Advertisement

ಪಡಿತರ ಧಾನ್ಯ ಕಾಳಸಂತೆಯಲ್ಲಿ ಮಾರಿದರೆ-ಖರೀದಿಸಿದರೆ ಜೈಲು

01:34 PM May 08, 2020 | Naveen |

ವಿಜಯಪುರ: ಲಾಕ್‌ಡೌನ್‌ ಸಮಯದಲ್ಲಿ ಸಾರ್ವಜನಿಕರು, ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳ ಕೊರತೆ ಆಗದಂತೆ ಏಪ್ರಿಲ್‌-ಮೇ ತಿಂಗಳ ಪಡಿತರ ಹಂಚಲಾಗಿದೆ. ಹೀಗೆ ಹಂಚಿದ ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರುತ್ತಿರುವ ಬಗ್ಗೆ ದೂರು ಬಂದಿವೆ. ಒಂದೊಮ್ಮೆ ಪಡಿತರ ಧಾನ್ಯ ಮಾರಿದ್ದು ಕಂಡು ಬಂದಲ್ಲಿ ಮಾರಿದ ಹಾಗೂ ಖರೀದಿಸಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಪಡಿತರ ಚೀಟಿ ರದ್ದು ಮಾಡಿ ಜೈಲು ಶಿಕ್ಷೆ ವಿಧಿಸುವುದಾಗಿ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಎಚ್ಚರಿಸಿದ್ದಾರೆ.

Advertisement

ಏಪ್ರಿಲ್‌ ತಿಂಗಳಲ್ಲಿ ಬಿಪಿಎಲ್‌ ಕಾರ್ಡ್‌ದಾರರಿಗೆ ಪ್ರತಿ ಯೂನಿಟ್‌ಗೆ 10 ಕೆಜಿ ಅಕ್ಕಿ ಹಾಗೂ ಪ್ರತಿ ಕಾರ್ಡ್‌ಗೆ 4 ಕೆಜಿ ಗೋಧಿ ವಿತರಿಸಲಾಗಿದೆ. ಅಂತ್ಯೋದಯ-ಅನ್ನ ಯೋಜನೆ ಕಾರ್ಡ್‌ದಾರರ ಪ್ರತಿ ಕಾರ್ಡಿಗೆ ಉಚಿತವಾಗಿ 70 ಕೆಜಿ ಅಕ್ಕಿ ವಿತರಿಸಲಾಗಿದೆ. ಮೇ ತಿಂಗಳಿನಲ್ಲಿ ಪ್ರಧಾನಮಂತ್ರಿ ಗರೀಬ ಕಲ್ಯಾಣ ಯೋಜನೆಯಡಿ ಬಿಪಿಎಲ್‌ ಮತ್ತು ಅಂತ್ಯೋದಯ ಕುಟುಂಬಗಳಿಗೆ ಪ್ರತಿ ಯೂನಿಟ್‌ ಗೆ 10 ಕೆಜಿ ಅಕ್ಕಿ, ಪ್ರತಿ ಕಾರ್ಡ್‌ಗೆ 1 ಕೆಜಿ ತೊಗರಿಬೇಳೆ ವಿತರಿಸಲಾಗುತ್ತಿದೆ. ಈ ಆಹಾರಧಾನ್ಯವನ್ನು ಕೆಲವರು ಕಾಳಸಂತೆಯಲ್ಲಿ ಮಾರುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ ಕಾರ್ಡ್‌ದಾರರು, ನ್ಯಾಯಬೆಲೆ ಅಂಗಡಿದಾರರು ಸರ್ಕಾರದಿಂದ ಉಚಿತವಾಗಿ ಪಡೆದ ಆಹಾರಧಾನ್ಯ ಕಾಳಸಂತೆಯಲ್ಲಿ ಅಥವಾ ಇತರೆ ಯಾವುದೇ ವ್ಯಕ್ತಿಗಳಿಗೆ ಮಾರಾಟ ಮಾಡಿದಲ್ಲಿ ಮಾರಿದ-ಖರೀದಿಸಿದ ವ್ಯಕ್ತಿಗಳ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರಡಿ ಕ್ರಮ ಜರುಗಿಸಲಾಗುವುದು. ಇದಲ್ಲದೇ ಪಡಿತರ ಚೀದಿ ರದ್ದು ಮಾಡಿ ಏಳು ವರ್ಷ ಜೈಲು ಶಿಕ್ಷೆ-ದಂಡ ವಿಧಿಸಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಸರ್ಕಾರ ವಿತರಿಸುತ್ತಿರುವ ಉಚಿತ ಪಡಿತರ ಆಹಾರಧಾನ್ಯ ಮಾರಾಟ ಮಾಡುವ ಪಡಿತರ ಚೀಟಿದಾರರು, ಖರೀದಿದಾರರು ಹಾಗೂ ಸಂಗ್ರಹಣೆ ಮಾಡುವವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಾರ್ವಜನಿಕರು ದೂ: 08352-250419ಗೆ ಕರೆ ಮಾಡಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next