Advertisement

ಆ.19 ರಂದು ವಿಜಯಪುರದಲ್ಲಿ ಬೃಹತ್ ಉದ್ಯೋಗ ಮೇಳ: ಇಲ್ಲಿದೆ ಸಂಪರ್ಕ ವಿವರ

03:49 PM Aug 13, 2022 | keerthan |

ವಿಜಯಪುರ: ಹಣಮಂತ ನಿರಾಣಿ ಫೌಂಡೇಶನ್ ಹಾಗೂ ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ವಿಜಯಪುರ ನಗರದಲ್ಲಿ ಆ.19 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಶಾಂತಿನಿಕೇತನ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಸುರೇಶ ಬಿರಾದಾರ ಹೇಳಿದರು.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಉದ್ಯೋಗ ಮೇಳದ ವಿವರ ನೀಡಿದ ಅವರು, ನಗರದ ಬಿಎಲ್ ಡಿಇ ಎಂಜಿನಿಯರಿಂಗ್‌ ಕಾಲೇಜ್ ಎದುರಿನ ಶಾಂತಿನಿಕೇತನ ಶಿಕ್ಷಣ ಸಮೂಹ ನಮೃತಾ ಕಾಲನಿಯಲ್ಲಿ ಮೇಳ ನಡೆಯಲಿದೆ. ಮೇಳಕ್ಕೆ ಈಗಾಗಲೇ ಸಕಲ ಸಿದ್ದತೆ ಪೂರ್ಣಗೊಳಿಸಲಾಗಿದೆ ಎಂದು ವಿವರಿಸಿದರು.

ಕೋವಿಡ್‌ ಕಾರಣದಿಂದ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಹೀಗಾಗಿ ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲು ಬೃಹತ್‌ ಪ್ರಮಾಣದ ಉದ್ಯೋಗ ಮೇಳ ಆಯೋಜಿಸಲಾಗಿದೆ. ತಾಂತ್ರಿಕ ಹಾಗೂ ತಾಂತ್ರಿಕೇತರ ಶೈಕ್ಷಣಿಕ ಅರ್ಹತೆ ಹೊಂದಿದವರನ್ನು ನೇಮಿಸಿಕೊಳ್ಳಲೆಂದೇ ಸುಮಾರು 75 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗಿಯಾಗಲಿವೆ. ಉದ್ಯೋಗ ಮೇಳದಲ್ಲಿ ಸಂದರ್ಶನಕ್ಕೆ ಹಾಜರಾಗುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ನಿರುದ್ಯೋಗಿ ಪದವೀಧರರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಯಾವುದೇ ಪದವಿ, ತಾಂತ್ರಿಕ ಕೋರ್ಸ್, ಮಾರ್ಕೆಟಿಂಗ್ ಹಾಗೂ ಮ್ಯಾನೇಜ್ ಮೆಂಟ್ ಪದವೀಧರರು ಮೇಳದಲ್ಲಿ ಭಾಗವಹಿಸಬಹುದು. ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಶಿಕ್ಷಣ ಪಡೆದ ವಿದ್ಯಾರ್ಥಿಗಳೂ ಉದ್ಯೋಗ ಪಡೆಯಲು ಅವಕಾಶ ಕಲ್ಪಿಸಲು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸಂದರ್ಶನಕ್ಕೆ ಬರುವ ಉದ್ಯೋಗಾಕಾಂಕ್ಷಿಗಳು ತಮ್ಮ ಶೈಕ್ಷಣಿಕ ದಾಖಲೆಗಳ ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್ ಮತ್ತು ಸ್ವ ವಿವರ ಅರ್ಜಿಯನ್ನು ಇ ಮೇಲ್ jobfair.mrnf@gmail.com  ಗೆ ಸಲ್ಲಿಸಬಹುದು. ಮಾಹಿತಿಗೆ ಮೊ. 9071772722, 9071776454, 9945000793 ಗೆ ಸಂಪರ್ಕಿಸಬಹುದು ಎಂದರು.

Advertisement

ಈರಣ್ಣ ಪಟ್ಟಣಶೆಟ್ಟಿ, ರಾಜು ಕಳಸಗೊಂಡ, ಈರಣ್ಣ ಹೆರಲಗಿ, ಐ.ಜಿ. ನ್ಯಾಮಗೌಡ, ವಿಜಯ ಜೋಶಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.