Advertisement

ಕವಿಗಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಅಗತ್ಯ

05:23 PM May 27, 2019 | Naveen |

ವಿಜಯಪುರ: ಯುವ ಬರಹಗಾರರಿಗೆ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಗಳು ಸಿಗಬೇಕು. ಆಗ ಅವರ ಪ್ರತಿಭೆ ಪ್ರಕಾಶಿಸಬಲ್ಲದು. ಸಾಹಿತ್ಯ ಸಾಮಾನ್ಯನ ಮನ ಮುಟ್ಟಿದಾಗಲೇ ಸಾರ್ಥಕತೆ ಪಡೆಯುತ್ತದೆ ಎಂದು ನ್ಯಾಯವಾದಿ ಕೆ.ಎಫ್‌. ಅಂಕಲಗಿ ಅಭಿಪ್ರಾಯಪಟ್ಟರು.

Advertisement

ನಗರದ ಪ್ರಗತಿ ಪ್ರೌಢಶಾಲೆಯಲ್ಲಿ ನಡೆದ ಜಗಜ್ಯೋತಿ ಸಾಹಿತ್ಯ ವೇದಿಕೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕವಿ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಶ್ರಮ ಇದ್ದಾಗ ಅದೃಷ್ಟದ ಬಾಗಿಲು ತಾನೇ ತಾನಾಗಿ ತೆರೆಯುತ್ತದೆ. ಬರೆದ ಸಾಹಿತ್ಯ ಓದುಗರ ಮನಮುಟ್ಟಿದಾಗ ಲೇಖಕನ ಮನಸ್ಸು ಮುದಗೊಳ್ಳುವುದು. ಆ ನಿಟ್ಟಿನಲ್ಲಿ ಬಸವಣ್ಣನವರ ಆದರ್ಶಗಳ ಪ್ರಚಾರಕ್ಕಾಗಿ ಬಸವನಬಾಗೇವಾಡಿ ಜಗಜ್ಯೋತಿ ಸಾಹಿತ್ಯ ವೇದಿಕೆ ಹುಟ್ಟು ಹಾಕಿಕೊಂಡ ಮುರುಗೇಶ ಸಂಗಮ ಅವರ ಕಾರ್ಯ ಶ್ಲಾಘನೀಯ ಎಂದರು.

ಚಾಣಕ್ಯ ಕರಿಯರ್‌ ಅಕಾಡೆಮಿ ಮುಖ್ಯಸ್ಥ ಎನ್‌.ಎಂ. ಬಿರಾದಾರ ಮಾತನಾಡಿ, ಉತ್ಕೃಷ್ಟ ಬರಹ ಸ್ಮರಣೆಯಲ್ಲಿ ಉಳಿದು ಸಾಹಿತ್ಯ ಪ್ರಜ್ಞೆಯನ್ನು ಉದ್ದಕ್ಕೂ ಪ್ರದರ್ಶಿಸುತ್ತ ಹೋಗುತ್ತದೆ. ಸಾಹಿತ್ಯ ರಚನೆಯಲ್ಲಿ ಅಧ್ಯಯನಶೀಲತೆ ಮುಖ್ಯವಾಗಿದ್ದು ಎಷ್ಟು ಬರಿದಿದ್ದೇವೆ ಎಂಬುದು ಮುಖ್ಯವಲ್ಲ, ಬದಲಾಗಿ ಏನನ್ನು ಬರೆದಿದ್ದೇವೆ ಎಂಬುದು ಗಮನಾರ್ಹ. ಕವನಗಳಲ್ಲಿ ಕಾವ್ಯ ಸತ್ವ ಇದ್ದಾಗ ಓದುಗರ ಗಮನ ಸೆಳೆಯುತ್ತದೆ. ಜಗಜ್ಯೋತಿ ಸಾಹಿತ್ಯ ವೇದಿಕೆ ಸಮಾಜಮುಖೀ ಕಾರ್ಯಕ್ರಮ ಸ್ತುತ್ಯರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿದ್ದಲಿಂಗ ಮನಹಳ್ಳಿ ಮಾತನಾಡಿ, ಪ್ರಚಲಿತ ವಿದ್ಯಮಾನಗಳನ್ನು ಆಯ್ದುಕೊಂಡು ವಸ್ತುನಿಷ್ಠವಾಗಿ ಕವಿತೆ ಕಟ್ಟಿದರೆ ಆಪ್ತವೆನಿಸುತ್ತದೆ. ಕವಿಗಳು ಅರ್ಥಪೂರ್ಣ ಕವಿತೆಗಳನ್ನು ರಚಿಸುವತ್ತ ಹಾಗೂ ಹಿರಿಯ ಸಾಹಿತಿಗಳ ಕಾವ್ಯವನ್ನು ಹೆಚ್ಚೆಚ್ಚು ಅಧ್ಯಯನ ಮಾಡಬೇಕು ಎಂದು ಹೇಳಿದರು.

