Advertisement
ಈಗಾಗಲೇ 1.16 ಲಕ್ಷ ಜನರ ಗಂಟಲು ದ್ರವ ಮಾದರಿ ಪರೀಕ್ಷಿಸಿದ್ದು, ಶೇ. 9ಜನರಲ್ಲಿ ಮಾತ್ರ ಸೋಂಕು ಪತ್ತೆಯಾಗುತ್ತಿದೆ.ಸೋಂಕಿತರಲ್ಲಿ ಶೇ. 91 ರೋಗಿಗಳು ಚಿಕಿತ್ಸೆ ಫಲಕಾರಿಯಾಗಿ ಮನೆಗೆ ಮರಳುತ್ತಿದ್ದು ಜಿಲ್ಲೆಯ ವೈದ್ಯ-ಸಿಬ್ಬಂದಿ ಕರ್ತವ್ಯ ಪ್ರಜ್ಞೆ, ಸೇವಾ ಬದ್ಧತೆ ಹಾಗೂ ಜನರಲ್ಲಿ ರೋಗ ನಿರೋಧಕ ಶಕ್ತಿ ಹಾಗೂ ಚಿಕಿತ್ಸೆಗೆ ಸಿಗುತ್ತಿರುವ ಸ್ಪಂದನೆಯಂಥ ಕಾರಣಗಳಿಂದಾಗಿ ಕೋವಿಡ್‌ವಿರುದ್ಧದ ಹೋರಾಟದಲ್ಲಿ ಬಸವನಾಡು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ರೋಗಿಗಳಲ್ಲಿ ರೋಗನಿರೋಧ ಶಕ್ತಿಹೆಚ್ಚಿರುವುದು ಹಾಗೂ ಚಿಕಿತ್ಸೆಗೆ ರೋಗಿಗಳ ಸ್ಪಂದನೆ ಸಿಗುತ್ತಿದೆ. ಜನರಲ್ಲಿ ರೋಗದ ಕುರಿತುಜಾಗೃತಿ, ತ್ವರಿತ-ಹೆಚ್ಚು ಸಂಖ್ಯೆಯ ಪರೀಕ್ಷೆ, ಸೋಂಕಿತರು ಪತ್ತೆಯಾಗುತ್ತಲೇ ತುರ್ತುಚಿಕಿತ್ಸೆ ನೀಡುವ ಕ್ರಮಗಳಿಂದಾಗಿ ಜಿಲ್ಲೆಯಲ್ಲಿಸೋಂಕು ವ್ಯಾಪಕ ಹರಡುವಿಕೆ ತಡೆಯುವಲ್ಲಿ ಸಹಕಾರಿ ಆಗಿದೆ. ಇದ್ಲಲದೇ ಲಕ್ಷಣ ರಹಿತ ಸೋಂಕಿತರಿಗೆ 4 ತಿಂಗಳ ಹಿಂದೆಯೇ ಹೋಂಐಸೋಲೇಷನ್ ಆರಂಭಿಸಿದ್ದು ಆಸ್ಪತ್ರೆಗಳ ಮೇಲೆ ಒತ್ತಡ ತಗ್ಗಿಸಿದೆ.
Related Articles
Advertisement
ಇವರೆಗೆ 9,441 ಸೋಂಕಿತರು ಗುಣಮುಖ : ವಿಜಯಪುರ ಜಿಲ್ಲೆಯಲ್ಲಿ ಏಪ್ರಿಲ್ 12ರಂದು ಕೋವಿಡ್ ಸೋಂಕಿತ ಮೊದಲ ಪ್ರಕರಣ ವರದಿಯಾಗಿತ್ತು. ಅ. 9ರವರೆಗೆ1,16,226 ಜನರ ಗಂಟಲು ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 1,14,476 ಜನರ ವರದಿ ಬಂದಿದ್ದು, 1,620 ವರದಿ ನಿರೀಕ್ಷೆಯಲ್ಲಿವೆ. ಬಂದಿರುವವರದಿಗಳಲ್ಲಿ 1,04,060 ಜನರವರದಿ ನೆಗೆಟಿವ್ ಇದೆ. 10,546ಜನರಲ್ಲಿ ಕೋವಿಡ್ ಸೋಂಕುದೃಢಪಟ್ಟಿದ್ದು, ಗುಣಮಟ್ಟದ ಚಿಕಿತ್ಸೆಯ ಕಾರಣದಿಂದ 9,441 ಜನರು ರೋಗದಿಂದ ಸಂಪೂರ್ಣ ಗುಣಮುಖರಾಗಿ ಮನೆಗೆಮರಳಿದ್ದಾರೆ. ಹಲವು ಕಾಯಿಲೆಇದ್ದರೂ ವೃದ್ಧೆಯಾಗಿದ್ದ ಮೊದಲ ಸೋಂಕಿತೆ ರೋಗ ಮುಕ್ತವಾಗಿಮನೆಗೆ ಮರಳಿರುವುದು ಗಮನೀಯ. ಇದೀಗ 933 ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದು ಆಸ್ಪತ್ರೆಯಲ್ಲಿ 458, ಕೋವಿಡ್ ಕೇರ್ ಕೇಂದ್ರದಲ್ಲಿ 21 ಹಾಗೂ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ 454 ಸೋಂಕಿತರು ಸೇರಿದ್ದಾರೆ. ಈವರೆಗೆ 1,04,540ಜನರು ಕ್ವಾರಂಟೈನ್‌ಮುಗಿಸಿದ್ದು 1896 ಜನರು ಕ್ವಾರಂಟೈನ್ ನಿಗಾದಲ್ಲಿದ್ದಾರೆ.
