Advertisement
ಚಿತ್ರಕಲೆಯಲ್ಲಿ ಮಹಿಳೆಯರು ನಿರೀಕ್ಷಿತ ಪ್ರಮಾಣದಲ್ಲಿ ತೊಡಗಿಸಿಕೊಳ್ಳದ ಕಾರಣ ಮಹಿಳೆಯರ ಚಿತ್ರಕಲಾ ಕೃತಿಗಳು ಪ್ರದರ್ಶನಗೊಳ್ಳುವುದು, ರಾಷ್ಟ್ರ-ಆಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಕು ಕಾಣುವುದು ಅಪರೂಪ. ಇಂತಹ ಸಂದರ್ಭದಲ್ಲಿ ಏಕ ಕಾಲಕ್ಕೆ ದ್ರಾಕ್ಷಿ ನಾಡಿನ ಐವರು ಚಿತ್ರ ಕಲಾವಿದೆಯರು ಅಕ್ರ್ಯಾಲಿಕ್ ಮಾಧ್ಯಮದಲ್ಲಿ ತಮ್ಮ ಕಲಾಕೃತಿಗಳ ಪ್ರತಿಭೆ ಪ್ರದರ್ಶನಕ್ಕೆ ನೇಪಾಳ ಹೊರಟಿದ್ದಾರೆ.
Related Articles
Advertisement
ಇನ್ನೋರ್ವ ಕಲಾವಿದೆ ಡಾ| ಸುಚಿತ್ರಾ ಲಿಂಗ್ದಳ್ಳಿ ಅವರು, ಅಕ್ರ್ಯಾಲಿಕ್ ಮಾಧ್ಯಮದಲ್ಲಿ ಆಧುನಿಕ ಜಗತ್ತಿನಲ್ಲಿ ಮನುಷ್ಯ ಸಂಬಂಧಗಳು ಕಡಿಮೆಯಾಗಿ, ಅಂತರ್ಜಾಲ ಪ್ರಭಾವ-ಪರಿಣಾಮದ ಹಾವಳಿಗೆ ಸಿಕ್ಕಿಕೊಂಡು ಯಾಂತ್ರೀಕರಣಗೊಳ್ಳುತ್ತಿರುವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಿಂದ ದೃಶ್ಯಕಲಾ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕಲಾವಿದೆ ರಾಜೇಶ್ವರಿ ಆಲಕುಂಟೆ ಹೆಣ್ಣಿನ ಸಕಾರಾತ್ಮಕ ಹಾಗೂ ನಕಾರಾತ್ಮಕ ಭಾವನೆಗಳನ್ನು ಅಕ್ರ್ಯಾಲಿಕ್ ಮಾಧ್ಯಮ ಬಳಸಿಕೊಂಡು, ಗರ್ಭ ಧರಿಸಿದ ಮಹಿಳೆ ತನ್ನ ಮಗುವಿನ ಭವಿಷ್ಯದ ಕುರಿತು ಕಾಣುವ ಕನಸುಗಳು, ಕಟ್ಟಿಕೊಳ್ಳುವ ಯೋಜನೆ, ಬಾಡಿಗೆ ತಾಯಿ, ಹೆಣ್ಣು ಮಗುವಿನ ಮಾರಾಟದಂತಹ ವಿಷಯಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಚಿತ್ರಕಲೆಯಲ್ಲಿ ಸ್ನಾತಕೋತರ ಪದವಿ ಪಡೆದಿರುವ ದ್ರಾಕ್ಷಾಯಣಿ ಇಮ್ನದ ಎಂಬ ಕಲಾವಿದೆ ಕೂಡ ಅಕ್ರ್ಯಾಲಿಕ್ ಮಾಧ್ಯಮದ ಮೂಲಕ ಹೆಣ್ಣು-ಗಂಡು ಪರಸ್ಪರ ಸಹಕಾರ ಮನೋಭಾದ ಮೂಲಕ ಬದುಕಿನ ಗುರಿ ಮುಟ್ಟುವ ಸುಲಭ ಸಾಧ್ಯತೆಯನ್ನು ಕುದುರೆಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ರಚಿಸಿರುವ ಕಲಾಕೃತಿ ಆಕರ್ಷಣೆ ಹೊಂದಿದೆ.
ಪರಿಸರಕ್ಕೆ ಸಂಬಂಧಿಸಿದ ಚಿತ್ರಗಳ ರಚನೆಯಲ್ಲಿ ಸೈ ಎನಿಸಿಕೊಂಡಿರುವ ಕಾವೇರಿ ಪೂಜಾರಿ ಕೂಡ ಅಕ್ರ್ಯಾಲಿಕ್ ಮಾಧ್ಯಮದಲ್ಲಿ ಸಾಧನೆ ಮಾಡಿದ ಕಲಾವಿದೆ. ಸ್ವಾರ್ಥಿ ಮನುಷ್ಯ ಗಗನಚುಂಬಿ ಮರಗಳನ್ನು ನಾಶ ಮಾಡಿ, ಆಕಾಶದ ಎತ್ತರಕ್ಕೆ ಕಾಂಕ್ರೀಟ್ ಕಾಡು ನಿರ್ಮಿಸಿಕೊಂಡು ತನ್ನ ಅವಸಾನವನ್ನು ತಾನೇ ತಂದುಕೊಂಡಿರುವ ಪ್ರಕೃತಿ-ಮನುಷ್ಯನ ಮಧ್ಯದ ಸಂಘರ್ಷವನ್ನು ಚಿತ್ರಿಸಿರುವ ಕೃತಿ ಪ್ರಸ್ತುತ ನಮ್ಮ ವ್ಯವಸ್ಥೆಗೆ ಕೈಗನ್ನಡಿಯಾಗಿದೆ.