Advertisement
ನಗರದ ಟಕ್ಕೆಯಲ್ಲಿರುವ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜಿಲ್ಲಾಡಳಿತ, ತರಬೇತಿ ಸಂಸ್ಥೆ ಮೈಸೂರು ಇವರ ಸಹಯೋಗದೊಂದಿಗೆ ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ವಿಕೋಪ ನಿರ್ವಹಣೆ ಕ್ರಿಯಾ ಯೋಜನೆ ಪರಿಷ್ಕರಣೆ ಹಾಗೂ ತಯಾರಿಕೆ ಕುರಿತ ಕಾರ್ಯಾಗಾರದಲ್ಲಿ ‘ದುರಂತ ಸಂದರ್ಭದಲ್ಲಿ ಪ್ರಥಮ ಸ್ಪಂದನೆ ಅಥವಾ ಪ್ರಥಮ ಚಿಕಿತ್ಸೆ ಮಹತ್ವ’ ಕುರಿತು ಉಪನ್ಯಾಸ ನೀಡಿದ ಅವರು, ಯಾವುದೇ ವ್ಯಕ್ತಿ ಅವಘಡ ಸಂಭವಿಸಿ, ಗಾಯಗೊಂಡಾಗ ಅವರಿಗೆ ಸೂಕ್ತ ರೀತಿಯಲ್ಲಿ ಪ್ರಥಮ ಚಿಕಿತ್ಸೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಇದಕ್ಕಾಗಿ ಯಾವುದೇ ಪೊಲೀಸ್, ನ್ಯಾಯಾಲಯ ಎಂಬ ಭೀತಿಯಿಂದ ಹೊರಬಂದು ಮಾನವೀಯತೆ ನೆಲೆಯಲ್ಲಿ ಸಹಾಯಕ್ಕೆ ಮುಂದಾಗಬೇಕು ಎಂದು ಹೇಳಿದರು.
Related Articles
Advertisement
ವಿಪತ್ತು ಸಂಭವಿಸುವ ಮುನ್ನ ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳು ಒಟ್ಟುಗೂಡಿ ಜನರಕ್ಷಣೆಗಾಗಿ ಸ್ಥಳಾಂತರಿಸುವುದು, ಗಂಜಿ ಕೇಂದ್ರ ತೆರೆಯುವುದು, ಮೂಲ ಸೌಕರ್ಯ ಒದಗಿಸುವುದು, ಮಾಧ್ಯಮಗಳಲ್ಲಿ ಬಿತ್ತರಿಸುವುದು ಮುಂತಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞ ರಾಕೇಶ ಜೈನಾಪುರ ಮಾತನಾಡಿ, ವಿಪತ್ತು ನಿರ್ವಹಣಾ ಕಾಯ್ದೆ 2005 ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಕ್ಲೈಮೆಟ್ ರಿಯಾಕ್ಷನ್ ಫಂಡ್ ಇದರ ಅಡಿಯಲ್ಲಿ ಜಿಲ್ಲಾಡಳಿತದಿಂದ ವಿತರಣೆಯಾಗುವ ಅನುದಾನ ಬಗ್ಗೆ ಸವಿಸ್ತಾರವಾಗಿ ತಿಳಿಸಿದ ಅವರು, ವಿಪತ್ತು ನಿರ್ವಹಣೆ ಸಂಬಂಧಿಸಿದಂತೆ ಪರಿಹಾರಕ್ಕಾಗಿ 1077 ಸಂಖ್ಯೆಗೆ ಉಚಿತ ಕರೆ ಮಾಡಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ, ಅಪಾಯ, ನಷ್ಟ ದುರ್ಬಲತೆ, ಸಾಮರ್ಥ್ಯಗಳ ವಿಶ್ಲೇಷಣೆ, ಪೂರ್ವ ಸಿದ್ಧತೆ, ಸ್ಪಂದನಾ ಯೋಜನೆ ತಯಾರಿಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಉಪಪ್ರಾಚಾರ್ಯ ಎಂ.ಎಸ್. ಪಾಟೀಲ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.