Advertisement
ಬುಧವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಜಿಲ್ಲೆಗೆ ದಿಢೀರ್ ಪ್ರವಾಸ ಆರಂಭಿಸಿ, ಅನಿರೀಕ್ಷಿತ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದಾಗ ದುಷ್ಕೃತ್ಯ ಬಯಲಾಗಿದೆ.
Related Articles
Advertisement
ಅಕ್ರಮವಾಗಿ ಭ್ರೂಣಹತ್ಯೆಯ ಕೃತ್ಯ ಬಯಲಾಗುತ್ತಲೇ ಜಿಲ್ಲೆಯ ಎಲ್ಲ ತಾಲೂಕಾಧಿಕಾರಿಗಳು, ಪಿಸಿಪಿಎನ್‌ಡಿಟಿ ಅಧಿಕಾಗಳ ತುರ್ತು ಸಭೆ ಕರೆಯುವಂತೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಭೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಭ್ರೂಣಹತ್ಯೆ ಕೃತ್ಯದ ಸ್ಥಳಕ್ಕೆ ದಾಳಿ ನಡೆಸುವ ವೇಳೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಂಬಾರ, ತಾಲೂಕು ಆರೋಗ್ಯ ಅಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಘಟನೆಗೆ ಸಂಬಂಧಿಸಿದಂತೆ ಈಗಾಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ನರ್ಸ್ ಗಳನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಕರ್ನಾಟಕ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಭೆ ಉದಯವಾಣಿ ಗೆ ಮಾಹಿತಿ ನೀಡಿದ್ದಾರೆ.