Advertisement
ವಿಜಯಪುರದ ಪಿಡಿಜೆ ಪಪೂ ಮಹಾವಿದ್ಯಾಲಯದ ಮಾಧ್ಯಮಿಕ ವಿಭಾಗದ 1981ನೇ ಬ್ಯಾಚ್ ವಿದ್ಯಾರ್ಥಿಗಳ ಸಮಾವೇಶ ಹಾಗೂ ಗುರುವಂದನೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
Related Articles
Advertisement
ಗುರುವಂದನೆ ಸ್ವೀಕರಿಸಿ ಮಾತನಾಡಿದ ವಿಶ್ರಾಂತ ಶಿಕ್ಷಕ ಬಿ.ಎ. ಸೊಂಡೂರ, ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಎನ್ನುವ ಮನೋಭಾವ ಸದಾ ಜಾಗೃತವಾಗಿರಬೇಕು. ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿಶ್ರಾಂತ ದೈಹಿಕ ಶಿಕ್ಷಕ ಆರ್.ಆರ್. ಕುಲಕರ್ಣಿ ಮಾತನಾಡಿ, ಸಾಧನೆಗೆ ಸದೃಢವಾದ ಶರೀರ ಅವಶ್ಯ, ಹೀಗಾಗಿ ಅನೇಕ ಹುದ್ದೆಗಳನ್ನು ಅಲಂಕರಿಸಿ ಕೆಲಸದ ಒತ್ತಡದ ಮಧ್ಯದಲ್ಲಿಯೂ ಆರೋಗ್ಯಕ್ಕೆ ವಿಶೇಷ ಒತ್ತು ನೀಡಬೇಕಾಗಿರುವುದು ಅತ್ಯಂತ ಅಗತ್ಯ, ಆರೋಗ್ಯ ಚೆನ್ನಾಗಿದ್ದರೆ ಇನ್ನೂ ಸಾಧನೆ ಮಾಡಬಹುದಾಗಿದೆ ಎಂದರು.
ವಿಶ್ರಾಂತ ಕಲಾಶಿಕ್ಷಕ ಅಂಬಾದಾಸ ಜೋಶಿ ಮಾತನಾಡಿ, ಈ ಶಾಲೆಯಲ್ಲಿ 1981ರಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ದೇಶ-ವಿದೇಶದಲ್ಲಿ ನೆಲೆ ನಿಂತು ಕರ್ತವ್ಯ ನಿರ್ವಹಿಸುತ್ತಿರುವ ವಿಷಯ ಸಂತೋಷದ ಸಂಗತಿ. ಈ ಸಂತೋಷವೇ ಶಿಕ್ಷಕರಿಗೆ ಎಲ್ಲ ರೀತಿಯ ಗೌರವ ತಂದುಕೊಡುತ್ತದೆ. ಎಲ್ಲೇ ಇರಿ ಕನ್ನಡ ಭಾಷೆ, ಕನ್ನಡ ನೆಲ, ಕನ್ನಡ ಜಲವನ್ನು ಮರೆಯದಿರಿ, ಮಕ್ಕಳಿಗೆ ಪಾಶ್ಚಾತ್ಯ ಸಂಸ್ಕೃತಿ ಕಲಿಸದೇ ಭಾರತೀಯ ಸಂಸ್ಕೃತಿ ಬೋಧಿಸಿ ಎಂದು ಕರೆ ನೀಡಿದರು.
1981ರಲ್ಲಿ ಪಿಡಿಜೆಯಲ್ಲಿ ಅಧ್ಯಯನ ಮಾಡಿ ಇಂದು ಬೇರೆ ಬೇರೆ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಹಳೆ ಸ್ನೇಹಿತರೆಲ್ಲರೂ ಮತ್ತೆ ಅನೇಕ ವರ್ಷಗಳ ನಂತರ ಭೇಟಿಯಾದರು. ಈ ಕ್ಷಣದಲ್ಲಿ ವಿಚಾರ ವಿನಿಮಯ, ಉಭಯ ಕುಶಲೋಪರಿ ಸಂದರ್ಭದಲ್ಲಿ ಆನಂದ ಭಾಷ್ಪ ಸುರಿಸಿದರು. ನಂತರ ತಮ್ಮನ್ನು ಕಲಿಸಿದ ಶಿಕ್ಷಕರಿಗೆ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಿ ಕಾಲಿಗೆ ನಮಸ್ಕರಿಸಿ ಗೌರವ ಸಮರ್ಪಿಸಿದರು.
ಹಳೆ ವಿದ್ಯಾರ್ಥಿಗಳಾದ ಶ್ರೀನಿವಾಸ ದೇಸಾಯಿ, ಮನ್ಮಥ ಕುಲಕರ್ಣಿ, ಡಾ| ಅನಂತ ದೇಸಾಯಿ, ಜಾವೇದ ಅತ್ತಾರ, ವಿದ್ಯಾ ರಾಜಪುರೋಹಿತ ಔರಸಂಗ, ಡಾ| ಸುಮತಿ, ಚಂದ್ರಾ, ಡಾ| ರವೀಂದ್ರ ಜಹಾಗೀರದಾರ, ಶಿವಾನಂದ ಅಂಗಡಿ ಇದ್ದರು.