿಣಗಿ ಇಂಡಿ ತಾಲೂಕಿನವರು ಎಂಬ ಅಭಿಮಾನ ಒಂದೆಡೆಯಾದರೆ ಜಿಗಜಿಣಗಿಗಿಂತಲೂ ಮೋದಿ ಅಲೆ ತಾಲೂಕಿನಲ್ಲಿ ಹೆಚ್ಚಿನ ಕೆಲಸ ಮಾಡಿದೆ. ಅಲ್ಲದೆ ಕಾಂಗ್ರೆಸ್‌ ಪಕ್ಷ ಛಲವಾದಿ ಸಮುದಾಯಕ್ಕೆ ಟಿಕೆಟ್ ನೀಡಲಿಲ್ಲ ಎಂಬ ಕಾರಣಕ್ಕೆ ಮೂಲ ದಲಿತರು ಸಹ ಬಿಜೆಪಿಗೆ ಮತದಾನ ಮಾಡಿದ್ದು ಅತಿ ಹೆಚ್ಚು ಮತ ಪಡೆಯಲು ಸಾಧ್ಯವಾಗಿದೆ.

ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ನಾವು ಬಾಲ್ಯದಿಂದಲೂ ಗೆಳೆಯರು. ಜಿಗಜಿಣಗಿ ಮೃದು ವ್ಯಕ್ತಿತ್ವದ ವ್ಯಕ್ತಿ, ಯಾರ ಮನಸ್ಸನ್ನೂ ನೋಯಿಸದೆ ಸರ್ವ ಜನಾಂಗಕ್ಕೂ ಸಮಾನವಾಗಿ ಕಾಣುವ ವ್ಯಕ್ತಿ.ಅವನ ಗೆಲುವಿಗೆ ಅವನ ಸರಳತನ ಮತ್ತು ಮೋದಿ ಅಲೆಯೇ ಕಾರಣ.
ಭೀಮರಾಯ ಮದರಖಂಡಿ,
ಜಿಗಜಿಣಗಿ ಬಾಲ್ಯದ ಗೆಳೆಯ, ಮಾವಿನಹಳ್ಳಿ.

ಜಿಗಜಿಣಗಿ ಬಡತನದಲ್ಲಿ ಬೆಳೆದ ವ್ಯಕ್ತಿ. ಬಡವರು ಯಾರಾದರೂ ಹೋದರೆ ಕೈಲಾದಷ್ಟು ಸಹಾಯ ಮಾಡುವ ರೂಢಿ ಮಾಡಿಕೊಂಡಿದ್ದಾನೆ. ನಮ್ಮ ಬಾಲ್ಯದ ಗೆಳೆಯ ಶಾಸಕನಾಗಿ, ಸಚಿವನಾಗಿ, ಸಂಸದನಾಗಿ, ಕೇಂದ್ರ ಸಚಿವನಾಗಿ ಕಾರ್ಯ ಮಾಡಿದ್ದು ಹೆಮ್ಮೆಯ ವಿಚಾರ.
ಬಸವರಾಜ ಇಂಗಳೇಶ್ವರ,
ಜಿಗಜಿಣಗಿ ಬಾಲ್ಯದ ಗೆಳೆಯ, ಅಥರ್ಗಾ

Advertisement
Advertisement

Udayavani is now on Telegram. Click here to join our channel and stay updated with the latest news.

Next