ಮ್ಯಾಜಿಕ್ ಮಾಡುತ್ತಿಲ್ಲ. ಸೋಂಕಿತರು ಹಾಗೂ ಅವರ ಸಂಪರ್ಕಿತರ ಪತ್ತೆ, ಗಂಟಲು ದ್ರವ ಪರೀಕ್ಷೆ ಹೆಚ್ಚಳ,ನಿತ್ಯವೂ ತಹಶೀಲ್ದಾರರು, ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಸಮಗ್ರಮಾಹಿತಿ ಪಡೆಯುವುದು, ಲೋಪ ತಿದ್ದುವಂಥ ಕೆಲಸಮಾಡಲಾಗುತ್ತಿದೆ. ವೈದ್ಯ-ಸಿಬ್ಬಂದಿ ಬದ್ಧತೆ ಸೇವೆಯಿಂದ ರಾಜ್ಯದಲ್ಲಿ ವಿಜಯಪುರ ಜಿಲ್ಲೆ ಕೋವಿಡ್ ನಿಯಂತ್ರಣದ ಹಲವು ವಿಭಾಗಗಳಲ್ಲಿ ಮುಂಚೂಣಿಯಲ್ಲಿದೆ. -ಪಿ.ಸುನೀಲಕುಮಾರ ಜಿಲ್ಲಾಧಿಕಾರಿ, ವಿಜಯಪುರ
ಕೋವಿಡ್ ವಿರುದ್ಧದ ಹೋರಾಟದಲ್ಲಿ ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮಗಳು, ಸರ್ಕಾರದ ಮಾರ್ಗಸೂಚಿ ಜತೆಗೆ ಸ್ಥಾನಿಕ ಪರಿಸ್ಥಿತಿಗೆ ತಕ್ಕಂತೆ ಕೈಗೊಂಡ ನಿರ್ಧಾರಗಳು ವಿಜಯಪುರ ಜಿಲ್ಲೆಯಲ್ಲಿ ಸೋಂಕು ನಿಗ್ರಹಕ್ಕೆ ಕಾರಣವಾಗಿದೆ. ಇದಲ್ಲದೇ ಕಳೆದ ಮೂರು ತಿಂಗಳಿಂದ ಸೋಂಕಿತರಿಗೆ ತುರ್ತಾಗಿ ನೀಡುತ್ತಿರುವ ರೆಮಿಡಿಸಿವಿರ್ ಇಂಜಕ್ಷನ್ ಉತ್ತಮ ಫಲಿತಾಂಶ ನಿಡಿದೆ. ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗುಣಮುಖರಾಗಿ ಮನೆಗೆ ಮರಳಲು ಹಾಗೂ ಸಾವಿನ ಪ್ರಮಾಣ ಶೂನ್ಯದ ಹಂತಕ್ಕೆ ತರಲು ಕಾರಣವಾಗಿದೆ. -ಡಾ| ಮಲ್ಲನಗೌಡ ಬಿರಾದಾರ ಕೋವಿಡ್ ನಿಯಂತ್ರಣ- ಜಿಲ್ಲಾ ಸರ್ವೇಕ್ಷಣಾಧಿಕಾರಿ, ವಿಜಯಪುರ
ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆ ಕೋವಿಡ್ ಸಂದರ್ಭದಲ್ಲಿ ಮಾತ್ರವಲ್ಲ, ಇತರೆ ದಿನಗಳಲ್ಲೂ ಉತ್ತಮ ಗುಣಮಟ್ಟದ ಸೇವೆ ಹಾಗೂ ಸ್ವತ್ಛತೆಗೆ ಆದ್ಯತೆ ನೀಡುತ್ತಿದ್ದು ರಾಜ್ಯದಲ್ಲೇ ಮಾದರಿ ಆಸ್ಪತ್ರೆ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. 2015-16ರಲ್ಲಿ ಪ್ರಧಾನ ಮತ್ರಿಗಳಕಾಯಕಲ್ಪ ಪ್ರಶಸ್ತಿ, 2018 ಎನ್‌ಕ್ಯುಎಎಸ್ ಮೊದಲ ಪ್ರಶಸ್ತಿ ಪಡೆದಿದೆ. ಪ್ರಸಕ್ತ ವರ್ಷ ಕೂಡ ಶಿವಮೊಗ್ಗ ಜಿಲ್ಲೆಯೊಂದಿಗೆ ದ್ವಿತೀಯ ಸ್ಥಾನದ ಪ್ರಶಸ್ತಿಗೆ ಭಾಜನವಾಗಿದ್ದು, ಜಿಲ್ಲೆಯ ಸರ್ಕಾರಿ ವೈದ್ಯಕೀಯ ಗುಣಮಟ್ಟದ ಸೇವೆಗೆ ಸಾಕ್ಷಿ -ಡಾ| ಶರಣಪ್ಪ ಕಟ್ಟಿ, ಶಸ್ತ್ರ ಚಿಕಿತ್ಸಕರು ಸರ್ಕಾರಿ ಜಿಲ್ಲಾಸ್ಪತ್ರೆ, ವಿಜಯಪುರ
-ಜಿ.ಎಸ್. ಕಮತರ