Advertisement

Vijayapura; ನಾಗಠಾಣದಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ರೋಚಕ ಸ್ಪರ್ಧೆ

06:03 PM Aug 06, 2024 | keerthan |

ವಿಜಯಪುರ: ಜಾತ್ರಾ ಮಹೋತ್ಸವದಲ್ಲಿ ಸಾಹಸ ಸ್ಪರ್ಧೆಗಳು ನಡೆಯುವುದು ಸಾಮಾನ್ಯ. ಆದರೆ ಈ ಊರಿನ ಜಾತ್ರೆಯಲ್ಲಿ ಹಗ್ಗ ಜಗ್ಗಾಟದ ಮಾದರಿಯಲ್ಲಿ ಟ್ರ್ಯಾಕ್ಟರ್ ಜಗ್ಗಾಟದ ರೋಮಾಂಚಕಾರಿ ಸ್ಪರ್ಧೆ ಆಯೋಜಿಸಿ ಹುಬ್ಬೇರಿಸುವಂತೆ ಮಾಡಿದ್ದಾರೆ.

Advertisement

ವಿಜಯಪುರ ತಾಲೂಕಿನ ನಾಗಠಾಣ ಗ್ರಾಮದ ಗೂಳಪ್ಪ ಮುತ್ಯಾನ ಜಾತ್ರೆಯಲ್ಲಿ ಈ ಮೈನವಿರೇಳಿಸುವ ರೋಚಕ ಟ್ರ್ಯಾಕ್ಟರ್ ಜಗ್ಗಾಟದ ಸ್ಪರ್ಧೆ ನಡೆದಿದೆ.

ನಾಗರ ಪಂಚಮಿ ನಿಮಿತ್ತ ಗೂಳಪ್ಪ ಮುತ್ಯಾನ ಜಾತ್ರೆಗಾಗಿ ಭಂಡಾರ ಎರಚುವ ಅಡ್ಡಪಲ್ಲಕ್ಕಿ ಉತ್ಸವ ನಡೆಯುತ್ತದೆ.

ಈ ಹಬ್ಬದ ನಿಮಿತ್ತ ಜಂಬಗಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಟ್ರ್ಯಾಕ್ಟರ್ ಸ್ಪರ್ಧೆಗಾಗಿ ರಸ್ತೆಯ ಇಕ್ಕೆಲಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಬ್ಬಿಣದ ಬ್ಯಾರಿಕೇಡ್ ಅಳವಡಿಸಾಗಿತ್ತು. 4.5 ಟನ್ ಸಾಮರ್ಥ್ಯದ ಟ್ರ್ಯಾಕ್ಟರ್ ಗಳನ್ನು ಮಾತ್ರ ಸ್ಪರ್ಧೆಗೆ ಬಳಸಲು ಅವಕಾಶ ನೀಡಲಾಗಿತ್ತು.

Advertisement

ಟ್ರ್ಯಾಕ್ಟರಗಳ ಹಿಂಭಾಗದಲ್ಲಿ ಕಬ್ಬಿಣದ ಅ್ಯಂಗಲ್ ನಿಂದ ಬಿಗಿಯಾಗಿ ಕಟ್ಟಲಾಗುತ್ತದೆ. ಬಳಿಕ ಎರಡೂ ಟ್ರ್ಯಾಕ್ಟರಗಳ ಚಾಲಕರು ಪರಸ್ಪರ ಮುನ್ನಡೆಸುವ ಸಂದರ್ಭದಲ್ಲಿ ಅತಿಯಾದ ಎಕ್ಸಲೇಟರ್ ಕೊಟ್ಟು ಬ್ರೇಕ್ ಹಾಕಿ ಮುನ್ನಡೆಸುವುದರಿಂದ ಟ್ರ್ಯಾಕ್ಟರ್ ಮುಂಭಾಗ ಮೇಲೇಳುತ್ತದೆ.

ಈ ಹಂತದಲ್ಲಿ ಚಾಲಕರ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಗಳು ಪಲ್ಟಿಯಾಗುವ ಅಪಾಯವೂ ಇರುತ್ತದೆ. ಹೀಗಾಗಿ ರೋಮಾಂಚಕಾರಿ ಸ್ಪರ್ಧೆ ವೀಕ್ಷಿಸಲು ಸೇರುವ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಸ್ಪರ್ಧೆ ನಡೆಯುವ ರಸ್ತೆಯ ಎರಡೂ ಬದಿಗೆ ಕಬ್ಬಿಣದ ಬ್ಯಾರಿಕೇಡ್ ಅಳವಡಿಸಲಾಗಿತ್ತು.

ಟ್ರ್ಯಾಕ್ಟರ್ ಜಗ್ಗಾಟದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next