ಬಬಲೇಶ್ವರ ವೈದ್ಯ ಡಾ| ಶಂಕರಗೌಡ ಬಿರಾದಾರ ಅವರಿಗೆ ರಾಷ್ಟ್ರಮಟ್ಟದ ವೈದ್ಯ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಪ.ಗು. ಸಿದ್ದಾಪುರ, ಗಂಗಾಧರಯ್ಯ ಜಾಲಿಬೆಂಚಿ ಅವರ ಜೋ ಜೋ ಲಾಲಿ ಗ್ರಂಥ ಲೋಕಾರ್ಪಣೆ ಮಾಡಿದರು. ಶಂಕರ ಬೈಚಬಾಳ ಕೃತಿ ಪರಿಚಯಿಸಿದರು.

Advertisement

ಈರಣ್ಣ ಶಿರಮಗೊಂಡ, ಬಿ.ಎಂ. ಕೋಕರೆ, ಎಂ.ಎಸ್‌. ಬಿದರಿ, ಎಚ್.ಎಲ್. ಮಾಲಗಾವಿ, ಎಚ್.ವೈ. ನಾಟೀಕಾರ, ಎ.ಎ. ಸಾವಳಗಿ, ಶಿವಾನಂದ ದಾಶ್ಯಾಳ, ಎಸ್‌.ಎಸ್‌. ಜಾಲವಾದಿ, ಜಿ.ಬಿ. ಸೂರಗೊಂಡ, ಎಂ.ಆರ್‌. ತೋಟದ, ಶ್ರೀನಿವಾಸ ಕುಲಕರ್ಣಿ ಹಾಗೂ ಚಂದ್ರಶೇಖರ ದಾಶ್ಯಾಳ ಅವರನ್ನು ಸನ್ಮಾನಿಸಲಾಯಿತು.

ಬಸವನಬಾಗೇವಾಡಿಯ ಶಿವಪ್ರಕಾಶ ಶ್ರೀ, ಮನಗೂಳಿಯ ಅಭಿನವ ಸಂಗನಬಸವ ಶ್ರೀ ಸಾನ್ನಿಧ್ಯ ವಹಿಸಿದ್ದರು. ವಿದ್ಯಾವತಿ ಅಂಕಲಗಿ, ಮಲ್ಲಿಕಾರ್ಜುನ ಅವಟಿ, ಈರಮ್ಮ ಬೋನೂರ, ಪ್ರಭಾಕರ ಖೇಡದ, ಸುಜ್ಞಾನಿ ಪಾಟೀಲ, ಬಸನಗೌಡ ಬಿರಾದಾರ, ಮಲ್ಲಿಕಾರ್ಜುನ ತೊದಲಬಾಗಿ, ನಾಗರಾಜ ಎಂ.ಎನ್‌, ಬಾಬುರಾವ್‌ ಕುಲಕರ್ಣಿ, ಸುನಂದಾ ಕಾಖಂಡಕಿ, ಮಹಾದೇವಿ ಪಾಟೀಲ, ಶಿವಾಜಿ ಮೋರೆ, ನೀಲಪ್ಪ ಬನಸೋಡೆ, ರಾಜಶೇಖರ ಕಲ್ಮಠ ಕವನ ವಾಚಿಸಿದರು.

ವೇದಿಕೆ ಸಂಚಾಲಕ ಮುರುಗೇಶ ಸಂಗಮ ನಿರೂಪಿಸಿದರು. ಮಹಾದೇವಿ ವಾಲಿ ಸ್ವಾಗತಿಸಿದರು. ಸತೀಶ ಬಿರಾದಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next