Advertisement

ರಮೇಶ ಜಿಗಜಿಣಗಿ ಗೆಲುವು ಖಚಿತ

03:24 PM Apr 12, 2019 | Naveen |

ವಿಜಯಪುರ: ತಮ್ಮ ರಾಜಕೀಯ ಜೀವನದಲ್ಲಿ 17 ಖಾತೆಗಳನನ್ನು
ನಿಭಾಯಿಸಿರುವ ವಿಜಯಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ರಮೇಶ ಜಿಗಜಿಣಗಿ ಅವರು ವಿಜಯಪುರ ಕ್ಷೇತ್ರದಲ್ಲಿ ವಿಜಯ
ಸಾಧಿಸುವುದು ಖಚಿತ ಎಂದು ಮೇಲ್ಮನೆ ಸದಸ್ಯ-ಚಿತ್ರನಟಿ ತಾರಾ ಅನುರಾಧಾ
ಹೇಳಿದರು.

Advertisement

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು, ವಿಜಯಪುರ
ಕ್ಷೇತ್ರ ಬಿಜೆಪಿ ಭದ್ರಕೋಟೆ ಎನಿಸಿರುವ ವಿಜಯ ಸಂದೇಶ ಹೊಂದಿರುವ
ವಿಜಯಪುರ ಕ್ಷೇತ್ರದಲ್ಲಿ ಈ ಬಾರಿಗೆ ವಿಜಯಲಕ್ಷ್ಮೀ ಬಿಜೆಪಿ-ಜಿಗಜಿಣಗಿ ಕೈ
ಹಿಡಿಯಲಿದ್ದಾರೆ ಎಂದರು.

ವಿಜಯಪುರ ಸಂಸದರಾಗಿ ರಮೇಶ ಜಿಗಜಿಣಗಿ ಅವರು ರಾಷ್ಟ್ರೀಯ
ಹೆದ್ದಾರಿಗಳ ಅಭಿವೃದ್ಧಿ ಮಾಡಿದ್ದಾರೆ. ಆದರೆ ಸ್ಥಳೀಯ ಶಾಸಕರು, ಸ್ಥಳೀಯ
ಸಂಸ್ಥೆಗಳು ಮಾಡುವ ಕೆಲಸಗಳನ್ನು ಸಂಸದರು ಮಾಡಲಿಲ್ಲ ಎಂದು
ಜನ ದೂರುವ ಸ್ಥಿತಿ ಇದೆ. ಜಾಗೃತಿ ಕೊರತೆಯೇ ಇದಕ್ಕೆ ಕಾರಣವಾಗಿದೆ.
ಸಂಸದರ ಇತಿ-ಮಿತಿಯ ಕುರಿತು ಮನವರಿಕೆ ಮಾಡಿಕೊಡುವ ಅಗತ್ಯವೂ
ಇದೆ ಎಂದರು.

ದೇಶದಲ್ಲಿ ಎಲ್ಲಿಯೇ ಹೋಗಲಿ ನಾವು ಬಿಜೆಪಿಗೆ ಮತ ಹಾಕಿ ಎಂದು
ಕೇಳುವ ಮೊದಲೇ ಎಲ್ಲೆಡೆ ಜನರು ಮೋದಿ ಮೋದಿ ಎಂದು ಕೂಗುವ
ಮೂಲಕ ಸ್ವಯಂ ಪ್ರೇರಿತರಾಗಿ ಮೋದಿ ಮತ್ತೂಮ್ಮೆ, ಮಗದೊಮ್ಮೆ
ಎಂದು ಅಭಯ ನೀಡುತ್ತಿದ್ದಾರೆ. ದೇಶದ ಹಿತಕ್ಕಾಗಿ ಮೋದಿ ಅವರು
ಮತ್ತೂಮ್ಮೆ ಪ್ರಧಾನಿ ಆಗಲಿ ಎಂಬುದು ದೇಶದ ಜನರ ಆಶಯ ಹೊಂದಿದ್ದಾರೆ.
ಕಾರಣ 60 ವರ್ಷದಲ್ಲಿ ಮಾಡಲಾಗದ ಕೆಲಸವನ್ನು 5 ವರ್ಷದಲ್ಲಿ ಮಾಡಿಲ್ಲ
ಏಕೆ ಎಂದು ಕೇಳುವ ಮಟ್ಟಿಗೆ ಜನತೆ ಮೋದಿ ಅವರ ಮೇಲೆ ವಿಶ್ವಾಸ
ಇರಿಸಿರುವುದನ್ನು ಇದು ಮನವರಿಕೆ ಮಾಡಿಕೊಡುತ್ತದೆ ಎಂದರು.

ಬಿಜೆಪಿ ಮಹಿಳೆಯರ ಪರವಾಗಿದ್ದು, ಕೇಂದ್ರದಲ್ಲಿ ಮೊಟ್ಟ ಮೊದಲು
ಮಹಿಳೆಯನ್ನೇ ರಕ್ಷಣೆ, ವಿದೇಶಾಂಗ ಸೇರಿ ಮೋದಿ ಸರ್ಕಾರದಲ್ಲಿ 9
ಮಹಿಳೆಯರು ಸಚಿವರಾಗಿದ್ದಾರೆ. ಇದು ನಮ್ಮ ಪಕ್ಷದಲ್ಲಿ ಮಹಿಳೆಗೆ ರಾಜಕೀಯ
ಅಧಿಕಾರದ ಸಂದರ್ಭದಲ್ಲಿ ಆದ್ಯತೆ ನೀಡಿರುವುದಕ್ಕೆ ಸಾಕ್ಷಿ. ಇದಲ್ಲದೇ
ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.50 ರಷ್ಟು ಮೀಸಲಾತಿ ನೀಡಿದ್ದೇ
ಬಿಜೆಪಿ. ಹೀಗಾಗಿ ಮಹಿಳೆಯರು ಬಿಜೆಪಿ ಮಟ್ಟಿಗೆ ಮತ ಬ್ಯಾಂಕ್‌ ಮಾತ್ರವಲ್ಲ
ರಾಜಕೀಯ ಮುನ್ನೆಲೆಯಲ್ಲೂ ಅವಕಾಶ ಕಲ್ಪಿಸಿದೆ. ತೇಜಸ್ವಿನಿ ಅನಂತಕುಮಾರ ಅವರಿಗೆ ಟಿಕೆಟ್‌ ಕೊಡಬೇಕಾಗಿತ್ತು ಎನ್ನುವುದು ನನ್ನ
ಭಾವನೆಯೂ ಹೌದು. ಆದರೆ ಅದು ಹೈ-ಕಮಾಂಡ್‌ ನಿರ್ಧಾರ ಇರುವ
ಕಾರಣ ಈ ಕುರಿತು ಪ್ರತಿಕ್ರಿಯಿಸುವ ಮಿತಿ ನನ್ನದಲ್ಲ ಎಂದರು.

Advertisement

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನಮ್ಮ ಪಕ್ಷದ ಶಾಸಕರಾಗಿದ್ದು, ಮನೆ ಎಂದಮೇಲೆ ಸಣ್ಣ-ಪುಟ್ಟ ವ್ಯತ್ಯಾಸಗಳಿರುತ್ತವೆ. ಎಲ್ಲವೂ ಸರಿ ಹೋಗುತ್ತದೆ. ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿ ಆಗಲೆಂಬ ಕನಸು ಹೊಂದಿದ್ದಾರೆ. ಹೀಗಾಗಿ ಅವರು ಕೂಡ ರಮೇಶ ಜಿಗಜಿಣಗಿ
ಪರವಾಗಿ ಕೆಲಸ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ
ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಲ್ಲಮ್ಮ ಜೋಗೂರ, ಜಿಪಂ ಸದಸ್ಯೆ ದಾನಮ್ಮ ಅಂಗಡಿ, ಮಾಜಿ ಸದಸ್ಯೆ ಸೌಮ್ಯಾ ಕಲ್ಲೂರ, ಅಶ್ವಿ‌ನಿ ಪಟ್ಟಣಶೆಟ್ಟಿ,
ಮಂಜುಳಾ ಅಂಗಡಿ, ಅನುರಾಧಾ ಕಲಾಲ, ರಜನಿ ಸಂಬಣ್ಣಿ, ಗೀತಾ
ಕುಗನೂರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next